ಹೊಸದಿಲ್ಲಿ: ಐಐಟಿ ಮತ್ತು ಇತರ ಪ್ರತಿಷ್ಠಿತ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಶೇ.75 ಅಂಕ ಪಡೆಯದಿದ್ದರೂ ಟಾಪ್ 20 ಪರ್ಸೆಂಟೈಲ್ ವಿದ್ಯಾರ್ಥಿಗಳಿಗೆ ಜೆಇಇ ಪರೀಕ್ಷೆ ಬರೆಯಲು ಅನುಮತಿ ದೊರೆಯಲಿದೆ.
ಈ ಮೂಲಕ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಶನ್ ನಿಯಮಗಳಲ್ಲಿ ಬದಲು ಮಾಡಬೇಕೆಂಬ ಬೇಡಿಕೆಯನ್ನು ಕೇಂದ್ರ ಶಿಕ್ಷಣ ಸಚಿವಾಲಯ ಪುರಸ್ಕರಿಸಿದೆ.
12ನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ ಶೇ. 75 ಅಂಕ ಪಡೆಯುವಲ್ಲಿ ವಿಫಲವಾಗಿದ್ದ ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಲಿದೆ. ರಾಜ್ಯ ಮಂಡಳಿಗಳು ಹಾಗೂ ಶಿಕ್ಷಣ ತಜ್ಞರ ಜತೆಗೆ ಸಭೆಗಳನ್ನು ನಡೆಸಿದ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ. ಪ್ರಸಕ್ತ ಸಾಲಿನ ಜೆಇಇಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಜ.12 ಕೊನೇ ದಿನ.