Advertisement

ಪ್ರಾದೇಶಿಕ ಪಕ್ಷಗಳ ಪೈಕಿ ಎಸ್‌ಪಿಯೇ ಶ್ರೀಮಂತ

06:00 AM May 23, 2018 | |

ನವದೆಹಲಿ: ದೇಶದಲ್ಲಿನ 32 ಪ್ರಾದೇಶಿಕ ಪಕ್ಷಗಳು 2016-17ನೇ ಸಾಲಿನಲ್ಲಿ ಒಟ್ಟಾರೆ 321.03 ಕೋಟಿ ರೂ. ಆದಾಯ ಗಳಿಸಿವೆ. ಈ ಪೈಕಿ ಸಮಾಜವಾದಿ ಪಕ್ಷ (ಎಸ್‌ಪಿ) 82.76 ಕೋಟಿ ರೂ. ಆದಾಯಗಳಿಸಿ ಮೊದಲ ಸ್ಥಾನದಲ್ಲಿದೆ. ನವದೆಹಲಿಯ ಎಸೋಸಿಯೇ ಷನ್‌ ಫಾರ್‌ ಡೆಮಾಕ್ರಾಟಿಕ್‌ ರಿಫಾಮ್ಸ್‌ (ಎಡಿಆರ್‌) ವರದಿಯಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ. 32 ಪಕ್ಷಗಳ ಪೈಕಿ 17 ಪಕ್ಷಗಳು 114.45 ಕೋಟಿ ರೂ. ಮೊತ್ತವನ್ನು ಖರ್ಚು ಮಾಡಿಲ್ಲ ಎಂದು ಘೋಷಿಸಿವೆ. ಕರ್ನಾಟಕದ ಜೆಡಿಎಸ್‌ ಮತ್ತು ಹೈದರಾಬಾದ್‌ನ ಎಂಐಎಂ ಶೇ.87ರಷ್ಟು ಆದಾಯವನ್ನು ಖರ್ಚು ಮಾಡಿಲ್ಲ ಎಂದಿವೆ. 

Advertisement

ವರದಿಯಲ್ಲಿ ಏನಿದೆ?
ಪರಿಶೀಲನೆಗೆ ತೆಗೆದುಕೊಂಡ 48 ಪ್ರಾದೇಶಿಕ ಪಕ್ಷಗಳ ಪೈಕಿ 16 ಪಕ್ಷಗಳ 2016-1ನೇ ಸಾಲಿನ ಅಡಿಟ್‌ ವರದಿ ಲಭ್ಯವಿಲ್ಲ.
ಹೀಗಾಗಿ 2016-17ನೇ ಸಾಲಿಗೆ ಸಂಬಂಧಿಸಿ ಇರುವ ಅಡಿಟ್‌ ವರದಿ ಪರಿಗಣಿಸಿ ಕೇವಲ 32 ಪಕ್ಷಗಳ ಬಗ್ಗೆ ಅಧ್ಯಯನ.
27 ಪಕ್ಷಗಳಿಂದ ಆದಾಯ ತೆರಿಗೆ ವಿವರ ಸಲ್ಲಿಕೆ. ಅವುಗಳ ಆದಾಯ 2015-16ರಲ್ಲಿದ್ದ 291.14 ಕೋಟಿಯಿಂದ 2016-17ನೇ ಸಾಲಿಗೆ 316.05 ಕೋಟಿ ರೂ.ಗೆ ಏರಿಕೆ
32 ಪಕ್ಷಗಳ ಪೈಕಿ 14 ಪಕ್ಷಗಳ ಆದಾಯ 2015-16ನೇ ಸಾಲಿಗಿಂತ 2016-17ನೇ ಸಾಲಿನಲ್ಲಿ ಇಳಿಕೆ.
17 ಪಕ್ಷಗಳು ತಮ್ಮ ಆದಾಯದ ಒಂದು ಭಾಗ ಘೋಷಣೆ ಮಾಡಿದ್ದರೆ, ಉಳಿದ 15 ಪಕ್ಷಗಳು ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿವೆ.

32  ಪ್ರಾದೇಶಿಕ ಪಕ್ಷಗಳು
435.48 ಕೋಟಿ  ಘೋಷಣೆ ಮಾಡಿದ ಒಟ್ಟು ಖರ್ಚು ವೆಚ್ಚ
82.76 ಕೋಟಿ ಎಸ್‌ಪಿಯ ಆದಾಯ
25.78% ಒಟ್ಟು 32 ಪಕ್ಷಗಳ ಪೈಕಿ ಎಸ್‌ಪಿ ಆದಾಯದ ಪ್ರಮಾಣ
72.92 ಕೋಟಿ  ಟಿಡಿಪಿ
204.56 ಕೋಟಿ ಎಸ್‌ಪಿ, ಟಿಡಿಪಿ, ಎಐಎಡಿಎಂಕೆ ಪಕ್ಷಗಳ ಒಟ್ಟು ಆದಾಯ
48.88 ಕೋಟಿ ಎಐಎಡಿಎಂಕೆ

ಆದಾಯಕ್ಕಿಂತ ಹೆಚ್ಚು ವೆಚ್ಚ ಮಾಡಿದ ಪಕ್ಷಗಳು
81.88 ಕೋಟಿ   ಡಿಎಂಕೆ
64.34 ಕೋಟಿ  ಟಿಡಿಪಿ
37.89 ಕೋಟಿ  ಎಐಎಡಿಎಂಕೆ
ವೆಚ್ಚದಲ್ಲಿ ಮೊದಲ 3 ಸ್ಥಾನಿಗಳು
141.1 ಕೋಟಿ   ಎಸ್‌ಪಿ
86.77 ಕೋಟಿ  ಎಐಎಡಿಎಂಕೆ
85.66 ಕೋಟಿ  ಡಿಎಂಕೆ

ಪಕ್ಷಗಳಿಗೆ ಆದಾಯದ ಮೂಲ: ಗ್ರಾಂಟ್‌ಗಳು, ದೇಣಿಗೆ, ಬ್ಯಾಂಕ್‌ ಠೇವಣಿ
ಖರ್ಚು ವೆಚ್ಚಗಳೇನು?: ಚುನಾವಣೆ, ಆಡಳಿತಾತ್ಮಕ ಮತ್ತು ಸಾಮಾನ್ಯ ವೆಚ್ಚ.

Advertisement
Advertisement

Udayavani is now on Telegram. Click here to join our channel and stay updated with the latest news.

Next