Advertisement

ಪೇಶಾವರ: ಹಿರಿಯ ANP ನಾಯಕನ ಸಹಿತ 20 ಮಂದಿ ಬಾಂಬ್‌ ದಾಳಿಗೆ ಬಲಿ

11:45 AM Jul 11, 2018 | Team Udayavani |

ಪೇಶಾವರ : ವಾಯವ್ಯ ಪಾಕಿಸ್ತಾನದ ಪೇಶಾವರ ನಗರದಲ್ಲಿ  ಚುನಾವಣಾ ಪ್ರಚಾರ ಸಭೆಯಲ್ಲಿ  ತಾಲಿಬಾನ್‌ ಉಗ್ರರು ನಡೆಸಿರುವ ಆತ್ಮಾಹುತಿ ಬಾಂಬ್‌ ದಾಳಿಗೆ ಹಿರಿಯ ಆವಾಮಿ ನ್ಯಾಶನಲ್‌ ಪಾರ್ಟಿ ನಾಯಕ ಸೇರಿದಂತೆ ಕನಿಷ್ಠ 20 ಮಂದಿ ಬಲಿಯಾಗಿದ್ದಾರೆ; 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 

Advertisement

ಪಾಕಿಸ್ಥಾನದಲ್ಲಿ ಇದೇ ಜು.25ರಂದು ಮಹಾ ಚುನಾವಣೆಗಳು ನಡೆಯಲಿದ್ದು ಅದಕ್ಕೆ ಮುನ್ನ ಚುನಾವಣಾ ರಾಲಿ ಮೇಲೆ ಉಗ್ರರಿಂದ ನಡೆದಿರುವ ಎರಡನೇ ಆತ್ಮಾಹುತಿ ಬಾಂಬ್‌ ದಾಳಿ ಇದಾಗಿದೆ.

ಪೇಶಾವರ ನಗರದ ಪಿಕೆ-78ನೇ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಎಎನ್‌ಪಿ ನಾಯಕ ಹರೂನ್‌ ಬಿಲೋರ್‌ ಅವರು ಆಯಕಟ್ಟಿನ ಯಾಕತೂತ್‌ ಪ್ರದೇಶದ ಮೂಲೆಯೊಂದರಲ್ಲಿ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡುಸುತ್ತಿರುವಾಗ ನಿನ್ನೆ ಮಧ್ಯರಾತ್ರಿಯ ವೇಳೆಗೆ ಈ ನ್ಪೋಟ ನಡೆದಿದೆ. 

ಬಿಲೋರ್‌ ಅವರ ವಾಹನ ಇದ್ದಲ್ಲೇ ಸ್ಫೋಟ ಸಂಭವಿಸಿದೆ. ಇವರು ದಿವಂಗತ ಎಎನ್‌ಪಿ ನಾಯಕ ಬಶೀರ್‌ ಬಿಲೋರ್‌ ಅವರ ಪುತ್ರ.ಇವರು ಕೂಡ ತಾಲಿಬಾನ್‌ ಬಾಂಬ್‌ ದಾಳಿಯಲ್ಲೇ 2012ರಲ್ಲಿ ಅಸುನೀಗಿದ್ದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next