Advertisement
ಶನಿವಾರ ಹೆಚ್ಚು ಪ್ರಮಾಣದಲ್ಲಿ ಹಿಮವರ್ಷವಾಗಿದ್ದರಿಂದಾಗಿ ಸಿಕ್ಕಿಂನ ನಾಥುಲಾ ಬಳಿಯ ಜವಹರಲಾಲ್ ನೆಹರು ರಸ್ತೆ ಸಂಪೂರ್ಣವಾಗಿ ಹಿಮಾವೃತವಾಗಿದೆ. ಪ್ರವಾಸಿಗರ ವಾಹನ ಸಂಚಾರಕ್ಕೆ ತಡೆಯಾಗಿದೆ. 120 ವಾಹನಗಳಲ್ಲಿದ್ದ 1,027 ಪ್ರವಾಸಿಗರು ರಸ್ತೆಯಲ್ಲೇ ಸಿಲುಕಿದ್ದು, ಕೊರೆವ ಚಳಿಯಲ್ಲಿ ಕಾರಿನಿಂದ ಕೆಳಗಿಳಿಯಲೂ ಆಗದೆ ಒದ್ದಾಡಿದ್ದಾರೆ. ಅವರನ್ನು ಭಾರತೀಯ ಸೇನೆಯ ಯೋಧರು ರಕ್ಷಿಸಿದ್ದು, ಅಲ್ಲಿಂದ 17 ಮೈಲು ದೂರವಿರುವ ಸೇನೆಯ ಕ್ಯಾಂಪ್‌ಗೆ ಕರೆದೊಯ್ದು ಅಲ್ಲಿಯೇ ವಸತಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಭಾನುವಾರ ಅವರನ್ನು ಗ್ಯಾಂಗ್ಟಕ್‌ಗೆ ಕಳುಹಿಸಿಕೊಡಲಾಗಿದೆ. ನಾಥುಲಾ ಪ್ರದೇಶದಲ್ಲಿ ಭಾನುವಾರ ಮೈನಸ್ 8 ಡಿಗ್ರಿ ಸೆ. ಉಷ್ಣಾಂಶ ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಶನಿವಾರ ರಾತ್ರಿ ಉಷ್ಣಾಂಶ ಅತ್ಯಂತ ಕಡಿಮೆಯಾಗಿದ್ದು, ಜನರು ಚಳಿಯಿಂದ ಪರದಾಡುವಂತಾಗಿತ್ತು. ಶ್ರೀನಗರದಲ್ಲಿ ಉಷ್ಣಾಂಶ ಮೈನಸ್ 1.8 ಡಿಗ್ರಿಗೆ ತಲುಪಿತ್ತು. ಕಜಿಗುಂದ್‌ನಲ್ಲಿ ಮೈನಸ್ 1.2 ಡಿಗ್ರಿ, ಕುಪ್ವಾರದಲ್ಲಿ ಮೈನಸ್ 1.5 ಡಿಗ್ರಿ, ಕೊಕೆರಂಗ್‌ನಲ್ಲಿ ಮೈನಸ್ 0.2 ಡಿಗ್ರಿ ಉಷ್ಣಾಂಶ ವರದಿಯಾಗಿದೆ. ಗುಲ್ಮರ್ಗ್‌ನಲ್ಲಿ ಮೈನಸ್ 7.5ಡಿಗ್ರಿ, ಅಮರನಾಥ ಯಾತ್ರೆ ಬೇಸ್ ಕ್ಯಾಂಪ್ ಆಗಿರುವ ಪಹಲ್ಗಮ್‌ನಲ್ಲಿ ಮೈನಸ್ 3.8 ಡಿಗ್ರಿ ಉಷ್ಣಾಂಶ ವರದಿಯಾಗಿದೆ. ಇದನ್ನೂ ಓದಿ : ಮಂಗಳೂರು : ಬಸ್ ಸಿಬ್ಬಂದಿಗಳ ಈ ಕಾರ್ಯಕ್ಕೆ ಪೊಲೀಸ್ ಆಯುಕ್ತರಿಂದ ಶ್ಲಾಘನೆ