ಶಂಕರ ಫೌಂಡೇಷನ್, ಕಲೆ-ಸಂಸ್ಕೃತಿಯ ಸೇವೆಗಾಗಿ “ಡಮರು’ ರಂಗಸ್ಥಳವನ್ನು ನಿರ್ಮಿಸಿದೆ. ಉದ್ಘಾಟನಾ ಸಮಾರಂಭದ ಪ್ರಯುಕ್ತ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಸಂಜೆ 5 ಗಂಟೆಗೆ, ಮೈಸೂರು ವಿ. ನಾಗರಾಜ್‌ರಿಂದ ಕಥಕ್, ಸಂಜೆ 7ರಿಂದ, ಎಸ್.ಎನ್. ಸೇತುರಾಮ್ ನಿರ್ದೇಶನದಲ್ಲಿ “ಅನನ್ಯ’ ನಾಟಕ ತಂಡದಿಂದ “ಉಚ್ಛಿಷ್ಠ’ ಪ್ರದರ್ಶನ ನಡೆಯಲಿದೆ. ಟಿಕೆಟ್‌ಗಳು ಬುಕ್‌ವೆುçಶೋನಲ್ಲಿ ಲಭ್ಯ.
ಭಾನುವಾರ ಸಂಜೆ 5ರಿಂದ, ಭಾನುಮತಿ ನರಸಿಂಹನ್ ಅವರಿಂದ ಪರಾಶಕ್ತಿ (ಪುಸ್ತಕ ಓದುವುದು), ಸಂಜೆ 7ರಿಂದ ಅಮೃತಮಂಥನ ನೃತ್ಯ ಪ್ರದರ್ಶನ ನಡೆಯಲಿದೆ. ಯಕ್ಷಗಾನ ಹಾಗೂ ಇತರೆ ಶಾಸ್ತ್ರೀಯ ನೃತ್ಯಗಳನ್ನೊಳಗೊಂಡ ಈ ನೃತ್ಯರೂಪಕಕ್ಕೆ, ರಶ್ಮಿ ಹೆಗಡೆ ಗೋಪಿ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. ಟಿಕೆಟ್‌ಗಳು, ಕಾರ್ಯಕ್ರಮದ ಸ್ಥಳದಲ್ಲಿ ಲಭ್ಯ.
ಎಲ್ಲಿ?: ಡಮರು ವೇದಿಕೆ, ಶಂಕರ ಫೌಂಡೇಷನ್, ದೊಡ್ಡಕಲ್ಲಸಂದ್ರ, ಕನಕಪುರ ಮುಖ್ಯರಸ್ತೆ.
ಯಾವಾಗ?: ಅ.12-13, ಸಂಜೆ 5ರಿಂದ