Advertisement
ಸೋಮವಾರ ಸಂಜೆ ನಗರದ ಕಂದಗಲ್ ಹನುಮಂತರಾಯ ಜಿಲ್ಲಾ ರಂಗಮಂದಿರದಲ್ಲಿ ಹಲಸಂಗಿ ಗೆಳೆಯರ ಪ್ರತಿಷ್ಠಾನದಿಂದ ಕೊಡ ಮಾಡುವ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ನವೋದಯ ಕಾಲಘಟ್ಟದಲ್ಲಿ ವಿಮರ್ಶಕರು ಸರಳ, ಸುಲಭ ಪದ ಬಳಕೆ ಮೂಲಕ ವಿಮರ್ಶಿಸುತ್ತಿದ್ದರು. ಪಾರಿಭಾಷಿಕ ಪದಗಳ ಬಳಕೆಯೂ ಇತಿಮಿತಿಯಲ್ಲಿತ್ತು. ಆದರೆ ನವ್ಯ ಕಾಲಘಟ್ಟದಲ್ಲಿ ವಿಮರ್ಶೆಯ ಸ್ವರೂಪಕ್ಕೆ ಹೊಸ ರೂಪ ಪಡೆದುಕೊಂಡಿತು ಎಂದು ವಿವರಿಸಿದರು.
Related Articles
Advertisement
ನವೋದಯ ಕಾಲಘಟ್ಟದಲ್ಲಿ ಜಾನಪದ ದೇಶಿ ಸಾಹಿತ್ಯದ ಕೀರ್ತಿ ಹೆಚ್ಚಿಸಿದವರಲ್ಲಿ ಹಲಸಂಗಿ ಗೆಳೆಯರ ಕಾರ್ಯ ಸ್ಮರಣಾರ್ಹವಾಗಿದೆ. ಕನ್ನಡ ಸಾರಸ್ವತ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಹಲಸಂಗಿ ಗೆಳೆಯರು ನೀಡಿದ ಕೊಡುಗೆ ಅಪರೂಪದ್ದು. ಮಧುರಚನ್ನರು ಆಧ್ಯಾತ್ಮ ಸಾಧನೆಯ ಉನ್ನತ ಶಿಖರದಲ್ಲಿ ಇದ್ದುಕೊಂಡು ಮನೋಜ್ಞ ಸಾಹಿತ್ಯ ಸೃಷ್ಟಿಸಿದರೆ, ಮಧುರಚನ್ನ ಎಂಬ ಮಹಾತ್ಮ ಅಂತರಂಗದ ನಿಜಾನಂದ ದರ್ಶನ ಮಾಡಿಸಿ, ಮನುಕುಲದ ದಿಕ್ಸೂಚಿ ಎನಿಸಿದ್ದರು ಎಂದರು.
ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ ಸಾರಸ್ವತ ಲೋಕದಲ್ಲಿ ಕೊಡುಗೆ ಸಲ್ಲಿಸಿದ ಖ್ಯಾತ ಸಾಹಿತಿ ಪ್ರೊ| ಕೆ.ಸಿ. ಶಿವಪ್ಪ, ಖ್ಯಾತ ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ, ಜಾನಪದ ಸಾಹಿತಿ, ಸಂಶೋಧಕ ಡಾ| ಎಂ.ಎನ್. ವಾಲಿ, ಸಾಹಿತಿ ಡಾ| ಜೆ. ಕುಮಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಡಾ| ಗುರುಲಿಂಗ ಕಾಪ್ಸೆ ಪ್ರಶಸ್ತಿ ಪ್ರದಾನ ಮಾಡಿದರು. ಖ್ಯಾತ ಸಂಶೋಧಕ ಡಾ| ಎಸ್.ಕೆ. ಕೊಪ್ಪ ಪ್ರಾಸ್ತಾವಿಕ ಮಾತನಾಡಿದರು. ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ, ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ, ಮಹಾಂತ ಗುಲಗಂಜಿ, ಡಾ| ಎಂ.ಎಸ್. ಮದಭಾವಿ, ಜಂಬುನಾಥ ಕಂಚ್ಯಾಣಿ, ಸಂಗಮೇಶ ಬಾದಾಮಿ ಇದ್ದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶಪೋತದಾರ ಸ್ವಾಗತಿಸಿದರು.