Advertisement

ತೋತಾಪುರಿ ನಗೆಹಬ್ಬ; ಜಗ್ಗೇಶ್‌ ಕಾಮಿಡಿ ಕಮಾಲ್‌

03:16 PM Oct 02, 2022 | Team Udayavani |

ಜಗ್ಗೇಶ್‌ ನಟನೆಯ “ತೋತಾಪುರಿ’ ಚಿತ್ರ ಸೆ.30ರಂದು ತೆರೆಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ಚಿತ್ರತಂಡ ಖುಷಿಯಾಗಿದೆ.

Advertisement

ಜಗ್ಗೇಶ್‌ ಹಾಗೂ ವಿಜಯ ಪ್ರಸಾದ್‌ ಕಾಂಬಿನೇಶನ್‌ನಲ್ಲಿ ಮೂಡಿಬಂದ ಮತ್ತೂಂದು ಚಿತ್ರ ಇದಾಗಿದ್ದು, ಚಿತ್ರದ ಹಾಡು, ಡೈಲಾಗ್‌ಗಳಿಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಜಾತಿ, ಧರ್ಮ ಮತ್ತು ಮಾನವೀಯತೆಯಲ್ಲಿ ಮನುಷ್ಯನಿಗೆ ಯಾವುದು ದೊಡ್ಡದು? ಇಂದಿನ ಸಮಾಜಕ್ಕೆ ಬೇಕಾಗಿರುವುದು ಯಾವುದು? ಅಂತಿಮವಾಗಿ ನಮ್ಮೊಳಗೆ ಉಳಿಯುವುದು ಯಾವುದು, ಅಳಿಯುವುದು ಯಾವುದು? ಇಂಥದ್ದೊಂದು ಗಂಭೀರ ಪ್ರಶ್ನೆಯನ್ನು ಜೊತೆಗೆ ಕಾಮಿಡಿ ಕಚಗುಳಿ ಇಡುತ್ತಾ ಪ್ರೇಕ್ಷಕರ ಮುಂದೆ ಬಂದಿರುವ ಸಿನಿಮಾ “ತೋತಾಪುರಿ’.

ಆಗಾಗ್ಗೆ ಗಂಭೀರ ಚರ್ಚೆಯಾಗುವ, ರಾಜಕೀಯ ಬಣ್ಣ ಪಡೆದುಕೊಳ್ಳುವ, ಒಬ್ಬರ ಮೇಲೊಬ್ಬರು ಸವಾರಿ ಮಾಡುವಂಥ ಜಾತಿ, ಧರ್ಮ, ಲಿಂಗ ತಾರತಮ್ಯ ಹೀಗೆ ಪ್ರಸ್ತುತ ಸಮಾಜದಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ವಿಷಯಗಳನ್ನು ಹುಡುಕಿ ಅದನ್ನು ತನ್ನದೇ ಧಾಟಿಯಲ್ಲಿ ದೃಶ್ಯರೂಪದಲ್ಲಿ ಕಟ್ಟಿ ಕೊಟ್ಟಿರುವ ನಿರ್ದೇಶಕ ವಿಜಯ ಪ್ರಸಾದ್‌ ಪ್ರಯತ್ನಿಸಿದ್ದಾರೆ.

ತೋತಾಪುರಿ ಎರಡು ಭಾಗಗಳಲ್ಲಿ ತಯಾರಾಗಿದ್ದು, ನೂರಾರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕಾಮಿಡಿ ಸಿನಿಮಾವೊಂದಕ್ಕೆ ಈ ಪರಿ ಶೂಟಿಂಗ್‌ ಮಾಡಿರುವುದು ಒಂದೆಡೆಯಾದರೆ, ಜಗ್ಗೇಶ್‌ ನಟಿಸಿರುವ ಸಿನಿಮಾಗಳ ಪೈಕಿ ತೋತಾಪುರಿ ಬಿಗ್‌ ಬಜೆಟ್‌ ಸಿನಿಮಾ ಎಂಬುದು ಗಮನಾರ್ಹ. ಹಾಗೆಯೇ ಚಿತ್ರದಲ್ಲಿ ಸಾಕಷ್ಟು ತಾರಾಸಮೂಹವೇ ಇದೆ ಎಂಬುದು ಮತ್ತೂಂದು ಗಮನಾರ್ಹ ವಿಷಯ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ವೀಣಾ ಸುಂದರ್‌, ದತ್ತಣ್ಣ, ಹೇಮಾದತ್‌ ಸೇರಿದಂತೆ ಅನೇಕ ಕಲಾವಿದರು ತೋತಾಪುರಿ ತಾರಾಗಣದಲ್ಲಿದ್ದಾರೆ. ಒಂದು ಕಾಮಿಡಿ ಸಿನಿಮಾವಾಗಿ “ತೋತಾಪುರಿ’ ಅಭಿಮಾನಿಗಳನ್ನು ನಗಿಸುತ್ತಿದ್ದು, ವಾರಾಂತ್ಯದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next