ನವದೆಹಲಿ: ವರ್ಚುವಲ್ ಕರೆನ್ಸಿ ಎಂದು ಕರೆಯಿಸಿಕೊಳ್ಳುವ ಬಿಟ್ ಕಾಯಿನ್ ವಿರುದ್ಧ ಕೇಂದ್ರ ಸರ್ಕಾರ ಕಠಿಣ ನಿಲುವು ತಾಳುವುದು ಅಸಂಭವ ಎಂದು ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದೇಶವಾಸಿಗಳು ಬಿಟ್‌ಕಾಯಿನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆ ಮಾಡುತ್ತಿರುವುದರಿಂದ ಒಂದು ರೀತಿಯ ಸಮತೋಲಿತ ನಿಲುವು ಅನುಸರಿಸಲು ಯೋಚಿಸುತ್ತಿದೆ ಸರ್ಕಾರ.
ಇದನ್ನೂ ಓದಿ:ಚೆನ್ನೈನಲ್ಲಿ ಮತ್ತೆ ಮಳೆ ಅಬ್ಬರ,ನಾಲ್ವರು ಬಲಿ: ಆರೆಂಜ್ ಅಲರ್ಟ್
ಬಿಟ್ ಕಾಯಿನ್ ನಿಯಂತ್ರಣಕ್ಕೆ ಕರಡು ವಿಧೇಯಕ ಸಿದ್ಧಗೊಂಡಿದ್ದು, ಅದನ್ನು ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆದು ಕೊಳ್ಳುವುದು ಕೇಂದ್ರದ ಇರಾದೆಯಾಗಿದೆ. ಡಿಜಿಟಲ್ ಕರೆನ್ಸಿಗೆ ಯಾವ ರೀತಿ ತೆರಿಗೆ ವಿಧಿಸಬೇಕು, ಅದರ ಮೇಲೆ ನಿಯಂತ್ರಣ ಅಥವಾ ಕಠಿಣ ನಿಲುವು ತಾಳುವುದರಿಂದ ಪ್ರತಿಕೂಲ ಪರಿಣಾಮ ಏನು, ಇತರ ದೇಶಗಳಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಈಗಾಗಲೇ ಒಂದು ಸುತ್ತಿನ ಸಮಾಲೋಚನೆಯನ್ನು ಕೇಂದ್ರ ವಿತ್ತ ಸಚಿವಾಲಯ ಪೂರ್ತಿಗೊಳಿಸಿದೆ.
ಹಿಂದೆ ಸಿದ್ಧಪಡಿಸಲಾಗಿದ್ದ ಕರಡು ವಿಧೇಯಕದಲ್ಲಿ ಬಿಟ್ ಕಾಯಿನ್‌ಗೆ ಪೂರ್ಣ ಪ್ರಮಾಣದ ನಿಷೇಧ ಹೇರುವ ಬಗ್ಗೆ ಸಲಹೆ ಮಾಡಲಾಗಿತ್ತು. ಆದರೆ, ದೇಶವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅದರ ಮೇಲೆ ಹೂಡಿಕೆ ಮಾಡುತ್ತಿರುವುದರಿಂದ ತೊಂದರೆ ಯಾಗದ ರೀತಿಯಲ್ಲಿ ಕಾನೂನು ರೂಪಿಸಲಾಗುತ್ತದೆ. ಪರಾಮರ್ಶೆ ಪೂರ್ತಿಗೊಂಡ ನಂತರ ಕರಡು ವಿಧೇಯ ಕವನ್ನು ಕೇಂದ್ರ ಸಂಪುಟಕ್ಕೆ ಸಲ್ಲಿಸಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖೀಸಿ ” ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.