ಎಲ್ಲರ ಜೀವವೂ ಅಮೂಲ್ಯ. ಗಲಭೆಗಳಿಂದ ಯಾರೂ ಸಾಯಬಾರದು. ಸತ್ತವರ ಕುಟುಂಬದ ಬಗ್ಗೆ ನಮಗೆ ಅನುಕಂಪ ಇದೆ. ದೀಪಕ್ ಕುಟುಂಬಕ್ಕೆ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದರಲ್ಲದೇ ಸತ್ತವರನ್ನು ಹಿಂದೂ ಎಂದು ಹೇಳಿಕೊಂಡು ಗಲಾಟೆ ಮಾಡಲು ಬಿಜೆಪಿಯವರಿಗೆ ಅಧಿಕಾರ ಕೊಟ್ಟವರು ಯಾರು? ಹಿಂದುತ್ವವನ್ನು ಇವರು ಗುತ್ತಿಗೆ ಪಡೆದುಕೊಂಡಿದ್ದಾರಾ? ಎಂದು ಪ್ರಶ್ನಿಸಿದರು.
Advertisement
ಯಡಿಯೂರಪ್ಪಗೆ ಎಷ್ಟು ರಕ್ತವಿದೆ: ದಕ್ಷ, ಪ್ರಾಮಾಣಿಕ, ಸ್ವಚ್ಛ ಆಡಳಿತ ನಡೆಸುತ್ತೇನೆಂದು ಯಡಿಯೂರಪ್ಪ ರಕ್ತದಲ್ಲಿ ಬರೆದುಕೊಡುತ್ತೇನೆ ಎಂಬ ಹೇಳಿಕೆಯನ್ನು ಟೀಕಿಸಿದ ಸಿದ್ದರಾಮಯ್ಯ, ಯಡಿಯೂರಪ್ಪಗೆ ಎಷ್ಟು ರಕ್ತವಿದೆ, ಹೋದ ಕಡೆಯಲ್ಲೆಲ್ಲ ರಕ್ತದಲ್ಲಿ ಬರೆದು ಕೊಡುತ್ತೇನೆಂದ್ರೆ ಏನರ್ಥ. ಅಧಿಕಾರ ದೊರೆತ ನಂತರ ಏನು ಮಾಡುತ್ತಾರೆ ಎಂಬುದಕ್ಕಿಂತ, ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆಂಬುದು ಮುಖ್ಯ ಎಂದರು.
ನಾಟಕವಾಡುತ್ತಿದ್ದಾರೆಯೇ ಹೊರತು ಬೇರೇನೂ ಇಲ್ಲ ಎಂದರು. ಕೇಂದ್ರ ಸರ್ಕಾರ ಸಬ್ಸಿಡಿ ದರದಲ್ಲಿ ಕೊಡುವ ಗೋಧಿಯನ್ನು ಬಳಸಿಕೊಳ್ಳುತ್ತಿಲ್ಲ. ಈ ರೀತಿ ಮಾಡಿದರೆ ಗೋಧಿ ವಿತರಣೆ ಸ್ಥಗಿತಗೊಳಿಸಲು ಕೇಂದ್ರ
ಸಚಿವರೊಂದಿಗೆ ಚರ್ಚಿಸುವುದಾಗಿ ಬಿಎಸ್‌ವೈ ಹೇಳಿದ್ದಾರೆ. ಅವರಿಗೆ ಕಾನೂನು ಅರಿವಿಲ್ಲ. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಆಹಾರ ಭದ್ರಾ ಕಾಯ್ದೆ ಜಾರಿಗೆ ತಂದಿದೆ. ಅದರನ್ವಯ ಆಹಾರ ಪದಾರ್ಥ ಕೊಡಲೇಬೇಕು. ಗೋಧಿ ಕೊಡುತ್ತಿಲ್ಲ ಎಂದು ಇವರಿಗೆ ಹೇಳಿದವರು ಯಾರು?
ಗೋಧಿ ಬೇಕು ಎನ್ನುವವರಿಗೆ ಕೊಡಲಾಗುತ್ತಿದೆ. ಬೇಡ ಎಂದವರಿಗೆ ಬಲವಂತವಾಗಿ ಕೊಡಲು ಸಾಧ್ಯವಿಲ್ಲ ಎಂದರು.