Advertisement

ಲಾರ್ಡ್ಸ್‌ನಲ್ಲಿ ಟಾಸ್‌ ಗೆದ್ದರೆ?

12:56 AM Jul 14, 2019 | Team Udayavani |

ಲಂಡನ್‌: ಆತಿಥೇಯ ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ರವಿವಾರ ನಡೆಯುವ ವಿಶ್ವಕಪ್‌ ಕ್ರಿಕೆಟ್‌ ಕೂಟದ ಫೈನಲ್‌ ಹೋರಾಟದಲ್ಲಿ ಮುಖಾಮುಖೀಯಾಗುತ್ತಿದೆ. ಕ್ರಿಕೆಟ್‌ ಜನಕರ ನಾಡಿನಲ್ಲಿ ನಡೆಯುವ ಈ ಮಹೋನ್ನತ ಸೆಣಸಾಟದಲ್ಲಿ ಗೆದ್ದವರು ಹೊಸ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಲಿದ್ದಾರೆ. 1975ರಲ್ಲಿ ವಿಶ್ವಕಪ್‌ ಆರಂಭವಾದ ಬಳಿಕ ಇಷ್ಟರವರೆಗೆ ಈ ಎರಡೂ ತಂಡಗಳು ಒಮ್ಮೆಯೂ ವಿಶ್ವಕಪ್‌ ಎತ್ತಿಲ್ಲ, ಫೈನಲ್‌ ಹಂತಕ್ಕೇರಿ ಸೋತಿವೆ.

Advertisement

ಎರಡೂ ತಂಡಗಳು ಇದೀಗ ಪ್ರಶಸ್ತಿಯ ಬರವನ್ನು ನೀಗಿಸುವ ಉತ್ಸಾಹದಲ್ಲಿದೆ. ಉಭಯ ತಂಡಗಳು ಬಲಿಷ್ಠ ತಂಡಗಳನ್ನು ಮಣಿಸಿ ಫೈನಲಿಗೇರಿದ್ದು ಗೆಲುವಿಗಾಗಿ ಹಾತೊರೆಯುತ್ತಿವೆ. ನ್ಯೂಜಿಲ್ಯಾಂಡಿಗೆ ಅದೃಷ್ಟದ ಬಲವಿದ್ದರೆ ಇಂಗ್ಲೆಂಡಿಗೆ ಆತಿಥ್ಯದ ಯೋಗವಿದೆ. ಇದರ ಜತೆ ಪ್ರಶಸ್ತಿ ಗೆಲ್ಲುವಲ್ಲಿ ಟಾಸ್‌ ಗೆಲುವು ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.

ವಿಶ್ವಕಪ್‌ನ ಫೈನಲ್‌ ಪಂದ್ಯವನ್ನು ಲಾರ್ಡ್ಸ್‌ ಐದನೇ ಬಾರಿ ಆಯೋಜಿಸುತ್ತಿದೆ. ಈ ಹಿಂದೆ 1975, 1979, 1983 ಮತ್ತು 1999ರಲ್ಲಿ ಇಲ್ಲಿ ಫೈನಲ್‌ ಪಂದ್ಯ ನಡೆದಿತ್ತು. ಈ ಹಿಂದಿನ ನಾಲ್ಕು ಫೈನಲ್ಸ್‌ ವೇಳೆ ಮೊದಲು ಬ್ಯಾಟಿಂಗ್‌ ನಡೆಸಿದ ತಂಡ ಮೂರು ಬಾರಿ ಗೆದ್ದಿದೆ. ನಾಲ್ಕು ಬಾರಿಯೂ ಟಾಸ್‌ ಗೆದ್ದ ತಂಡ ಪಂದ್ಯವನ್ನು ಕಳೆದುಕೊಂಡಿದೆ. ಈ ಬಾರಿ ಟಾಸ್‌ ಯಾರು ಗೆಲ್ಲುತ್ತಾರೆಯೋ ಅದೃಷ್ಟ ಯಾರಿಗಿದೆಯೋ ಕಾದು ನೋಡುವ!

Advertisement

Udayavani is now on Telegram. Click here to join our channel and stay updated with the latest news.

Next