Advertisement
ಈ ಕುರಿತಾಗಿ ಕಂಪೆನಿ ಅಧಿಕೃತವಘಾಇ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ದೇಶದ ಅತಿ ದೊಡ್ಡ ಕಾರು ಉತ್ಪಾದಕ ಕಂಪನಿಯಾಗಿರುವ ಮಾರುತಿ ಸುಜುಕಿ ಇಂಡಿಯಾದ (MSI)ಯ ಶ್ವಿಫ್ಟ್, ವ್ಯಾಗನ್ ಆರ್, ಬಲೆನೊ (Baleno), ಆಲ್ಟೋ ಹಾಗೂ ಡಿಸೈರ್ (Dzire) ಈ ಐದೂ ಕಾರುಗಳು ಸತತ ನಾಲ್ಕನೇ ವರ್ಷದಲ್ಲಿಯೂ ಕೂಡ ಭಾರಿ ಮಾರಾಟಗೊಂಡಿವೆ ಎಂದು ತಿಳಿಸಿದೆ. 2020-21 ಆರ್ಥಿಕ ವರ್ಷದಲ್ಲಿ ಅತ್ಯಧಿಕ ಮಾರಾಟಗೊಂಡ ಟಾಪ್ 10 ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ 7 ಮಾಡೆಲ್ ಗಳು ಒಳಗೊಂಡಿವೆ ಎನ್ನುವುದು ವಿಶೇಷ.
Related Articles
Advertisement
ಸ್ವಿಫ್ಟ್ ಕಾರು ಅತಿ ಹೆಚ್ಚು ಮಾರಾಟಗೊಂಡ ನಂ.1 ಕಾರ್ ಆಗಿ ಹೊರಹೊಮ್ಮಿದ್ದು, ಕಂಪನಿ ಸುಮಾರು 1.72 ಲಕ್ಷಕ್ಕೂ ಅಧಿಕ ಕಾರುಗಳ ಮಾರಾಟ ನಡೆಸಿದೆ. ಬಲೇನೋ ಅತಿ ಹೆಚ್ಚು ಮಾರಾಟಗೊಂಡ ಎರಡನೇ ಕಾರ್. ಈ ಆರ್ಥಿಕ ವರ್ಷದಲ್ಲಿ ಸುಮಾರು 1.63 ಲಕ್ಷಕ್ಕೂ ಹೆಚ್ಚು ಯುನಿಟ್ ಗಳ ಮಾರಾಟ ಕಂಪನಿ ನಡೆಸಿದೆ. ಕಂಪನಿಯ ವ್ಯಾಗನ್ ಆರ್ ಕಾರು 1.60 ಲಕ್ಷ ಯುನಿಟಗಳ ಮಾರಾಟವಾಗುವ ಮೂಲಕ ಮೂರನೇ ಸ್ಥಾನದಲ್ಲಿದೆ. ವಿಷಯದಲ್ಲಿ ಆಲ್ಟೊ ಹಾಗೂ ಡಿಸೈರ್ ಅನುಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿವೆ. 2021ರಲ್ಲಿ 1.53ಲಕ್ಷ ಆಲ್ಟೊ ಯೂನಿಟ್ ಗಳು ಮಾರಾಟಗೊಂಡಿದ್ದರೆ, ಡಿಸೈರ್ ನ 1.28 ಲಕ್ಷ ಯುನಿಟ್ ಗಳು ಮಾರಾಟಗೊಂಡಿವೆ ಎಂದು ಕಂಪೆನಿ ಬಹಿರಂಗ ಪಡಿಸಿದ ಮಾಹಿತಿ ಪಟ್ಟಿ ತಿಳಿಸಿದೆ.
ಇನ್ನು, ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಮಾರುತಿ ಸುಜುಕಿಯ ಮಾರ್ಕೆಟಿಂಗ್ ಮತ್ತು ಸೇಲ್ಸ್ ಡಿಪಾರ್ಟ್ ಮೆಂಟ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಶಾಂಕ್ ಶ್ರೀವಾಸ್ತವ್, ಹೆಚ್ಚಾಗುತ್ತಿರುವ ಪ್ರತಿಸ್ಪರ್ಧೆಯ ನಡುವೇನೂ ಕೂಡ ಆರ್ಥಿಕ ವರ್ಷ 2020-21 ರಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟಗೊಂಡ ವಾಹನ ಮಾರುತಿ ಸುಜುಕಿಯಾಗಿದೆ. ಕೊರೊನಾ ಕಾಲಾವಧಿಯಲ್ಲಿ ಆರ್ಥಿಕ ಹಿನ್ನಡೆತದ ಕಾರಣ ಜನರು ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಆದರೆ, ಗ್ರಾಹಕರು ನಮ್ಮ ಭರವಸೆಯನ್ನು ಹುಸಿಯಾಗಿಡಲು ಬಿಟ್ಟಿಲ್ಲ. ಹೀಗಾಗಿ ದೇಶದಲ್ಲಿರುವ 90ಕ್ಕೂ ಅಧಿಕ ಬ್ರಾಂಡ್ ಗಳ ನಡುವೆ ಕಂಪನಿಯ ಕಾರುಗಳು ತಮ್ಮ ಪಾರುಪತ್ಯ ಮೆರೆಯುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಿದ್ದಾರೆ.
ಓದಿ : ಪ್ರತಿಯೊಬ್ಬರಿಗೂ ಆರೋಗ್ಯ : ಥೈರಾಯ್ಡ್ ಕಾಯಿಲೆಗಳು ನಮ್ಮನ್ನು ಸೋಲಿಸಬಾರದು