Advertisement

ಕೆಜಿಎಫ್-2 ಜೊತೆ ತೋತಾಪುರಿ ಟ್ರೇಲರ್‌

12:36 PM Apr 08, 2022 | Team Udayavani |

ನವರಸ ನಾಯಕ ಜಗ್ಗೇಶ್‌ ಹಾಗೂ ನಿರ್ದೇಶಕ ವಿಜಯಪ್ರಸಾದ್‌ “ನೀರ್‌ದೋಸೆ’ ಮೂಲಕ ಕಮಾಲ್‌ ಮಾಡಿದ್ದು ಗೊತ್ತೇ ಇದೆ. ಇದೀಗ “ತೋತಾಪುರಿ’ ಮೂಲಕ ಮತ್ತೆ ಯಶಸ್ವಿ ಜೋಡಿ ಒಂದಾಗಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ತಯಾರಾಗಿರುವ ಈ ಚಿತ್ರ ಎರಡು ಭಾಗಗಳಲ್ಲಿ ಮೂಡಿಬಂದಿದೆ. ಈವರೆಗೂ ಪೋಸ್ಟರ್‌ ಹಾಗೂ ಹಾಡಿನ ಮೂಲಕ ಜೋರಾಗಿ ಸುದ್ದಿಯಾಗಿದ್ದ “ತೋತಾಪುರಿ’ ಈಗ ಟ್ರೇಲರ್‌ ಮೂಲಕ ಸೌಂಡು ಮಾಡಲು ಸಜ್ಜಾಗಿದೆ. ಅದಕ್ಕೆ ಮುಹೂರ್ತ ಕೂಡ ಫಿಕ್ಸ್‌ ಆಗಿದೆ.

Advertisement

ಹೌದು, ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ “ತೋತಾಪುರಿ’ ಮೊದಲ ಭಾಗದ ಟ್ರೇಲರ್‌ “ಕೆಜಿಎಫ್-2′ ಜತೆ ರಿಲೀಸ್‌ ಮಾಡಲಿದೆ ಚಿತ್ರತಂಡ. ಏಪ್ರಿಲ್‌ 14ರಂದು ಕೆಜಿಎಫ್ ಭಾಗ 2 ಪ್ರಪಂಚದಾದ್ಯಂತ ತೆರೆಕಾಣುತ್ತಿದೆ. ಇದರೊಟ್ಟಿಗೆ “ತೋತಾಪುರಿ’ ಸಿನಿಮಾದ ಟ್ರೇಲ ರ್‌ ಸಹ ಬಿಡುಗಡೆಯಾಗಲಿದೆ. ಕೆಜಿಎಫ್ ಬಿಡುಗಡೆಯಾಗುವ ಎಲ್ಲಾ ಪರದೆಗಳಲ್ಲೂ “ತೋತಾಪುರಿ’ ಸವಿಯಬಹುದು.

ಜಗ್ಗೇಶ್‌ ಇದೇ ಮೊದಲ ಬಾರಿ ಎರಡು ಭಾಗವಿರುವ ಸಿನಿಮಾದಲ್ಲಿ ನಟಿಸಿದ್ದಾರೆ. ಜತೆಗೆ ಇದು ಅವರ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ. “ಬಾಗ್ಲು ತೆಗಿ ಮೇರಿ ಜಾನ್‌…’ ಹಾಡಿನ ಮುಖೇನ ವಿಶ್ವದಾದ್ಯಂತ ಸದ್ದು ಮಾಡಿರುವ “ತೋತಾಪುರಿ’ ಈಗ ಟ್ರೇಲರ್‌ ಮೂಲಕ ಜನರನ್ನು ತನ್ನತ್ತ ಸೆಳೆದುಕೊಳ್ಳಲಿದೆ ಎಂಬ ಭರವಸೆ ಚಿತ್ರತಂಡಕ್ಕಿದೆ.

ಇದನ್ನೂ ಓದಿ:“ವರ್ಣಪಟಲ”; ಆಟಿಸಂ ಮೇಲೊಂದು ಚಿತ್ರ

ಕಾಮಿಡಿ ಸಿನಿಮಾವೊಂದು ಇದೇ ಮೊದಲ ಬಾರಿಗೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತಯಾರಾಗಿರುವುದು ವಿಶೇಷ. ಎರಡೂ ಭಾಗದ ಶೂಟಿಂಗ್‌ ಮೊದಲೇ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವುದೂ ಇದೇ ಮೊದಲು. ಹೀಗೆ ಹಲವು ಮೊದಲುಗಳನ್ನೊಳಗೊಂಡ “ತೋತಾಪುರಿ’ ಬೇಸಿಗೆಗೆ ಸವಿಯಲು ಸಿದ್ಧ.

Advertisement

ಮೋನಿಫಿಕ್ಸ್‌ ಸ್ಟುಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ಕೆ.ಎ.ಸುರೇಶ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಇವರು ಎರಡನೇ ಮದುವೆ, ಗೋವಿಂದಾಯ ನಮಃ, ಶಿವಲಿಂಗ, ಶ್ರಾವಣಿ ಸುಬ್ರಮಣ್ಯ ಮೊದಲಾದ ಸಿನಿಮಾಗಳನ್ನು ನಿರ್ಮಿಸಿ, ಸೂಪರ್‌ ಹಿಟ್‌ ನಿರ್ಮಾಪಕ ಎನಿಸಿಕೊಂಡಿದ್ದಾರೆ. ಸುರೇಶ್‌ ನಿರ್ಮಿಸಿರುವ ಎಲ್ಲಾ ಸಿನಿಮಾಗಳು “ಬ್ಲಾಕ್‌’ಬಸ್ಟರ್‌ ಆಗಿರುವುದರಿಂದ “ತೋತಾಪುರಿ’ ಸಹ ಬಾಕ್ಸಾಫೀಸ್‌’ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ ಎಂಬುದು ಸಿನಿ ಪಂಡಿತರ ಲೆಕ್ಕಾಚಾರ.

ಅತಿಹೆಚ್ಚು ದಿನ ಚಿತ್ರೀಕರಣ ಮಾಡಿರುವ ಸಿನಿಮಾ ಎಂಬ ಹೆಗ್ಗಳಿಕೆ “ತೋತಾಪುರಿ’ಗಿದೆ. ತಾರಾಗಣದ ವಿಷಯದಲ್ಲೂ ದಾಖಲೆ ಬರೆದಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ದತ್ತಣ್ಣ, ವೀಣಾ ಸುಂದರ್‌ ಹಾಗೂ ಹೇಮಾದತ್‌ ಸೇರಿದಂತೆ ಸುಮಾರು ನೂರಕ್ಕೂ ಅಧಿಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಅನೂಪ್‌ ಸೀಳಿನ್‌ ಸಂಗೀತ, ನಿರಂಜನ್‌ ಬಾಬು ಕ್ಯಾಮೆರಾ, ಸುರೇಶ್‌ ಅರಸ್‌ ಸಂಕಲನ ಈ ಚಿತ್ರಕ್ಕಿದೆ. ಈ ಮೂಲಕ ಸಾಕಷ್ಟು ರಾಜ್ಯ ಪ್ರಶಸ್ತಿ ವಿಜೇತ ತಾಂತ್ರಿಕವರ್ಗ “ತೋತಾಪುರಿ’ಗೆ ಕಾರ್ಯ ನಿರ್ವಹಿಸಿದೆ ಎಂಬುದು ಈ ತಂಡದ ಹೆಚ್ಚುಗಾರಿಕೆ.

Advertisement

Udayavani is now on Telegram. Click here to join our channel and stay updated with the latest news.

Next