Advertisement

ನಾಳೆ ಪಾಕ್ ಜಂಟಿ ಅಧಿವೇಶನ

05:34 PM Aug 06, 2019 | Sriram |

ದಿಲ್ಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ 370ನೇ ವಿಧಿಯನ್ನು ಭಾರತ ರದ್ದುಗೊಳಿರುವುದು ಪಾಕ್ಗೆ ತಟ್ಟಿದೆ. ಭಾರತದ ಈ ಕ್ರಮವನ್ನು ಪಾಕಿಸ್ಥಾನ ಸರಕಾರ ತೀವ್ರವಾಗಿ ಖಂಡಿಸಿದ್ದು, ಅ. 6ರ ಮಂಗಳವಾರ ಜಂಟಿ ಸಂಸತ್ತು ಅಧಿವೇಶನವನ್ನು ಪಾಕ್ ಕರೆದಿದೆ.

Advertisement

ಭಾರತ ತಾನು ಮಾಡಿದ ಕೆಲಸವನ್ನು ಯಾವುದೇ ಕಾರಣಕ್ಕೂ ಪಾಕ್ ಒಪ್ಪುವುದಿಲ್ಲ ಎಂದಿದೆ. ಮುಂದುವರಿದು ಈ ನಡೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಸಂವಿಧಾನದ ಆಶಯಕ್ಕೆ ತದ್ವಿರುದ್ದ ಎಂದು ಹೇಳಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ (UNSC) ಯಲ್ಲಿ ವಿವಾದಿತ ಸ್ಥಾನ ಎಂಬ ಹಣೆಪಟ್ಟಿಯನ್ನು ನೀಡಲಾಗಿದೆ. ಕಾಶ್ಮೀರಕ್ಕೆ ಸಂಬಂಧಿಸಿದ ಯಾವುದೇ ನಿರ್ಣಯಗಳನ್ನು ತೆಗೆದುಕೊಂಡರೆ ಅದು ಉಭಯ ದೇಶಗಳಿಗೆ ಹಾನಿಯಾಗುತ್ತದೆ ಎಂದಿದೆ.

ಈ ಕುರಿತು ಮಾತನಾಡಿದ ಪಾಕ್ ವಿದೇಶಾಂಗ ಸಚಿವ ಷಾ ಮಹಮ್ಮದ್ ಖುರೇಷಿ ನಮ್ಮ ಸರಕಾರ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಯೋಜನೆಗಳ ಕುರಿತು ಚರ್ಚಿಸಲು ಮಂಗಳವಾರ ಸಂಸತ್ತು ಸಭೆ ಸೇರಲಿದೆ ಎಂದಿದ್ದಾರೆ.

ಪಾಕಿಸ್ಥಾನದ ಮಾಧ್ಯಮಗಳಲ್ಲಿ ದಿನವಿಡೀ ಭಾರತದ ಕುರಿತಾದ ಚರ್ಚೆಗಳು, ರಾಜಕೀಯ ವಿಶ್ಲೇಷಣೆಗಳು ನಡೆಯುತ್ತಿದ್ದವು. ಅಲ್ಲಿನ ಪತ್ರಿಕೆಗಳ ವೆಬ್ ಪುಟಗಳು 370ನೇ ವಿಧಿಯ ಕುರಿತಾಗಿಯೇ ಬರೆದುಕೊಂಡಿದ್ದವು. ಭಾರತದ ಈ ನಿರ್ಣಯವನ್ನು ಅಲ್ಲಿನ ಮಾಧ್ಯಮಗಳು ಕಟುವಾಗಿ ಟೀಕಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next