Advertisement

ಗೋವಾಕ್ಕೆ ಬರುವ ಪ್ರವಾಸಿಗರು ಕೂಡ ಕಾನೂನು ಪಾಲಿಸಬೇಕು : ಸಿಎಂ ಸಾವಂತ್

04:45 PM Mar 15, 2023 | Team Udayavani |

ಪಣಜಿ: ”ಗೋವಾದ ಹಣಜುಣದಲ್ಲಿ ಪ್ರವಾಸಿ ಕುಟುಂಬದ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಹಾಗೂ ಪೊಲೀಸರ ನಿರ್ಲಕ್ಷ್ಯದಿಂದ ರಾಜ್ಯಕ್ಕೆ ದೇಶಾದ್ಯಂತ ಅಪಖ್ಯಾತಿಯಾಗುತ್ತಿದೆ. ಗೋವಾ ರಾಜ್ಯವು ಪ್ರವಾಸಿಗರಿಗೆ ಸುರಕ್ಷಿತವಾಗಿದೆ ಮತ್ತು ಪ್ರವಾಸೋದ್ಯಮಕ್ಕೆ ಧಕ್ಕೆ ತರುವವರ ಕೃತ್ಯ ಸಹಿಸಲಾಗುವುದಿಲ್ಲ. ಪ್ರವಾಸಿಗರು ಕೂಡ ಕಾನೂನು ಪಾಲಿಸಬೇಕು” ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದ್ದಾರೆ.

Advertisement

ಮುಖ್ಯಮಂತ್ರಿಗಳು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಗೃಹ, ಕಾರ್ಮಿಕ ಮತ್ತು ಪ್ರವಾಸೋದ್ಯಮ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಘಟನೆಯ ಸಂಪೂರ್ಣ ತನಿಖೆಯ ನಂತರ ದಾಳಿಕೋರನ ವಿರುದ್ಧ ಕೊಲೆ ಯತ್ನದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿ ಎಂಟು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಇಂತಹ ಘಟನೆಗಳನ್ನು ತಡೆಯಲು ಪ್ರವಾಸೋದ್ಯಮ ಪೂರಕ ವೃತ್ತಿಪರರು ಜಾಗೃತರಾಗಬೇಕು. ರಾಜ್ಯದಲ್ಲಿ ಅಕ್ರಮ ವ್ಯವಹಾರಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸ್ಥಳೀಯರು ಅಥವಾ ಪ್ರವಾಸಿಗರನ್ನು ನಿರ್ಲಕ್ಷಿಸಲಾಗುವುದಿಲ್ಲ. ಗೋವಾದ ಹಣಜುಣ ಪ್ರಕರಣದಲ್ಲಿ, ಅಧಿಕಾರಿಯು ಸೆಕ್ಷನ್ 324 ರ ಬದಲಿಗೆ ಸೆಕ್ಷನ್ 307 ಅನ್ನು ಅನ್ವಯಿಸಬೇಕು.ಪ್ರವಾಸಿಗರು ಕೆಲವೊಮ್ಮೆ ತಪ್ಪುಗಳನ್ನು ಮಾಡುತ್ತಾರೆ. ಅಂತಹ ಸಂದರ್ಭಗಳಲ್ಲಿ, ಸಂಬಂಧಪಟ್ಟ ರೆಸಾರ್ಟ್ ಆಡಳಿತವು ಅದನ್ನು ಸೂಕ್ಷ್ಮವಾಗಿ ಮತ್ತು ಸರಿಯಾಗಿ ನಿರ್ವಹಿಸಬೇಕಾಗುತ್ತದೆ. ಹೋಟೆಲ್‍ಗಳಲ್ಲಿ ವಿದೇಶಿ ಕೆಲಸಗಾರರ ಹಿನ್ನೆಲೆಯನ್ನು ಪತ್ತೆ ಮಾಡಲು ಕಾರ್ಮಿಕ ಇಲಾಖೆ ಮತ್ತು ಪೊಲೀಸರ ಮೂಲಕ ಪರಿಶೀಲಿಸಬೇಕು. ಪ್ರವಾಸೋದ್ಯಮವನ್ನು ಉತ್ತೇಜಿಸಲು ಹೋಟೆಲ್ ಮಾಲೀಕರಿಗೆ ಸರ್ಕಾರ ಸಹಾಯ ಮಾಡಿದೆ. ಅನಧಿಕೃತ ಹೋಟೆಲ್ ದಂಧೆ ನಡೆಯುತ್ತಿದ್ದರೆ ಸಂಬಂಧಪಟ್ಟವರು ಕಾನೂನಿನ ವ್ಯಾಪ್ತಿಗೆ ಬರಬೇಕು. ಅಧಿಕೃತ ವೃತ್ತಿಪರರಿಗೆ ಎಲ್ಲಾ ಸೌಲಭ್ಯಗಳು ಮತ್ತು ಪೊಲೀಸ್ ರಕ್ಷಣೆಯನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

ಗೋವಾದಲ್ಲಿ ಪ್ರವಾಸಿಗರಿಗೆ ಸ್ವಾಗತವಿದೆ. ಅವರು ಕೂಡ ನಿಯಮಗಳು ಮತ್ತು ಕಾನೂನುಗಳಿಗೆ ಬದ್ಧರಾಗಿರಬೇಕು. ಗೋವಾದಲ್ಲಿ ಪ್ರವಾಸಿಗರು ಸೆಕ್ಯುರಿಟಿ ಗಾರ್ಡ್‍ಗೆ ಥಳಿಸಿರುವುದು ಸರಿಯಲ್ಲ. ಇಂತಹ ಘಟನೆಗಳು ನಡೆಯಬಾರದು.  ಯಾವುದೇ ದೂರು ನೀಡದೆ ಹೇಳಿಕೆ ನೀಡುವ ಮೂಲಕ ಗೋವಾದ ಅಪಖ್ಯಾತಿಗೆ ಒಳಗಾಗಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next