Advertisement

ಕುಲ್ಗಾಮ್‌:ಹಿಜ್ಬುಲ್ ಪ್ರಮುಖ ಕಮಾಂಡರ್ ಹತ್ಯೆ;ಮುಂದುವರಿದ ಎನ್‌ಕೌಂಟರ್

06:57 PM Nov 20, 2021 | Team Udayavani |

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಶನಿವಾರ ನಡೆದ ಎನ್‌ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ನನ್ನ ಭದ್ರತಾ ಪಡೆಗಳು ಹತ್ಯೆ ಗೈದಿದ್ದಾರೆ.

Advertisement

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಶ್ಮುಜಿ ಪ್ರದೇಶದಲ್ಲಿ ಉಗ್ರರೊಂದಿಗೆ ಗುಂಡಿನ ಕಾಳಗ ಮುಂದುವರೆದಿದೆ.

ಹತ್ಯೆಗೀಡಾದ ಉಗ್ರ ಕುಲ್ಗಾಮ್‌ನ ಮಾಲ್ವಾನ್ ಗ್ರಾಮದ ಉನ್ನತ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಮುದಾಸಿರ್ ವಾಗೇ ಎಂದು ಗುರುತಿಸಿದ್ದಾರೆ, ಅವರು ಆಗಸ್ಟ್ 2018 ರಿಂದ ಸಕ್ರಿಯನಾಗಿದ್ದ ಎಂದು ತಿಳಿಸಿದ್ದಾರೆ.

ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿ, “ಭಯೋತ್ಪಾದಕನನ್ನು ಕೊಲ್ಲಲಾಗಿದೆ. ಕಾರ್ಯಾಚರಣೆ ನಡೆಯುತ್ತಿದೆ ಎಂದು ತೀಳಿಸಿದ್ದಾರೆ.

ಗುರುವಾರ (ನವೆಂಬರ್ 17)ಕುಲ್ಗಾಮ್‌ನಲ್ಲಿ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ ಭದ್ರತಾ ಪಡೆಗಳು ಐವರು ಭಯೋತ್ಪಾದಕರನ್ನು ಕೊಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next