Advertisement

ಉಡುಪಿ:ನಾಳೆ ಪೊಲೀಸ್‌ ಪೋನ್‌-ಇನ್‌ ಕಾರ್ಯಕ್ರಮ

10:37 PM Aug 01, 2019 | Sriram |

ಉಡುಪಿ: ಉಡುಪಿ ಎಸ್‌ಪಿ ನಿಶಾ ಜೇಮ್ಸ್‌ ಅವರು ಆ.2ರಂದು ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ನೇರ ಪೋನ್‌-ಇನ್‌ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Advertisement

ಸಾರ್ವಜನಿಕರು ಬೆಳಗ್ಗೆ 10ರಿಂದ 11 ಗಂಟೆಯವರೆಗೆ 0820-2534777ಗೆ ಕರೆ ಮಾಡಿ ಅಹವಾಲು ತಿಳಿಸಬಹುದು ಅಥವಾ ವಾಸಿಸುವ ಪ್ರದೇಶ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳೇನಾದರೂ ನಡೆಯುತ್ತಿದ್ದಲ್ಲಿ ಮಾಹಿತಿ ನೀಡಬಹುದು ಅಥವಾ ತಮ್ಮ ಹಿಂದಿನ ಅರ್ಜಿ/ಪ್ರಕರಣಗಳ ಕುರಿತಾಗಿ ಮಾಹಿತಿ ನೀಡಬಹುದು ಅಥವಾ ಪೊಲೀಸ್‌ ಇಲಾಖಾ ಕರ್ತವ್ಯಕ್ಕೆ ಸಂಬಂಧಪಟ್ಟಂತೆ ಸಲಹೆಗಳನ್ನು ನೀಡಬಹುದು ಅಥವಾ ಪೊಲೀಸ್‌ ಇಲಾಖಾ ಕರ್ತವ್ಯ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬಹುದು. ಕರೆ ಮಾಡಿದವರ ವಿವರವನ್ನು ಗುಪ್ತವಾಗಿಡಲಾಗುವುದು ಎಂದು ಎಸ್‌ಪಿ ಕಚೇರಿ ಪ್ರಕಟನೆ ತಿಳಿಸಿದೆ.


Advertisement

Udayavani is now on Telegram. Click here to join our channel and stay updated with the latest news.

Next