Advertisement

ಬೀಚ್‌ಗಳು ಸ್ವಚ್ಛವಾದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ: ಜಿಲ್ಲಾಧಿಕಾರಿ

11:53 PM Sep 21, 2019 | Sriram |

ಮಲ್ಪೆ: ಬೀಚ್‌ಗಳನ್ನು ಸ್ವಚ್ಛವಾಗಿಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಿ, ಪ್ರವಾಸೋದ್ಯಮವನ್ನು ಉತ್ತಮ ರೀತಿಯಲ್ಲಿ ಅಭಿವೃದ್ದಿಪಡಿಸಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಜಗದೀಶ್‌ ಹೇಳಿದರು.

Advertisement

ಶನಿವಾರ ಮಲ್ಪೆ ಬೀಚ್‌ನಲ್ಲಿ ಉಡುಪಿ ಕರಾವಳಿ ಕಾವಲು ಪೋಲಿಸ್‌ ವತಿಯಿಂದ ಕೋಸ್ಟ್‌ ಗಾರ್ಡ್‌ ಮಂಗಳೂರು, ಉಡುಪಿ ನಗರಸಭೆ ಹಾಗೂ ವಿವಿಧ ಇಲಾಖೆ, ಕಾಲೇಜು ಗಳ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ಬೀಚ್‌ ಸ್ವಚ್ಛತಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೀಚ್‌ಗಳು ಸ್ವಚ್ಛವಾಗಿದ್ದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ, ಆ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೊಳ್ಳಲಿದ್ದು, ಸ್ಥಳೀಯರಿಗೆ ಹೆಚ್ಚಿನ ಆರ್ಥಿಕ ಅಭಿವೃದ್ದಿಯೂ ಸಾಧ್ಯ ಎಂದರು.

ಪ್ಲಾಸ್ಟಿಕ್‌ಮುಕ್ತ ನಗರಕ್ಕೆ ಕ್ರಮ
ಪೌರಾಯುಕ್ತ ಆನಂದ್‌ ಕಲ್ಲೋಳಿಕರ್‌ ಮಾತನಾಡಿ, ಸ್ವಚ್ಛತೆಯ ಕುರಿತು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್‌ ನಿಷೇಧವನ್ನೂ ಸಹ ಕಟ್ಟುನಿಟ್ಟಾಗಿ ಪಾಲಿಸುತಿದ್ದು,
ಉಡುಪಿ ನಗರವನ್ನು ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

1.5ಕಿ.ಮೀ. ಸಮುದ್ರದಲ್ಲಿ 45ಸಾವಿರ ಪ್ಲಾಸ್ಟಿಕ್‌
ಅಧ್ಯಕ್ಷತೆ ವಹಿಸಿದ್ದ ಕರಾವಳಿ ಕಾವಲು ಪೊಲೀಸ್‌ನ ಎಸ್ಪಿ ಚೇತನ್‌ ಮಾತನಾಡಿ, ಸಮುದ್ರ ತೀರ ಸ್ವತ್ಛವಾಗಿದ್ದರೆ ಕಡಲೂ ಕೂಡ ಸ್ವತ್ಛವಾಗಲಿದೆ, ಇದರಿಂದ ಸಮುದ್ರ ಮಾಲಿನ್ಯ ಸಹ ಕಡಿಮೆಯಾಗಲಿದ್ದು, ಸಮೀಕ್ಷೆ ಪ್ರಕಾರ ಸಮುದ್ರ ತೀರದಿಂದ 1.5 ಕಿ.ಮೀ. ವ್ಯಾಪ್ತಿಯ ಸಮುದ್ರದೊಳಗೆ 40ರಿಂದ 45 ಸಾವಿರ ಪ್ಲಾಸ್ಟಿಕ್‌ ವಸ್ತುಗಳು ಶೇಖರವಾಗಲಿದ್ದು, ಇದರಿಂದ ಜಲಚರಗಳಿಗೆ ಮತ್ತು ಮೀನುಗಾರರಿಗೆ ಸಹ ತೊಂದರೆಯಾಗಲಿದೆ, ಸಮುದ್ರ ತೀರದಲ್ಲಿ ತ್ಯಾಜ್ಯವನ್ನು ಎಸೆಯದೇ ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಹೇಳಿದರು.

Advertisement

ಮುಖ್ಯ ಅತಿಥಿಗಳಾಗಿ ಮಂಗಳೂರು ಕೋಸ್ಟ್‌
ಗಾರ್ಡ್‌ ಸಹಾಯಕ ಡೆಪ್ಯೂಟಿ ಕಮಾಂಡೆಂಟ್‌ ಪ್ರದೀಪ್‌ ಕುಮಾರ್‌, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರ್‌ಚಂದ್ರ ಕೆ.ಎಸ್‌.ಪಿ.ಎಸ್‌., ಉಡುಪಿ ನಗರಸಭಾ ಪೌರಾಯುಕ್ತ ಆನಂದ ಸಿ. ಕಲ್ಲೋಳಿಕರ್‌, ಮಲ್ಪೆ ಮೀನುಗಾರಿಕಾ ಇಲಾಖಾ ಉಪನಿರ್ದೇಶಕ ಗಣೇಶ್‌ ಕೆ., ನಗರಸಭಾ ಸದಸ್ಯೆ ಲಕೀÒ$¾ ಮಂಜುನಾಥ್‌ ಉಪಸ್ಥಿತರಿದ್ದರು. ಕರಾವಳಿ ಕಾವಲು ಪೊಲೀಸ್‌ನ ಗುಪ್ತವಾರ್ತಾ ವಿಭಾಗದ ವೃತ್ತ ನಿರೀಕ್ಷಕ ಪ್ರಮೋದ್‌ ಕುಮಾರ್‌ ಸ್ವಾಗತಿಸಿದರು. ನಿರೀಕ್ಷಕ ರಾಘವೇಂದ್ರ ಕಾಂಡಿಕೆ ವಂದಿಸಿದರು. ಪಿಎಸ್‌ಐಬಿ. ಮನಮೋಹನ್‌ ರಾವ್‌ ನಿರೂಪಿಸಿದರು.

ಮಿಲಾಗ್ರಿಸ್‌, ಪೂರ್ಣ ಪ್ರಜ್ಞಾ ಸಂಜೆ ಕಾಲೇಜು, ಸರಕಾರಿ ಪದವಿ ಪೂರ್ವ ಕಾಲೇಜು ಮಲ್ಪೆ, ಜಿ.ಶಂಕರ್‌ ಪ.ಪೂ. ಕಾಲೇಜು ಕಿದಿಯೂರು ಮತ್ತು ಭಾರತ್‌ ಸ್ಕೌಟ್ಸ್‌ ಮತ್ತು ಗೆ„ಡ್ಸ್‌ ನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next