Advertisement

ದೈವೀಶಕ್ತಿಯ ನಂಬಿಕೆ ಬದುಕನ್ನು ಬದಲಾಯಿಸಬಲ್ಲದು: ನಿತ್ಯಾನಂದ ಕೋಟ್ಯಾನ್‌

11:27 AM Sep 06, 2022 | Team Udayavani |

ಮುಂಬಯಿ: ಕರಾವಳಿಯಲ್ಲಿ ಪ್ರಚಲಿತವಿರುವ ಜಾನಪದ ಧಾರ್ಮಿಕ ಆಚರಣೆಯಲ್ಲಿ  ದೈವರಾಧನೆಯೂ ಒಂದಾಗಿದೆ. ಸಾವಿರಾರು ವರ್ಷಗಳ ಇತಿಹಾಸವಿ ರುವ ಇಂತಹ ನಂಬಿಕೆ, ಕಟ್ಟುಪಾಡುಗಳನ್ನು ಆಚರಿಸಿಕೊಂಡು ಬಂದ ಹಿರಿಯರ ನಂಬಿಕೆ ನಮ್ಮಲ್ಲೂ ಭಕ್ತಿಶ್ರದ್ಧೆಯನ್ನು ಬಲಪಡಿಸಿದೆ. ನಾವು ನಂಬಿದ ದೈವ-ದೇವರಿಂದಾಗಿ ನಮ್ಮ ಬದುಕು ಹಸನಾಗಿದೆ. ನಮ್ಮ ಪೂರ್ವಜರು ರೂಢಿಸಿಕೊಂಡು ಬಂದಿರುವ ದೈವಾ ರಾಧನೆ ಮೇಲೆ ನಮ್ಮ ಯುವಜನ ತೆಯೂ ವಿಶ್ವಾಸವಿರಿಸಿ ಶ್ರದ್ಧಾಭಕ್ತಿಯಿಂದ ಮುನ್ನಡೆಸುವ ಅಗತ್ಯವಿದೆ. ದೈವೀಶಕ್ತಿ ನಂಬಿಕೆ ಬದುಕನ್ನೇ ಬದಲಾಯಿಸಬಲ್ಲದು ಎಂದು ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ತಿಳಿಸಿದರು.

