Advertisement

Goa ಅಭಯಾರಣ್ಯದಲ್ಲಿರುವ ಜಲಪಾತಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ

07:01 PM Jul 11, 2023 | Team Udayavani |

ಪಣಜಿ: ನೇತ್ರಾವಳಿ ಅಭಯಾರಣ್ಯದ ಮೈನಾಪಿ ಜಲಪಾತದಲ್ಲಿ ಭಾನುವಾರ ಇಬ್ಬರು ಮುಳುಗಿದ ಸಾವನ್ನಪ್ಪಿದ ಘಟನೆಯ ನಂತರ ಪ್ರವಾಸಿಗರ ಸುರಕ್ಷತೆಯ ಪ್ರಶ್ನೆ ಮತ್ತೊಮ್ಮೆ ಎದುರಾಗಿದೆ.

Advertisement

ಈ ಹಿನ್ನೆಲೆಯಲ್ಲಿ ಅಭಯಾರಣ್ಯದಲ್ಲಿರುವ ಎಲ್ಲಾ ಜಲಪಾತಗಳಿಗೆ ಪ್ರವಾಸಿಗರಿಗೆ ಅರಣ್ಯ ಇಲಾಖೆ ನಿಷೇಧ ಹೇರಿದೆ. ಇದರಿಂದಾಗಿ ಮುಂದಿನ ಆದೇಶ ಹೊರ ಬೀಳುವ ವರೆಗೂ ಗೋವಾದ ಅಭಯಾರಣ್ಯ ಭಾಗದಲ್ಲಿ ಬರುವ ಯಾವುದೇ ಜಲಪಾತದ ಬಳಿ ತೆರಳಲು ಪ್ರವಾಸಿಗರಿಗೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ.

ದಕ್ಷಿಣ ಗೋವಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನಿಕೇತ್ ಗಾಂವ್ಕರ್ ಅವರ ಪ್ರಕಾರ ಯಾವುದೇ ಭದ್ರತಾ ಕ್ರಮಗಳಿಲ್ಲದ ಎಲ್ಲಾ ಜಲಪಾತಗಳಲ್ಲಿ ಪ್ರವಾಸಿಗರಿಗೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಈ ಜಲಪಾತಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಲೈಫ್ ಜಾಕೆಟ್‍ಗಳನ್ನು ಒದಗಿಸಲು ಈಗ ಚಿಂತನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ನೀಡಿದರು.

ಮೈನಾಪಿ ಜಲಪಾತ ಅಪಘಾತದ ಬಗ್ಗೆ ಮಾತನಾಡಿದ ಗಾಂವ್ಕರ್  ವಾಸ್ತವವಾಗಿ, ಈ ಜಲಪಾತವು ಚಿಕ್ಕದಾಗಿದೆ ಮತ್ತು ಇಲ್ಲಿಯವರೆಗೆ ಯಾವುದೇ ಅಪಘಾತ ಸಂಭವಿಸಿಲ್ಲ. ಭಾನುವಾರ ಜಲಪಾತದಲ್ಲಿ ಇದ್ದಕ್ಕಿದ್ದಂತೆ ಜನಜಂಗುಳಿ ಉಂಟಾಗಿತ್ತು. ಮಳೆಯಿಂದಾಗಿ ಜಲಪಾತದ ನೀರಿನ ಮಟ್ಟ ಏಕಾಏಕಿ ಹೆಚ್ಚಾಯಿತು. 27 ವರ್ಷದ ಶಿವದತ್ತ ನಾಯ್ಕ ನೀರಿನಲ್ಲಿ ಮುಳುಗಿ ಮೃತಪಟ್ಟವರು. ಜನಾರ್ದನ್ ಸಾಡೇಕರ್ ಅವರನ್ನು ರಕ್ಷಿಸಲು ನೀರಿಗೆ ಹಾರಿದ್ದಾರೆ.

ಸೆಕ್ಯೂರಿಟಿ ಗಾರ್ಡ್ ನೀರಿಗೆ ಹಾರಿ ಹೊರಗೆ ಎಳೆದಾಗ ಅವರೂ ನೀರಿನಲ್ಲಿ ಮುಳುಗಿದ್ದಾರೆ.ನೀರಿಂದ ಅವರನ್ನು ಮೇಲೆತ್ತಿದಾಗ ಏಕಾಏಕಿ ಉಸಿರಾಟ ಸ್ಥಗಿತಗೊಂಡು ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ ಎಂದರು.

Advertisement

ಗೋವಾದ ದೂಧ್ ಸಾಗರ ಜಲಪಾತದ ಬಳಿ ಮಾತ್ರ ಜೀವರಕ್ಷಕ ದಳ…
ರಾಜ್ಯದಲ್ಲಿ ಹಲವಾರು ಜಲಪಾತಗಳಿವೆ. ಪ್ರವಾಸಿಗರು ಈ ಜಲಪಾತಗಳಿಗೆ ಭೇಟಿ ನೀಡುತ್ತಿದ್ದರೂ, ದೂಧ್ ಸಾಗರ ಜಲಪಾತವನ್ನು ಹೊರತುಪಡಿಸಿ ಯಾವುದೇ ಜಲಪಾತಗಳ ಬಳಿ ಜೀವರಕ್ಷಕರನ್ನು ನಿಯೋಜಿಸಲಾಗಿಲ್ಲ. ದೂಧ್ ಸಾಗರ ಜಲಪಾತದಲ್ಲಿ ಪ್ರವಾಸಿಗರಿಗೆ ಲೈಫ್ ಜಾಕೆಟ್‍ಗಳನ್ನು ನೀಡಲಾಗುತ್ತದೆ. ಮೈನಾಪಿ ಜಲಪಾತದ ಬಳಿ ನಡೆದ ಅಪಘಾತದ ಸ್ಥಳದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಮಾತ್ರ ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next