Advertisement

ಪ್ರವಾಸಿಗರ ಆಕರ್ಷಣೆಗೆ ಟೂರಿಸಂ ಹಬ್‌

07:50 PM Mar 08, 2021 | Adarsha |

ವಿಜಯಪುರ: ನಗರದ ಐತಿಹಾಸಿಕ ಸ್ಥಳಗಳ ಸಂರಕ್ಷಣೆ ಹಾಗೂ ಪ್ರವಾಸಿಗರ ಆಕರ್ಷಣೆಗಾಗಿ ಟೂರಿಸಂ ಹಬ್‌ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾ ಧಿಕಾರಿ ಪಿ.ಸುನೀಲಕುಮಾರ ಹೇಳಿದರು.

Advertisement

ನಗರದ ಮಧ್ಯಭಾಗದಲ್ಲಿರುವ ಆದಿಲಶಾಹಿ ಕಾಲದ ಐತಿಹಾಸಿಕ ತಾಣಗಳ ಸ್ವತ್ಛತೆ, ಸಂರಕ್ಷಣೆ ಮತ್ತು ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲಿಸಲು ರವಿವಾರ ಹೆರಿಟೇಜ್‌ ವಾಕ್‌ ನಡೆಸಿದ ಅವರು, ಖ್ವಾಜಾ ಜಹಾನ್‌ ಮಸೀದಿ-ಹಳೆ ಮಸೀದಿ ನಂ. 294, ಗಗನ್‌ ಮಹಲ್‌, ಆನಂದ ಮಹಲ್‌, ಸಿಎಸ್‌ಐ ಚರ್ಚ್‌, ಮೆಕ್ಕಾ ಮಸೀದಿ, ಚಿಂಚದೀದಿ ಮಸೀದಿ, ಪಸರಿ ಕಮಾನ್‌ ಐತಿಹಾಸಿಕ ತಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗಗನ್‌ ಮಹಲ್‌ಗೆ ಸ್ವತ್ಛತೆಗಾಗಿ ಕ್ರಮ ಕೈಗೊಳ್ಳಲು ಕಸ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಆನಂದ ಮಹಲ್‌ ಗೆ ಭೇಟಿ ನೀಡಿ ಪ್ರವಾಸಿಗರಿಗೆ ಐತಿಹಾಸಿಕ ಸ್ಮಾರಕಗಳು, ಇತಿಹಾಸದ ಬಗ್ಗೆ ತಿಳಿಯುವಂತಾಗಲು ಮೊದಲು ವ್ಯಾಖ್ಯಾನ ಕೇಂದ್ರ ಸ್ಥಾಪನೆ, ಪ್ರವಾಸಿ ತಾಣಗಳ ವ್ಯಾಪ್ತಿಯಲ್ಲಿ ಫುಡ್‌ ಕೋರ್ಟ್‌ ಇರುವುದು ಅತ್ಯಂತ ಅವಶ್ಯಕವಾಗಿದೆ ಎಂದರು.

ಉದ್ಯಾನವನ ನಿರ್ಮಿಸಿ, ಪಾಕಿಂìಗ್‌ ವ್ಯವಸ್ಥೆಗೂ ಗಮನ ನೀಡುವುದು ಮುಖ್ಯವಾಗಿದ್ದು ಈ ಕುರಿತು ಸಂಬಂ ಧಿಸಿದ ಅ ಧಿಕಾರಿಗಳು ಗಮನ ಹರಿಸಬೇಕು. ಮೆಕ್ಕಾ ಮದೀನಾ ಮಸೀದಿ ಹಿಂದಿನ ಭಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಮಸೀದಿ ಮುಂಭಾಗ ಉದ್ಯಾನವನ ನಿರ್ಮಿಸಿ ಮಾರ್ನಿಂಗ್‌ ವಾಕರ್ಸಗಳಿಗೆ ಅನುವು ಮಾಡಿಕೊಳ್ಳುವ ಅಗತ್ಯವಿದೆ. ಮಕ್ಕಳು ಆಟವಾಡಲು ಸಾಧನ-ಸಲಕರಣೆಗಳು ಒದಗಿಸಬೇಕು ಎಂದು ಹೇಳಿದರು.

