ಸಿರವಾರ (ರಾಯಚೂರು): ನೂತನ ಬಸ್ ನಿಲ್ದಾಣಕ್ಕಾಗಿ ಹಳೆ ಬಸ್ ನಿಲ್ದಾಣದ ಕಟ್ಟಡ ಬೀಳಿಸುವಾಗ ಛಾವಣಿ, ಗೋಡೆ ಕುಸಿದು ಕಾರ್ಮಿಕ ಸಾವನ್ನಪಿದ ಘಟನೆ ಶುಕ್ರವಾರ ಜರುಗಿದೆ.
ಪಟ್ಟಣದ ಬೆಳಗಾವಿ- ಹೈದರಾಬಾದ್ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಬಸ್ ನಿಲ್ದಾಣ ಸುಮಾರು 50 ವರ್ಷಗಳ ಹಳೆಯ ಕಟ್ಟಡವಾಗಿದೆ. ಮೂರು ಕೋಟಿ ವೆಚ್ಚದಲ್ಲಿ ನೂತನವಾಗಿ ನಿಲ್ದಾಣ ಕಟ್ಟಡ ನಿರ್ಮಾಣ ಕಾಮಗಾರಿ ಚಾಲನೆ ನೀಡಲಾಗಿತ್ತು.
ಹಳೆಯ ಕಟ್ಟಡವನ್ನು ನೆಲಸಮಗೊಳಿಸಲು ಟೆಂಡರ್ ನೀಡಲಾಗಿತ್ತು. ಕಳೆದೊಂದು ವಾರದಿಂದ ಕಾಮಗಾರಿ ಪ್ರಾರಂಭವಾಗಿದ್ದು, ಇಂದು ಕಾಮಗಾರಿ ಮಾಡುವಾಗ ಕಾರ್ಮಿಕ ಬಾಬು (36) ಎನ್ನುವವರ ಮೇಲೆ ಛಾವಣಿ ಹಾಗೂ ಗೋಡೆ ಕುಸಿತವಾಗಿರುವದರಿಂದ ಸ್ಥಳದಲ್ಲಿಯೇ ವ್ಯಕ್ತಿ ಅಸುನೀಗಿದ್ದಾನೆ.
ಗುತ್ತಿಗೆದಾರರ ನಿರ್ಲಕ್ಷ:- ಹಳೆ ಕಟ್ಟಡವಾಗಿರುವ ಕಾರಣ ಜೆಸಿಬಿ ಯಂತ್ರದಿಂದ ಕಟ್ಟಡವನ್ನು ನೆಲಸಮ ಮಾಡಬೇಕಾಗಿತ್ತು. ಆದರೆ ಕಾರ್ಮಿಕರ ಮೂಲಕ ಕಾಮಗಾರಿ ಮಾಡಿಸಿರುವುದು ಗುತ್ತಿಗೆದಾರರ ನಿರ್ಲಕ್ಷ್ಯವಾಗಿದೆ