Advertisement

ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದ ಸಮಾಲೋಚನ ಸಭಾಗೃಹದಲ್ಲಿ  ಸೆ. 4ರಂದು ಪೂರ್ವಾಹ್ನ ನಡೆದ ಟ್ರಸ್ಟ್‌ನ ನಾಲ್ಕನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುರು ಹಿರಿಯರ ಮಾರ್ಗದರ್ಶನ ಮತ್ತು ಸದಸ್ಯರ ಉಪಸ್ಥಿತಿಯಲ್ಲಿ ತೋನ್ಸೆ ಗರೋ ಡಿಯ ಅಭಿವೃದ್ಧಿ ಜತೆಗೆ ಸಾಮಾಜಿಕ, ಶೈಕ್ಷಣಿಕ ಸೇವೆಯೊಂದಿಗೆ ಜನಹಿತ ಕೆಲಸಗಳಲ್ಲಿ ತೊಡಗಿಸಿಕೊಂಡ ಸೇವಾ ಟ್ರಸ್ಟ್‌ನ ಸೇವೆಗೆ ಸಹೃದಯಿ ಹಿತೈಷಿಗಳ, ಸೇವಾಕರ್ತರ ಸಹಯೋಗವೂ ಮಹತ್ತರ ವಾಗಿದೆ. ತುಳುನಾಡ ಸಾಂಸ್ಕೃತಿಕ ಸಾಮಾಜಿಕ ಬದುಕಿನಲ್ಲಿ ದೈವ ಮತ್ತು ದೇವರನ್ನು ಭಿನ್ನ ನೆಲೆಯಲ್ಲಿ ನಂಬಿ ಬದುಕುತ್ತಿರುವ ನಮಗೆ ಗರೋಡಿ ಗಳೂ ಭಕ್ತಿಕೇಂದ್ರಗಳಾಗಿವೆ. ದೈವಗಳನ್ನು ನಂಬಿದರೆ ಒಳಿತಾಗಬಹುದೆಂದು ನಾವು ಈ ಶಕ್ತಿಗಳನ್ನೇ ಆರಾಧಿಸಿ ಬದುಕುತ್ತಿದ್ದು, ನಾವು ಆರಾಧಿಸಿಕೊಂಡು ಬಂದ ತೋನ್ಸೆ ಗರೋಡಿಯೂ ನಮ್ಮೆಲ್ಲರ ಬಾಳಿನ ಶಕ್ತಿಕೇಂದ್ರವಾಗಿದೆ. ಈ ಶಕ್ತಿಯೇ ನಮ್ಮನ್ನು ಪರಿವಾರದ ಸಾಂಘಿಕತೆಯಿಂದ ಒಗ್ಗೂಡಿಸಿದೆ. ಇದು ಬರೇ ಟ್ರಸ್ಟ್‌ ಅಲ್ಲ ಬದಲಾಗಿ ದೈವಾರಾಧನೆಯ ವಿಶ್ವಾಸ ತುಂಬುವ ಸಂಸ್ಥೆಯಾಗಿದೆ. ಆದ್ದರಿಂದ ನಮ್ಮಲ್ಲಿನ ಸದಸ್ಯರ ಸಂಪತ್ತೆ ಟ್ರಸ್ಟ್‌ನ ಶಕ್ತಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವೈವಾಹಿಕ ಬದು ಕಿನ ಸ್ವರ್ಣಸಂಭ್ರಮ ಆಚರಿಸಿದ ತೋನ್ಸೆ ಎಸ್‌ಬಿಬಿಪಿಜಿಎಸ್‌ ಟ್ರಸ್ಟ್‌ ಮುಂಬಯಿ ಉಪಾಧ್ಯಕ್ಷ ಸಿ. ಕೆ. ಪೂಜಾರಿ ಮತ್ತು ಭಾರತಿ ಸಿ. ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯ ಸೋಮ ಟಿ. ಸುವರ್ಣ ಮತ್ತು ಮೀರಾ ಎಸ್‌. ಸುವರ್ಣ ದಂಪತಿಯನ್ನು ಸಮ್ಮಾನಿಸಲಾಯಿತು. ಗೋರೆಗಾಂವ್‌ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ನಿತ್ಯಾನಂದ ಡಿ. ಕೋಟ್ಯಾನ್‌ ಮತ್ತು ಭಾರತ್‌ ಬ್ಯಾಂಕ್‌ನ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಡಿ. ಬಿ. ಅಮೀನ್‌ ಅವರನ್ನು ಟ್ರಸ್ಟ್‌ ಪರವಾಗಿ ಅಭಿನಂದಿಸಲಾಯಿತು.

ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸೌಂದ ರ್ಯಾ ಆರ್‌. ಪೂಜಾರಿ, ಸಿದ್ಧಾರ್ಥ್ ಕೆ. ಪೂಜಾರಿ, ಆರ್ಯಾನ್‌ ಕೋಟ್ಯಾನ್‌, ಅನುಸೂಯಾ ಜಯ ಪೂಜಾರಿ, ಆರ್ಯಾನ್‌ ಚಂದ್ರಶೇಖರ್‌ ಪೂಜಾರಿ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಆದಿ ರವಿ ಪೂಜಾರಿ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು. ಪ್ರತೀಕ್‌ ಪೂಜಾರಿ ಅವರಿಗೆ ಶೈಕ್ಷಣಿಕ ಧನಸಹಾಯ ಮತ್ತು ನಾಗರಾಜ್‌ ಪೂಜಾರಿ ಅವರಿಗೆ ಸಮಿತಿ ವತಿಯಿಂದ ವೈದ್ಯಕೀಯ ಧನಸಹಾಯ ವಿತರಿಸಲಾಯಿತು.