ಮಹಿಳೆಯರ ಮಸೀದಿ ಇದಾಗಿದ್ದು ಐತಿಹಾಸಿಕ ಸ್ಮಾರಕಗಳ ಛಾಯಾಚಿತ್ರದೊಂದಿಗೆ ಉತ್ತಮ ದಾಖಲೀಕರಣಗೊಳಿಸಲಾಗಿದೆ. ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಅವರು ಈಗಾಗಲೇ ಮೆಕ್ಕಾ ಮಸೀದಿ ಮುಂಭಾಗ ಸ್ವತ್ಛಗೊಳಿಸಿ ಅತಿಕ್ರಮಣಗೊಂಡ ಕಟ್ಟಡಗಳನ್ನು ತೆರವುಗೊಳಿಸಿದೆ. ಅದರಂತೆ ಸ್ವತ್ಛಗೊಳಿಸಲಾಗಿದೆ. ಉದ್ಯಾನವನ ನಿರ್ಮಿಸುವುದರಿಂದ ಸಾರ್ವಜನಿಕರಿಗೆ ನೆರವಾಗಲಿದೆ ಎಂದರು.

Advertisement

ಐತಿಹಾಸಿಕ ತಾಣಗಳಿಗೆ ನೀರು ಪೂರೈಸುವ ಯೋಜನೆಯ ಖರ್ಚು ವೆಚ್ಚ ವರದಿ ಸಿದ್ಧಪಡಿಸಲಾಗುತ್ತಿದ್ದು, ಗೋಲಗುಮ್ಮಟವರೆಗೆ ನೀರು ಸರಬರಾಜು ಮಾಡುವ ಕುರಿತು ಧಾರವಾಡ ಪುರಾತತ್ವ ಸರ್ವೇಕ್ಷಣ ಇಲಾಖೆ ಕಚೇರಿಯೊಂದಿಗೆ ಪತ್ರ ವ್ಯವಹಾರ ನಡೆಸಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು. ಇವುಗಳ ವ್ಯಾಪ್ತಿಯಲ್ಲಿ ಇರುವ ತೋಟಗಾರಿಕೆ ಕಚೇರಿಯನ್ನು ಪ್ರವಾಸೋದ್ಯಮ ಇಲಾಖೆ ಸ್ಥಳಕ್ಕೆ ಹಾಗೂ ಪ್ರವಾಸೋದ್ಯಮ ಇಲಾಖೆಯನ್ನು ಈ ಸ್ಥಳಕ್ಕೆ ಸ್ಥಳಾಂತರಿಸಿ ಟೂರಿಸಂ ಹಬ್‌ಗ ಸೂಕ್ತ ಗಮನ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಚಿಂಚ್‌ ದೀದಿ ಮಸೀದಿ, ಖ್ವಾಜಾ ಮಸೀದಿ ಹಾಗೂ ಕಮಾನ್‌ ಪರಿಶೀಲಿಸಿದ ಅವರು ಕೋಟೆ ಮೇಲೆ ಬೆಳೆದ ಗಿಡಗಂಟೆಗಳನ್ನು ತೆಗೆದು, ಶುಚಿಗೊಳಿಸಲು ಪ್ರಯತ್ನಿಸಬೇಕು. ಅಸಾರ್‌ ಮಹಲ್‌ ಪಕ್ಕದಲ್ಲಿ ತ್ಯಾಜ್ಯ ಹಾಗೂ ಕಸ ಚೆಲ್ಲುವುದನ್ನು ನಿಯಂತ್ರಿಸಬೇಕು. ಪಸರಿ ಕಮಾನ್‌ ವ್ಯಾಪ್ತಿಯಲ್ಲಿ ಅನ  ಧಿಕೃತವಾಗಿ ವಾಹನಗಳ ನಿಲುಗಡೆಯನ್ನು ನಿಯಂತ್ರಿಸಿ, ಸ್ಮಾರಕಗಳನ್ನು ಸಂರಕ್ಷಿಸಬೇಕು. ಈ ಪ್ರದೇಶ ವ್ಯಾಪ್ತಿಯಲ್ಲಿ ಸ್ವತ್ಛತೆಗೆ ಗಮನ ನೀಡಬೇಕು ಎಂದು ಅ ಧಿಕಾರಿಗಳಿಗೆ ಸೂಚಿಸಿದರು. ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ನಗರ ಯೋಜನಾ ನಿರ್ದೇಶಕರು, ಉಪ ವಿಭಾಗಾ ಧಿಕಾರಿ ಬಲರಾಮ ಲಮಾಣಿ, ಪುರಾತತ್ವ ಇಲಾಖೆ ಹಿರಿಯ ಸಂರಕ್ಷಣಾ ಧಿಕಾರಿ ಪ್ರಮೋದ,  ಕಿರಿಯ ಸಂರಕ್ಷಣಾಧಿ ಕಾರಿ ರಾಕೇಶ ಹಾಗೂ ಕ್ರೀಡಾ ಧಿಕಾರಿ ಎಸ್‌.ಜಿಲೋಣಿ ಸೇರಿದಂತೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next