Advertisement

ದಾಂಡೇಲಿ-ಜೊಯಿಡಾ ತಾಲೂಕಿನಲ್ಲಿ ಚುರುಕುಗೊಂಡ ಪ್ರವಾಸೋದ್ಯಮ ಚಟುವಟಿಕೆ

04:43 PM Sep 22, 2021 | Team Udayavani |

ದಾಂಡೇಲಿ : ದಾಂಡೇಲಿ-ಜೊಯಿಡಾ ತಾಲೂಕಿನ ಪ್ರವಾಸೋದ್ಯಮದ ಬಹುದೊಡ್ಡ ಶಕ್ತಿಯಾದ ಜಲಕ್ರೀಡೆ ಹಾಗೂ ಜಲ ಸಂಪನ್ಮೂಲ ಸಂಬಂಧಿತ ಚಟುವಟಿಕೆಗಳಿಗೆ ಇದೀಗ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಅನುಮತಿಯನ್ನು ನೀಡುವುದರ ಮೂಲಕ ಪ್ರವಾಸೋದ್ಯಮ ಮತ್ತೆ ಈ ಹಿಂದಿನ ಗತವೈಭವವನ್ನು ಪಡೆಯಲು ತುದಿಗಾಲಲ್ಲಿ ನಿಂತಿದೆ.

Advertisement

ಕಳೆದ ಕೆಲ ಸಮಯಗಳಿಂದ ಜಲಕ್ರೀಡೆಗೆ ಅನುಮತಿಯನ್ನು ಸ್ಥಗಿತಗೊಳಿಸಿದ್ದರಿಂದ ಪ್ರವಾಸೋದ್ಯಮ ಸಂಪೂರ್ಣ ದುಸ್ಥಿತಿಯತ್ತ ಸಾಗಿತ್ತು. ಸಾವಿರಾರು ಯುವ ಜನತೆಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗದಾಸರೆಯನ್ನು ಒದಗಿಸಿರುವ ಪ್ರವಾಸೋದ್ಯಮದ ಬೆಳವಣಿಗೆಗೆ ಪ್ರಮುಖ ಆಸರೆಯೆ ಇಲ್ಲಿಯ ಕಾಳಿ ನದಿಯಲ್ಲಿನ ಜಲಕ್ರೀಡೆಗಳು.

ಕೋವಿಡ್ ಹಿನ್ನೆಲೆಯಲ್ಲಿ ಜಲಕ್ರೀಡೆಗೆ ಅನುಮತಿಯನ್ನು ಸ್ಥಗಿತಗೊಳಿಸಲಾಗಿದ್ದು, ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡು ಪ್ರವಾಸೋದ್ಯಮ ಚಟುವಟಿಕೆ ಕುಂಠಿತಗೊಂಡಿತ್ತು. ಸೆ:21 ರಂದು ಉತ್ತರ ಕನ್ನಡ ಜಿಲ್ಲಾಧಿಕಾರಿಯವರಾದ ಮುಲ್ಲೈ ಮುಗಿಲನ್ ಅವರು ಜಲಕ್ರೀಡೆಗಳು ಹಾಗೂ ಜಲ ಸಂಬಂಧಿತ ಚಟುವಟಿಕೆಗಳಿಗೆ ಅನುಮತಿಯನ್ನು ನೀಡಿ ಆದೇಶವನ್ನು ಹೊರಡಿಸಿರುವುದು ದಾಂಡೇಲಿ-ಜೊಯಿಡಾ ತಾಲೂಕಿನ ಪ್ರವಾಸೋದ್ಯಮಿಗಳಿಗೆ ನೆಮ್ಮದಿ ತಂದಿರುವುದರ ಜೊತೆಗೆ ಹರ್ಷವನ್ನು ತಂದೊಡ್ಡಿದೆ.

ಇದನ್ನೂ ಓದಿ:ದೇಶದ ಬೃಹತ್ ಮತಾಂತರ ಜಾಲ ಭೇದಿಸಿದ ಉತ್ತರಪ್ರದೇಶದ ಎಟಿಎಸ್; ಮೌಲಾನಾ ಸಿದ್ದಿಖಿ ಬಂಧನ

ಇಲ್ಲಿ ಗಮನಿಬೇಕಾದ ಅಂಶವೆಂದರೇ ಈ ಭಾಗದ ಪ್ರವಾಸೋಧ್ಯಮದ ಪ್ರಗತಿಗೆ ವಿಶೇಷ ಆಸಕ್ತಿ ವಹಿಸಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಜಲಕ್ರೀಡೆಗೆ ಅನುಮತಿಯನ್ನು ನೀಡುವ ಬಗ್ಗೆ ಸರಕಾರ ಪ್ರಧಾನ ಕಾರ್ಯದರ್ಶಿಗಳ ಗಮನ ಸೆಳೆದಿದ್ದರು. ಇದರ ಹೊರತಾಗಿಯೂ ದಾಂಡೇಲಿ-ಜೋಯಿಡಾ ಹೋಂ ಸ್ಟೇ, ರೆಸಾರ್ಟ್ಸ್ ಮಾಲಕರ ಸಂಘವು ಖುದ್ದಾಗಿ ಕಂದಾಯ ಸಚಿವರಾದ ಅಶೋಕ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್, ಶಾಸಕರಾದ ಆರ್.ವಿ.ದೇಶಪಾಂಡೆಯವರು, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಹಾಗೂ ಮಾಜಿ ಶಾಸಕರಾದ ಸುನೀಲ್ ಹೆಗಡೆಯವರು ಸಹ ಜಲಕ್ರೀಡೆ ಆರಂಭಕ್ಕೆ ತಮ್ಮದೇ ಆದ ರೀತಿಯಲ್ಲಿ ಸರಕಾರದ ಮಟ್ಟದಲ್ಲಿ ಒತ್ತಡವನ್ನು ತಂದಿದ್ದರು.

Advertisement

ನಿನ್ನೆಯಿಂದ ಜಲಕ್ರೀಡೆಗೆ ಅನುಮತಿ ನೀಡಲಾಗಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಡೆ ಮುಖ ಮಾಡಲಿದ್ದಾರೆ. ಇನ್ನೂ ವಿಕೆಂಡ್ ಸಮಯದಲ್ಲಂತೂ ದಾಂಡೇಲಿ ಮತ್ತು ಜೋಯಿಡಾ ಭಾಗದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಮತ್ತೇ ಗರಿಗೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next