ಶ್ರೀನಿವಾಸಪುರ: ಮತ ಚಲಾವಣೆ ಪ್ರತಿಯೊಬ್ಬರ ಹಕ್ಕಾಗಿದ್ದು ಅದನ್ನು ವಿರೋಧಿಸುವ ಸಂಘ ವಿದ್ರೋಹಿಗಳ ವಿರುದ್ಧ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಿಂದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ಹೇಳಿದರು.
ಶ್ರೀನಿವಾಸಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸೆಕ್ಟರ್ ಮತ್ತು ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನ ಯಾವುದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ಅಹಿತಕರ ಘಟನೆ ನಡೆದಿದ್ದರೆ ಘಟನೆಗೆ ಸಂಬಂಧಿಸಿದವರ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ನಿಗಾವಹಿಸಲಾಗುವುದು ಎಂದರು.
ದೌರ್ಜನ್ಯ ನಡೆಸಿದರೆ ಕ್ರಮ: ಮಹಿಳೆಯರ ವೋಟಿಂಗ್‌ಗೆ ಅಡಚಣೆ, ಧಮಕಿ ಹಾಕುವುದು, ಮತ ಚಲಾವಣೆಗೆ ಅಡ್ಡಿ ಪಡಿಸುವುದು, ಅಹಿತಕರ ಘಟನೆಗಳಿಗೆ ಪ್ರಚೋದನೆ, ನಮ್ಮ ಪಕ್ಷಕ್ಕೇ ಮತ ಹಾಕಬೇಕೆಂದು ದೌರ್ಜನ್ಯ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
18ರ ಮೇಲ್ಪಟ್ಟ ಎಲ್ಲರಿಗೂ ಮತ ಚಲಾವಣೆಗೆ ಅವಕಾಶ ಮಾಡಿಕೊಡುವುದು ಮತ್ತು ಯುವ ಮತದಾರರಿಗೆ ಮñದಾನದ ವಿಶೇಷತೆ ತಿಳಿಸುವುದರೊಂದಿಗೆ ಶೇ.100 ಮತದಾನ ಮಾಡಿಸುವುದು ಮುಖ್ಯ. ಯಾವುದೇ ಘಟನೆಗಳಿಗೆ ತಾವು ನೀಡದೆ ಲೋಕಸಭೆ ಚುನಾವಣೆಯನ್ನು ಶಾಂತ ರೀತಿಯಲ್ಲಿ ನಡೆಯಲು ಎಲ್ಲರೂ ಸಹಕರಿಸಬೇಕೆಂದು ಹೇಳಿದರು.
ರಾಯಲ್ಪಾಡು ಸಬ್‌ಇನ್ಸ್‌ಪೆಕ್ಟರ್ ನಟ ರಾಜ್, ಶ್ರೀನಿವಾಸಪುರ ಸಬ್‌ಇನ್ಸ್ ಪೆಕ್ಟರ್ ರಾಮಚಂದ್ರಪ್ಪ, ಸೆಕ್ಟರ್ ಅಧಿಕಾರಿಗಳಿದ್ದರು.