ಶಿರಸಿ: ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಕರಾವಳಿ ಭಾಗದ ದೇವಸ್ಥಾನಗಳ ದರ್ಶನದ ತಿರುಗಾಟವನ್ನು ನೂತನವಾಗಿ ಆರಂಭಿಸಿದ್ದು, ವಾರದಲ್ಲಿ ಎರಡು ದಿನ ಸಾರಿಗೆ ಬಸ್ ಟೆಂಪಲ್ ರನ್ ಮಾಡಲಿದೆ.
ಎರಡು ದಿನಗಳ ಪ್ಯಾಕೇಜ್ ಟೂರನ್ನು ಶಿರಸಿ ಹಾಗೂ ಕಾರವಾರದಿಂದ ಕೊಲ್ಲೂರು-ಉಡುಪಿ-ಧರ್ಮಸ್ಥಳ-ಸುಬ್ರಹ್ಮಣ್ಯ ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗೆ ಅವಕಾಶ ಒದಗಿಸಿದೆ. ಧರ್ಮಸ್ಥಳದಲ್ಲಿ ವಾಸ್ತವ್ಯಕ್ಕೆ ನಿಯೋಜಿಸಿದೆ.
ಎರಡು ದಿನದ ವಿಶೇಷ ಪ್ಯಾಕೇಜ್ ಟೂರನ್ನು ದೊಡ್ಡವರಿಗೆ ಕೇವಲ 800/-, ಮಕ್ಕಳಿಗೆ 600/- ರೂ. ನಿಗದಿಪಡಿಸಿದೆ. ಪ್ರತಿ ಶನಿವಾರ, ರವಿವಾರ ಮತ್ತು ಸಾರ್ವತ್ರಿಕ ರಜಾ ದಿನಗಳಂದು ಕಾರ್ಯಾಚರಣೆ ಮಾಡಲು ಯೋಜನೆ ರೂಪಿಸಿದೆ.
ಆನ್‌ಲೈನ್ ಬಸ್ ಟಿಕೆಟ್ ಬುಕಿಂಗ್ ಗಾಗಿ www.ksrtc.in ವೆಬ್ ಸೈಟ್ ಅಥವಾ ಹತ್ತಿರದ ರಿಸರ್ವೇಶನ್ ಕೌಂಟರ್ ಗೆ ಭೇಟಿ ನೀಡಿ ಪಡೆಯಬಹುದು.
Related Articles
ಮೊದಲ ದಿನ ಮಧ್ಯಾಹ್ನ ಕೊಲ್ಲೂರಿನಲ್ಲಿ, ರಾತ್ರಿ ಧರ್ಮಸ್ಥಳದಲ್ಲಿ, ಎರಡನೇ ದಿನ ಸುಬ್ರಹ್ಮಣ್ಯದಲ್ಲಿ ಮಧ್ಯಾಹ್ನ ಪ್ರಸಾದ ಭೋಜನಕ್ಕೆ ಯೋಜಿಸಿ ಪ್ರಯಾಣ ರೂಪಿಸಲಾಗಿದೆ. ಕೊಲ್ಲೂರು, ಉಡುಪಿ, ಧರ್ಮಸ್ಥಳ, ಸುಬ್ರಹ್ಮಣ್ಯ ಪ್ರವಾಸದ ಹಾದಿಯಲ್ಲಿರುವ ಪ್ರಮುಖ ದೇವಾಲಯಗಳಾಗಿವೆ.
ಹೆಚ್ಚಿನ ಮಾಹಿತಿಗಾಗಿ ಶಿರಸಿ -7760991625, ಕಾರವಾರ -7760991627 ಸಂಪರ್ಕ ಮಾಡಬಹುದು. ದೇವಸ್ಥಾನದ ಪ್ರವೇಶ, ಹಣ್ಣುಕಾಯಿ, ವಸತಿ, ಊಟೋಪಚಾರ ವೆಚ್ಚ ಪ್ರಯಾಣಿಕರೆ ಭರಿಸಬೇಕು.