Advertisement

ಎಸೆಸೆಲ್ಸಿಯಲ್ಲೂ ಟಾಪರ್‌, ಪಿಯುಸಿಯಲ್ಲೂ ಟಾಪರ್‌

10:17 AM May 01, 2018 | Team Udayavani |

ಕುಂದಾಪುರ: ತರಗತಿಯ ಪಾಠ ಮಾತ್ರ, ಯಾವುದೇ ಟ್ಯೂಶನ್‌ಗೆ ಹೋಗಿಲ್ಲ. ನಿರಂತರ ಓದೇ ಗರಿಷ್ಠ ಅಂಕ ಪಡೆಯಲು ಸಾಧ್ಯವಾಯ್ತು! ಇದು ವಾಣಿಜ್ಯ ವಿಭಾಗದಲ್ಲಿ 594 ಅಂಕ ಪಡೆದು ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದ ಬಸ್ರೂರಿನ ವೆಂಕಟೇಶ ಪುರಾಣಿಕ್‌ ಬಿ. ಅವರ ಸಾಧನೆ. 

Advertisement

ಎಸ್ಸೆಸ್ಸೆಲ್ಸಿಯಲ್ಲಿ 4ನೇ ಸ್ಥಾನಿ
ಬಸ್ರೂರಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಯಾಗಿದ್ದ ವೆಂಕಟೇಶ ಎಸೆಸೆಲ್ಸಿ ಯಲ್ಲಿ 622 ಅಂಕ ಗಳಿಸಿ ರಾಜ್ಯಕ್ಕೆ 4 ನೇ ಸ್ಥಾನಿಯಾಗಿದ್ದ. ಈಗ ಕುಂದಾಪುರದ ಆರ್‌.ಎನ್‌. ಶೆಟ್ಟಿ ಪ.ಪೂ. ಕಾಲೇಜಿನ ವಿದ್ಯಾರ್ಥಿಯಾಗಿ ಅದಕ್ಕೂ ಮಿಕ್ಕ ಸಾಧನೆ ಮಾಡಿದ್ದಾರೆ.

ಉತ್ತಮ ಅಂಕದ ನಿರೀಕ್ಷೆಯಿತ್ತು
ವೃತ್ತಿಯಲ್ಲಿ ಅರ್ಚಕರಾಗಿರುವ ಸುಬ್ರ ಹ್ಮಣ್ಯ ಪುರಾಣಿಕ ಹಾಗೂ ಅನ್ನಪೂರ್ಣ ದಂಪತಿಯ ಪುತ್ರ ವೆಂಟಕೇಶ ಅವರ ಬಗ್ಗೆ ಹೆತ್ತವರು ಖುಷಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಸುಬ್ರಹ್ಮಣ್ಯ ಪುರಾಣಿಕ್‌ ಅವರು, ಅವನ ಉತ್ತಮ ಪ್ರಯತ್ನ, ದೇವರ ಆಶೀರ್ವಾದದಿಂದ ಈ ಸಾಧನೆ ಒಲಿದಿದೆ. ತುಂಬಾ ಖುಷಿಯಾಗಿದೆ. ಎಸ್ಸೆಸ್ಸೆಲ್ಸಿಯಲ್ಲೂ ಒಳ್ಳೆ ಫ‌ಲಿತಾಂಶ ಬಂದಿತ್ತು. ಈ ಬಾರಿಯೂ ಚೆನ್ನಾಗಿ ಬರೆದಿದ್ದಾನೆ ಎಂದು ಹೇಳಿದ್ದ. ಉತ್ತಮ ಅಂಕ ಪಡೆಯುವ ವಿಶ್ವಾಸವಿತ್ತು. ಆದರೆ ರಾಜ್ಯಕ್ಕೆ ಎರಡನೇ ಸ್ಥಾನ ಬರುತ್ತದೆ ಎನ್ನುವ ನಿರೀಕ್ಷೆಯಿರಲಿಲ್ಲ ಎಂದ‌ರು.  ಪ್ರಯತ್ನ ಫಲ ಕೊಟ್ಟಿದೆ ಎನ್ನುವುದು ತಾಯಿ ಅನ್ನಪೂರ್ಣ ಅವರ ಅಭಿಮಾನದ ಮಾತು.   

ಸಿಎ ಮಾಡುವಾಸೆ
590 ಕ್ಕಿಂತ ಮೇಲೆ ಬರಬಹುದು ಅನ್ನುವ ನಿರೀಕ್ಷೆಯಿತ್ತು. ಆದರೆ ಇಷ್ಟು ಅಂಕಗಳ ನಿರೀಕ್ಷೆ ಇರಲಿಲ್ಲ. ಸತತ ಪರಿಶ್ರಮ ಫಲ ಕೊಟ್ಟಿರುವುದಕ್ಕೆ ತುಂಬಾ ಖುಷಿಯಾಗಿದೆ. 
ವೆಂಕಟೇಶ ಪುರಾಣಿಕ, ಸಾಧಕ ವಿದ್ಯಾರ್ಥಿ  

Advertisement

Udayavani is now on Telegram. Click here to join our channel and stay updated with the latest news.

Next