Advertisement

ವಾಷಿಂಗ್ಟನ್‌: ಟೂರಿಸ್ಟ್‌, ಬ್ಯುಸಿನೆಸ್‌ ವೀಸಾದಾರರಿಗೂ ಉದ್ಯೋಗ

11:01 PM Mar 23, 2023 | Team Udayavani |

ವಾಷಿಂಗ್ಟನ್‌: ಪ್ರವಾಸಿ ವೀಸಾ ಅಥವಾ ಬ್ಯುಸಿನೆಸ್‌ ವೀಸಾದಲ್ಲಿ ಅಮೆರಿಕಕ್ಕೆ ತೆರಳುವವರಿಗೆ ಅಲ್ಲಿನ ಸರ್ಕಾರ ಸ್ವಾಗತಾರ್ಹ ಸುದ್ದಿಯೊಂ­ದನ್ನು ನೀಡಿದೆ. ಇನ್ನು ಮುಂದೆ ಬಿ-1 ಮತ್ತು ಬಿ-2 ವೀಸಾದಲ್ಲಿ ಅಮೆರಿಕಕ್ಕೆ ಹೋದವರು ಕೂಡ ಅಲ್ಲಿ ಹೊಸ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ, ಸಂದರ್ಶ­ನ­ದಲ್ಲೂ ಭಾಗಿಯಾಗಬಹುದು ಎಂದು ಅಮೆರಿಕ ಸರ್ಕಾರ ಘೋಷಿಸಿದೆ.

Advertisement

ಐಟಿ ಕಂಪನಿಗಳ ಉದ್ಯೋಗ ಕಡಿತ ನಿರ್ಧಾರದಿಂದಾಗಿ ಭಾರತೀಯರು ಸೇರಿದಂತೆ ಅತ್ಯಧಿಕ ಕೌಶಲ್ಯವಿರುವ ಸಾವಿರಾರು ವಿದೇಶಿ ಉದ್ಯೋಗಿಗಳು ಉದ್ಯೋಗವಿಲ್ಲದೇ ಸಂಕಷ್ಟದಲ್ಲಿರುವಂಥ ಸಂದರ್ಭದಲ್ಲೇ ಈ ಘೋಷಣೆ ಹೊರಬಿದ್ದಿದೆ. ಈವರೆಗೆ ಬ್ಯುಸಿನೆಸ್‌ ಅಥವಾ ಟೂರಿಸ್ಟ್‌ ವೀಸಾದಲ್ಲಿ ಹೋದವರಿಗೆ ಅಲ್ಲಿ ಕೆಲಸ ಮಾಡಲು ಅವಕಾಶವಿರಲಿಲ್ಲ. ಆದರೆ, ಈಗ ಈ ನಿಯಮದಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಇಂಥ ವೀಸಾಗಳ ಮೂಲಕ ಅಮೆರಿಕಕ್ಕೆ ಹೋದವರು ಕೂಡ ಹೊಸ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ, ಸಂದರ್ಶನ ಎದುರಿಸಬಹುದು ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ವಿಭಾಗ ಹೇಳಿದೆ. ಆದರೆ, ಈ ರೀತಿ ಉದ್ಯೋಗ ಪಡೆದವರು ಹೊಸ ಕೆಲಸಕ್ಕೆ ಹಾಜರಾಗುವ ಮುನ್ನ ತಮ್ಮ ವೀಸಾ ಸ್ಟೇಟಸ್‌ ಅನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next