ಕಲಬುರಗಿ: ಕಲ್ಯಾಣ ಕರ್ನಾಟಕದ ವಾಣಿಜ್ಯ ಬೆಳೆ ತೊಗರಿ ಬೆಂಬಲ ಬೆಲೆ 300 ರೂ ಹೆಚ್ಚಳವಾಗಿದೆ. ಮೂರು ತಿಂಗಳಿನ ಹೆಸರುಗಿಂತ ಆರು ತಿಂಗಳಿನ ತೊಗರಿನ ಬೆಲೆ ಹೆಚ್ಚಳವಾಗಬೇಕೆಂಬ ಬೇಡಿಕೆ ಮತ್ತೆ ಠುಸ್ಸಾಗಿದೆ.
ಪ್ರಧಾನಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ 2021-21 ರ ಸಾಲಿನ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ನಿಗದಿ ಸಭೆಯಲ್ಲಿ ತೊಗರಿಗೆ 6300 ರೂ ಬೆಲೆ ನಿಗದಿ ಮಾಡಲಾಗಿದೆ.
ಕಳೆದ ವರ್ಷ ಇದ್ದ 6000 ರೂ ಬೆಲೆಯನ್ನು ಈಗ ಕೇವಲ 300 ರೂ ಹೆಚ್ಚಿಸಲಾಗಿದೆ. ಮೂರು ತಿಂಗಳಿನ ಹೆಸರಿನ ಬೆಂಬಲ ಬೆಲೆ 7200 ರೂ ನಿಗದಿ ಮಾಡಲಾಗಿದೆ. ಅದೇ ರೀಬಿಳಿ ಜೋಳಕ್ಕೆ 2758 ರೂ ನಿಗದಿ ಮಾಡಲಾಗಿದೆ.
ಸಂಸದರು ವಿಫಲ: ಮೂರು ತಿಂಗಳಿನ ಹೆಸರಿಗಿಂತ ತೊಗರಿ ಬೆಂಬಲ ಬೆಲೆ ಕಡಿಮೆಯಾಗುತ್ತಿದೆ. ಇದು ಶೋಷಣೆಯಾಗುತ್ತಿದೆ ಎಂಬುದನ್ನು ಕೇಂದ್ರ ದ ಗಮನಕ್ಕೆ ತರುವಲ್ಲು ಹಾಗೂ ಈ ಅನ್ಯಾಯ ಸರಿಪಡಿಸುವಲ್ಲಿ ನಮ್ಮ ಭಾಗದ ಸಂಸದರು ವಿಫಲರಾಗಿದ್ದಾರೆ. ದಶಕಗಳ ಕಾಲದಿಂದಲೂ ತೊಗರಿ ಬೆಂಬಲ ಬೆಲೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಬೊಬ್ಬೆ ಹಾಕಲಾಗುತ್ತಿದೆಯಾದರೂ ನ್ಯಾಯ ಮಾತ್ರ ಸಿಕ್ತಾ ಇಲ್ಲ.
ತೊಗರಿ ಬೆಂಬಲ ಬೆಲೆ ಪ್ರತಿವರ್ಷ 150 ರೂ ಇಲ್ಲವೇ 250 ರೂ ಹೆಚ್ಚಳವಾಗಿದ್ದೇ ಜಾಸ್ತಿ. ಆದರೆ ಈ ವರ್ಷ 300 ರೂ ಹೆಚ್ಚಳ ನಿದಿ ಮಾಡಿರುವುದು ಸ್ವಾಗತಾರ್ಹ. ಆದರೆ ಹೆಸರಿಗಿಂತ ಹೆಚ್ಚಳವಾಗದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ್ ತಿಳಿಸಿದ್ದಾರೆ.