ಸಭೆಯಲ್ಲಿ ಲೆಕ್ಕಪರಿಶೋಧಕ ಎಸ್‌. ಎನ್‌. ಪೂಜಾರಿ ಆ್ಯಂಡ್‌ ಕಂಪೆನಿ ಇದರ ಸಚಿನ್‌ ಎನ್‌. ಪೂಜಾರಿ, ಸಲಹೆಗಾರರಾದ ಶಂಕರ ಸುವರ್ಣ, ವಿಟ್ಠಲ್‌ ಸಿ. ಪೂಜಾರಿ, ಸೋಮ ಸುವರ್ಣ, ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥರಾದ ವಿಟ್ಠಲ್‌ಎಸ್‌. ಪೂಜಾರಿ, ಉದಯ ಎನ್‌. ಪೂಜಾರಿ, ವಿದ್ಯಾ ಉಪಸಮಿತಿಯ ಮುಖ್ಯಸ್ಥೆ ಭಾರತಿ ಸುವರ್ಣ, ಮಹಿಳಾ ವಿಭಾಗದ ಮುಖ್ಯಸ್ಥೆ ಲಕ್ಷ್ಮೀ ಡಿ. ಅಂಚನ್‌, ಕಸ್ತೂರಿ ಆರ್‌. ಕಲ್ಯಾಣು³ರ್‌, ಭಾರತಿ ಸುವರ್ಣ, ಮೃದುಲಾ ಅರುಣ್‌ ಕೋಟ್ಯಾನ್‌, ಕಾರ್ಯಕಾರಿ ಸಮಿತಿಯ ಸದಸ್ಯರಾದ ಅಶೋಕ್‌ ಎಂ. ಕೋಟ್ಯಾನ್‌, ಸದಾನಂದ ಬಿ. ಪೂಜಾರಿ ಸಹಿತ ಅನೇಕ ಸದಸ್ಯರು ಉಪಸ್ಥಿತರಿದ್ದರು. ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಟ್ರಸ್ಟ್‌ನ ಸೇವೆಯನ್ನು ಪ್ರಶಂಸಿಸಿ ಸಲಹೆ-ಸೂಚನೆಗಳನ್ನು ನೀಡಿದರು.

Advertisement

ಕುಲದೇವರು ಕೋಟಿ-ಚೆನ್ನಯ ಮತ್ತು ಶ್ರೀ ಬ್ರಹ್ಮಬೈದರ್ಕಳ, ಪಂಚ ಧೂಮಾವತಿ ಹಾಗೂ ದೈವ ದೇವರಿಗೆ ಪೂಜೆ ಸಲ್ಲಿಸಿ ಮಹಾಸಭೆಗೆ ಚಾಲನೆ ನೀಡಲಾಯಿತು. ಇತ್ತೀಚೆಗೆ ಸ್ವರ್ಗೀಯರಾದ  ಸಂಸ್ಥೆಯ ಸಲಹೆಗಾರರಾದ ಗೋಪಾಲ್‌ ಪಾಲನ್‌ ಕಲ್ಯಾಣು³ರ್‌ ಹಾಗೂ ಇತರ ಸದಸ್ಯರಿಗೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸ ಲಾಯಿತು. ಲಕ್ಷ್ಮೀ ಡಿ. ಅಂಚನ್‌ ಪ್ರಾರ್ಥನೆಗೈದರು. ಕರುಣಾಕರ್‌ ಬಿ. ಪೂಜಾರಿ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ವಿಜಯ್‌ ಸನಿಲ್‌ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ವಿಶ್ವನಾಥ ತೋನ್ಸೆ ವಿದ್ಯಾರ್ಥಿವೇತನದ ಬಗ್ಗೆ ಪ್ರಸ್ತಾ¤ವಿಸಿ ಪುರಸ್ಕೃತರನ್ನು ಪರಿಚಯಿಸಿದರು. ಸಂಜೀವ ಪೂಜಾರಿ ತೋನ್ಸೆ ಸ್ವಾಗತಿಸಿದರು.

 

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next