Advertisement

ಅಂಜನಾದ್ರಿ ಸುತ್ತಮುತ್ತಲ ಬೆಟ್ಟಗಳಲ್ಲಿ ಶಿಲಾರೋಹಣ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ 

11:14 AM Oct 27, 2021 | Team Udayavani |

ಗಂಗಾವತಿ : ಆನೆಗೊಂದಿ ಅಂಜನಾದ್ರಿ ಹಾಗೂ ಸುತ್ತಮುತ್ತಲಿನ ಬೆಟ್ಟ ಪ್ರದೇಶಗಳಲ್ಲಿ ಶಿಲಾರೋಹಣ ಸಾಹಸ ಕ್ರೀಡೆಗೆ ಹೇಳಿ ಮಾಡಿಸಿದ ಪ್ರದೇಶವಾಗಿತ್ತು ಇಲ್ಲಿಗೆ ಶಿಲಾರೋಹಣ ಮಾಡುವ ಸಾಹಸಿ ಪ್ರವಾಸಿಗರಿಗೆ ಪ್ರೋತ್ಸಾಹ ನೀಡುವಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಕ್ರೀಡಾ ಇಲಾಖೆ ಸೂಕ್ತ ಮಾರ್ಗದರ್ಶನ ಮತ್ತು ಪ್ರಚಾರ ಮಾಡಲಿವೆ.

Advertisement

ಸ್ವತಃ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಹಾಗೂ ಜಿಪಂ ಸಿಇಒ ತರನ್ನುಮ್ ಫೌಜಿಯಾ, ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಐಎಎಸ್ ಪ್ರೊಬೆಷನರಿ ಹೇಮಂತ್ ಕುಮಾರ್ ಬುಧವಾರ ತಾಲ್ಲೂಕಿನ ಸಣಾಪುರ ಹತ್ತಿರ ಇರುವ ಲೇಕ್ (ಕೆರೆ)ಸುತ್ತಲಿನ ಬೆಟ್ಟಗಳಲ್ಲಿ ಶಿಲಾರೋಹಣ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಶಿಲಾರೋಹಣ ಮಾಡಿದರು.
ಕರೋನಾ ಅ ಮಹಾಮಾರಿ ಗೂ ಮುಂಚೆ ವಿರುಪಾಪುರಗಡ್ಡಿ, ಋಷಿಮುಖ ಪರ್ವತ ,ಅಂಜನಾದ್ರಿ, ಜಂಗ್ಲಿ ,ಸಾಣಾಪುರ ಪ್ರದೇಶದಲ್ಲಿರುವ ಬೆಟ್ಟಗಳಲ್ಲಿ ದೇಶ ವಿದೇಶದ ಶಿಲಾರೋಹಣ ಸಾಹಸಿ ಪ್ರವಾಸಿಗರು ಈ ಪ್ರದೇಶದಲ್ಲಿ ಶಿಲಾರೋಹಣ ಮಾಡುತ್ತಿದ್ದರು .

ಇಲ್ಲಿ ಶಿಲಾರೋಹಣ ಮಾಡುವ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ನೀಡಲು ಅನೇಕ ಪ್ರವಾಸಿ ಗೈಡ್ ಗಳಿದ್ದು ಅವರು ಪ್ರವಾಸಿಗರಿಗೆ ರಾಕ್ ಕ್ಲೈಂಬಿಂಗ್ (ಶಿಲಾರೋಹಣ )ಬಗ್ಗೆ ಉಪಯುಕ್ತ ತರಬೇತಿ ಮತ್ತು ಮಾಹಿತಿಯನ್ನು ನೀಡುತ್ತಿದ್ದರು .ಕರೋನಾ ಮಹಾಮಾರಿಯ ಪರಿಣಾಮ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ವಿಶೇಷವಾಗಿ ಶಿಲಾರೋಹಣ ಮಾಡುವ ಪ್ರವಾಸಿಗರು ಇತ್ತೀಚೆಗೆ ಬರುತ್ತಿಲ್ಲ .ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಈ ಭಾಗದ ನಿರುದ್ಯೋಗಿ ಯುವಕರಿಗೆ ಪ್ರವಾಸಿ ಗೈಡ್ ತರಬೇತಿ ಕಾರ್ಯಾಗಾರ ಆಯೋಜನೆ ಮಾಡಿದ್ದು ಬುಧುವಾರ ಶಿಲಾರೋಹಣ ದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ಯುವಕರಿಗೆ ನೀಡಲಾಗುತ್ತಿದೆ .

ಇದನ್ನೂ ಓದಿ : ತಾಟಗೇರ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ

Advertisement

ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡು ಸ್ವತಃ ಶಿಲಾರೋಹಣ ಮಾಡುವ ಮೂಲಕ ಈ ಭಾಗದ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಿದರು .

ಮುಂಬರುವ ದಿನಗಳಲ್ಲಿ ಈ ಭಾಗದಲ್ಲಿ ಶಿಲಾರೋಹಣ (ರಾಕ್ ಕ್ಲೈಂಬಿಂಗ್) ಪ್ರವಾಸೋದ್ಯಮ ಪ್ರೋತ್ಸಾಹಿಸಲು ಜಿಲ್ಲಾಡಳಿತ ಅನೇಕ ಹೊಸ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ .

Advertisement

Udayavani is now on Telegram. Click here to join our channel and stay updated with the latest news.

Next