Advertisement

ಇಂದು ‘ತೋತಾಪುರಿ’ ಟ್ರೇಲರ್‌ ರಿಲೀಸ್‌; ಕಿಚ್ಚ ಸುದೀಪ್‌ ಗೆಸ್ಟ್‌

10:17 AM Apr 21, 2022 | Team Udayavani |

ನವರಸ ನಾಯಕ ಜಗ್ಗೇಶ್‌ ನಟಿಸಿರುವ “ತೋತಾಪುರಿ’ ಸಿನಿಮಾದ ಟ್ರೇಲರ್‌ ಇಂದು ಬಿಡುಗಡೆಯಾಗುತ್ತಿದ್ದು, ನಟ ಕಿಚ್ಚ ಸುದೀಪ್‌ ಟ್ರೇಲರ್‌ ಬಿಡುಗಡೆ ಮಾಡಲಿದ್ದಾರೆ.

Advertisement

ಈಗಾಗಲೇ “ಬಾಗ್ಲು ತೆಗಿ ಮೇರಿ ಜಾನ್‌’ ಹಾಡಿನ ಮೂಲಕ ಸದ್ದು ಮಾಡುತ್ತಿರುವ ಈ ಚಿತ್ರದ ಟ್ರೇಲರ್‌ ಈಗ ಬಿಡುಗಡೆಯಾಗುತ್ತಿದ್ದು, ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಜಗ್ಗೇಶ್‌, ಧನಂಜಯ್‌ ಸೇರಿದಂತೆ ಇಡೀ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ.

ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಜಗ್ಗೇಶ್‌ ಹಾಗೂ ನಿರ್ದೇಶಕ ವಿಜಯಪ್ರಸಾದ್‌ ಕಾಂಬಿನೇಷನ್‌’ನಲ್ಲಿ ಈಗಾಗಲೇ “ನೀರ್‌ದೋಸೆ’ ಬಿಡುಗಡೆಯಾಗಿ ಸೂಪರ್‌ ಹಿಟ್‌ ಆಗಿದೆ. ಇದೇ ಜೋಡಿ ಈಗ “ತೋತಾಪುರಿ’ ಮೂಲಕ ಕಮಾಲ್‌ ಮಾಡಲು ಹೊರಟಿದೆ. ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದು, “ಬಾಗ್ಲು ತೆಗಿ ಮೇರಿ ಜಾನ್‌’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ನೂರೈವತ್ತು ಮಿಲಿಯನ್‌ಗೂ ಅಧಿಕ ಹಿಟ್ಸ್ ದಾಖಲಿಸಿ ಮುನ್ನುಗ್ಗುತ್ತಿದೆ.

ಇದನ್ನೂ ಓದಿ:ಭಾರೀ ಟ್ರೋಲ್: ತಂಬಾಕು ಜಾಹೀರಾತಿನಿಂದ ದೂರ ಸರಿದ ಅಕ್ಷಯ್ ಕುಮಾರ್

ಜಗ್ಗೇಶ್‌ ಜೋಡಿಯಾಗಿ ಅದಿತಿ ಪ್ರಭುದೇವ ಇದ್ದಾರೆ. “ಡಾಲಿ’ ಧನಂಜಯ್, ಸುಮನ್‌ ರಂಗನಾಥ್‌, ದತ್ತಣ್ಣ, ವೀಣಾ ಸುಂದರ್‌, ಹೇಮದತ್‌ ಮೊದಲಾದವರ ತಾರಾಗಣ ಈ ಚಿತ್ರದಲ್ಲಿದೆ. ಸುರೇಶ್‌ ಅರಸ್‌ ಸಂಕಲನ, ನಿರಂಜನ್‌ ಬಾಬು ಕ್ಯಾಮೆರಾ ಕೆಲಸ ಈ ಚಿತ್ರಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next