Advertisement

ನಾಳೆ “ಕೆಂಪೇಗೌಡ-2′ಟ್ರೇಲರ್‌ ರಿಲೀಸ್‌

09:03 AM Apr 14, 2019 | Lakshmi GovindaRaju |

ನಟ ಕೋಮಲ್‌ ಎಲ್ಲಿದ್ದಾರೆ? ಇತ್ತೀಚೆಗೆ ಕೋಮಲ್‌ ಎಲ್ಲೂ ಸುದ್ದಿಯಲ್ಲಿ ಇಲ್ಲವಲ್ಲಾ, ಎಂದುಕೊಳ್ಳುತ್ತಿದ್ದ ಸಿನಿಪ್ರಿಯರ ಮುಂದೆ ಕೋಮಲ್‌ ಹೊಸ ಸುದ್ದಿಯೊಂದನ್ನು ಹೊತ್ತು ತರುತ್ತಿದ್ದಾರೆ.  ಹೌದು, ಕಳೆದ ಎರಡೂವರೆ ವರ್ಷಗಳಿಂದ “ಕೆಂಪೇಗೌಡ-2′ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಕೋಮಲ್‌ ಈ ವರ್ಷ ಪ್ರೇಕ್ಷಕರ ಮುಂದೆ ದರ್ಶನ ಕೊಡೋದೆ ಬಹುತೇಕ ಪಕ್ಕಾ ಆಗಿದೆ.

Advertisement

ಇದಕ್ಕೆ ಪೂರ್ವಭಾವಿ ಎಂಬಂತೆ ನಾಳೆ ಕೋಮಲ್‌ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ “ಕೆಂಪೇಗೌಡ-2′ ಆ್ಯಕ್ಷನ್‌ ಕಹಾನಿಯ ಮೊದಲ ಟ್ರೇಲರ್‌ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ “ಕೆಂಪೇಗೌಡ-2′ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌, ಟೀಸರ್‌ಗಳಲ್ಲಿ ಕೋಮಲ್‌ ಡಿಫ‌ರೆಂಟ್‌ ಲುಕ್‌ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಈಗ ಬರುತ್ತಿರುವ ಟ್ರೇಲರ್‌ನಲ್ಲಿ ಕೋಮಲ್‌ ಖದರ್‌ ಹೇಗಿದೆ ಎಂಬ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ.

ಶಂಕರೇಗೌಡ ನಿರ್ಮಾಣದ ಈ ಚಿತ್ರದಲ್ಲಿ ಕ್ರಿಕೆಟ್‌ ಆಟಗಾರ ಶ್ರೀಶಾಂತ್‌ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಟ್ರೇಲರ್‌ ಬಿಡುಗಡೆಯ ಮೂಲಕ “ಕೆಂಪೇಗೌಡ-2′ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಲಿರುವ ಕೋಮಲ್‌, ಇದೇ ಮೇ ತಿಂಗಳಿನಲ್ಲಿ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next