Advertisement

‘ತೋತಾಪುರಿ’ಜೋಡಿಯ ದಸರಾ ನಂಟು; ನಿರೀಕ್ಷೆ ಹೆಚ್ಚಿಸಿದ ಹಿಟ್ ಜೋಡಿ

04:29 PM Sep 25, 2022 | Team Udayavani |

ಜಗ್ಗೇಶ್‌ ನಟನೆಯ “ತೋತಾಪುರಿ’ ಚಿತ್ರ ಸೆ.30ರಂದು ತೆರೆಕಾಣುತ್ತಿರೋದು ಎಲ್ಲರಿಗೂ ಗೊತ್ತಿದೆ. ಜಗ್ಗೇಶ್‌ ಹಾಗೂ ವಿಜಯಪ್ರಸಾದ್‌ ಕಾಂಬಿನೇಶನ್‌ನ ಮತ್ತೂಂದು ಚಿತ್ರ ಇದು ಎಂಬುದು ಗಮನಾರ್ಹ ಅಂಶ.

Advertisement

ಈ ಜೋಡಿ ಈಗಾಗಲೇ ನೀರ್‌ ದೋಸೆ ಸಿನಿಮಾ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದೆ ಎಂಬುದಕ್ಕೆ ಆ ಚಿತ್ರಕ್ಕೆ ಸಿಕ್ಕಿರುವ ಗೆಲುವೇ ಸಾಕ್ಷಿ. ಮುಖ್ಯವಾಗಿ ಮಹಿಳೆಯರು ಹಾಗೂ ಕುಟುಂಬವರ್ಗ ವೀಕ್ಷಿಸಿದ ನೀರ್‌ ದೋಸೆ ಬಾಕ್ಸಾಫೀಸ್‌ನಲ್ಲೂ ದೊಡ್ಡ ಮಟ್ಟದಲ್ಲಿ ದಾಖಲೆ ಮಾಡಿದೆ.

ಇನ್ನು ನೀರ್‌ ದೋಸೆ ಹಾಗೂ ತೋತಾಪುರಿ ಇವರಿಬ್ಬರ ಕಾಂಬಿನೇಷನ್‌ ಎಂಬುದು ಒಂದೆಡೆಯಾದರೆ, ನೀರ್‌ ದೋಸೆ ರಿಲೀಸ್‌ ಆಗಿದ್ದು ದಸರಾ ವೇಳೆಯಲ್ಲಿ. ಈಗ ತೋತಾಪುರಿ ಸಹ ದಸರಾ ವೇಳೆಗೆ ಕಂಗೊಳಿಸಲು ಸಜ್ಜಾಗಿದೆ.

ಸೆಪ್ಟೆಂಬರ್‌ 2ರಂದು ನೀರ್‌ ದೋಸೆ ಬಿಡುಗಡೆಯಾಗಿ ರಾಜ್ಯಾದ್ಯಂತ ಸಖತ್‌ ಕಮಾಲ್‌ ಮಾಡಿತ್ತು. ಇದೀಗ ಸೆಪ್ಟೆಂಬರ್‌ 30ರಂದು ತೋತಾಪುರಿ ಬಿಡುಗಡೆಯಾಗುತ್ತಿದೆ. ತೋತಾಪುರಿ ಎರಡು ಭಾಗಗಳಲ್ಲಿ ತಯಾರಾಗಿದ್ದು, ನೂರಾರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕಾಮಿಡಿ ಸಿನಿಮಾವೊಂದಕ್ಕೆ ಈ ಪರಿ ಶೂಟಿಂಗ್‌ ಮಾಡಿರುವುದು ಒಂದೆಡೆಯಾದರೆ, ಜಗ್ಗೇಶ್‌ ನಟಿಸಿರುವ ಸಿನಿಮಾಗಳ ಪೈಕಿ ತೋತಾಪುರಿ ಬಿಗ್‌ ಬಜೆಟ್‌ ಸಿನಿಮಾ ಎಂಬುದು ಗಮನಾರ್ಹ. ಹಾಗೆಯೇ ಚಿತ್ರದಲ್ಲಿ ಸಾಕಷ್ಟು ತಾರಾಸಮೂಹವೇ ಇದೆ ಎಂಬುದು ಮತ್ತೂಂದು ಗಮನಾರ್ಹ ವಿಷಯ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ವೀಣಾ ಸುಂದರ್‌, ದತ್ತಣ್ಣ, ಹೇಮಾದತ್‌ ಸೇರಿದಂತೆ ಅನೇಕ ಕಲಾವಿದರು ತೋತಾಪುರಿ ತಾರಾಗಣದಲ್ಲಿದ್ದಾರೆ.

ಎರಡನೇ ಮದುವೆ, ಗೋವಿಂದಾಯ ನಮಃ, ಶ್ರಾವಣಿ ಸುಬ್ರಮಣ್ಯ, ಆರ್‌ಎಕ್ಸ್‌ ಸೂರಿ, ಶಿವಲಿಂಗ, ರಾಜು ಕನ್ನಡ ಮೀಡಿಯಂ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆ.ಎ.ಸುರೇಶ್‌, ತೋತಾಪುರಿ ಸಿನಿಮಾವನ್ನು ಮೋನಿಫಿಕ್ಸ್‌ ಸ್ಟುಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next