Advertisement
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವೆಂಬಂತೆ, ತಿರುವಳ್ಳುವರ್, ಕಂಚೀಪುರಂ, ಚೆಂಗಲ್‌ಪಟ್ಟು, ತಿರುನಲ್ವೇಲಿ, ರಾಮನಾಥಪುರಂ, ನಾಗಪಟ್ಟಿಣಂ ಸೇರಿದಂತೆ ಹಲವೆಡೆ ನಿರಂತರ ಮಳೆಯಾಗುತ್ತಿದೆ.
Related Articles
Advertisement
ಮೀನುಗಾರರಿಗೆ ಸೂಚನೆ:ತಮಿಳುನಾಡಿನ ದಕ್ಷಿಣ ಕರಾವಳಿ, ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ಗಂಟೆಗೆ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿರುವ ಕಾರಣ, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಧಾರಾಕಾರ ಮಳೆಯಿಂದಾಗಿ ವ್ಯಾಪಕ ಪ್ರಮಾಣದ ಬೆಳೆಹಾನಿಯಾಗಿದ್ದು, ನೂರಾರು ಮರಗಳು ಧರೆಗುರುಳಿವೆ. ಮಳೆಯಿಂದಾಗಿ ಚೆನ್ನೈನ ಬಹುತೇಕ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ತ.ನಾಡು ಮಾತ್ರವಲ್ಲದೇ ರಾಯಲಸೀಮಾ ಪ್ರದೇಶ, ಯಾನಮ್ ಸೇರಿದಂತೆ ಆಂಧ್ರಪ್ರದೇಶದ ದಕ್ಷಿಣ ಕರಾವಳಿಯಲ್ಲೂ ನ.27 ಮತ್ತು 28ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದೇ ವೇಳೆ, ನ.29ರಂದು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಹೊಸದಾಗಿ ವಾಯುಭಾರ ಕುಸಿತ ಉಂಟಾಗಲಿದ್ದು, ನಂತರದ 48 ಗಂಟೆಗಳ ಕಾಲ ಅದು ಪಶ್ಚಿಮ-ವಾಯವ್ಯದಿಕ್ಕಿನತ್ತ ಸಂಚರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.