Advertisement

ನಾಳೆ ವಿಶ್ವ ತಂಬಾಕು ರಹಿತ ದಿನಾಚರಣೆ: “ದಂಡ’ದ ನಿಯಂತ್ರಣಕ್ಕೆ ಸಿಗದ ತಂಬಾಕು !

11:57 PM May 29, 2023 | Team Udayavani |

ಮಂಗಳೂರು: ನಿಯಮ ಮೀರಿ ನಡೆಯುತ್ತಿರುವ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಲು ಇನ್ನೂ ಸಾಧ್ಯವಾಗಿಲ್ಲ. ಅಸ್ತಿತ್ವದಲ್ಲಿರುವ ಕೋಟಾ³ ಕಾಯಿದೆಯಡಿ ಕೋಟಾ³ ತನಿಖಾ ದಳ ಕಾರ್ಯಾಚರಣೆ ನಡೆಸುತ್ತಿದೆಯಾದರೂ ಬಹುತೇಕ ಕಾರ್ಯಾಚರಣೆಗಳು “ದಂಡ’ ವಿಧಿಸುವುದಕ್ಕಷ್ಟೇ ಸೀಮಿತವಾಗುತ್ತಿದೆ. ಇಂತಹ ದಂಡಗಳಿಗೆ ತಂಬಾಕು ಮಾರಾಟಗಾರರು, ಬಳಕೆದಾರರು ಕ್ಯಾರೇ ಅನ್ನುತ್ತಿಲ್ಲ. ಇದರಿಂದಾಗಿ ನಿಯಮ ಉಲ್ಲಂಘನೆಯೂ ನಿರಂತರ ಎಂಬಂತಾಗಿದೆ !.

Advertisement

ಪ್ರಸ್ತುತ “ಕೋಟ್ಪಾ -2003′ (ಸಿಗರೇಟ್‌ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ) ಜಾರಿಯಲ್ಲಿದೆ. ಅದರ ಅನುಷ್ಠಾನಕ್ಕೆ ಕೋಟಾ³ ತನಿಖಾ ದಳ ಕಾರ್ಯಾಚರಣೆ ನಡೆಸುತ್ತಿದೆ. ಈ ಕಾಯಿದೆಯ ಸೆಕ್ಷನ್‌ 7 (ತಂಬಾಕು ಉತ್ಪನ್ನಗಳ ಪ್ಯಾಕೆಟ್‌ ಮೇಲೆ ಕಡ್ಡಾಯವಾಗಿ ಶೇ. 85ರಷ್ಟು ಭಾಗದಲ್ಲಿ ಅಪಾಯ ಸೂಚಿಸುವ ಚಿಹ್ನೆ ಮುದ್ರಿಸುವುದು) ಮತ್ತು ಸೆಕ್ಷನ್‌ 5 (ತಂಬಾಕು ಉತ್ಪನ್ನದ ಬಗ್ಗೆ ಜಾಹೀರಾತು ಹಾಕಿರುವುದು) ಅಡಿಯಲ್ಲಿ ಎಫ್ಐಆರ್‌ ದಾಖಲು ಮಾಡಲು ಅವಕಾಶವಿದೆ. ಇದು ಪೊಲೀಸರ ಮೂಲಕ ನಡೆಯಬೇಕಿದೆ. ಆದರೆ ಎಫ್ಐಆರ್‌ ದಾಖಲಾಗುವುದು ತೀರಾ ಕಡಿಮೆ. ಲೈಸನ್ಸ್‌ ರದ್ಧತಿಯೂ ಕಡಿಮೆ. ಮಂಗಳೂರಿನಲ್ಲಿ ಇತ್ತೀಚೆಗೆ ಇ-ಸಿಗರೇಟ್‌ ಕಾಯಿದೆ-2019ರ ಅಡಿ 5 ಪ್ರಕರಣಗಳಲ್ಲಿ ಮಾತ್ರವೇ ಎಫ್ಐಆರ್‌ ದಾಖಲಾಗಿದೆ.

ಪುನರಾವರ್ತನೆಯಾದರೆ ಎಫ್ಐಆರ್‌
ಕೋಟ್ಪಾ ಕಾಯಿದೆ ಸೆಕ್ಷನ್‌ ಮತ್ತು ಸೆಕ್ಷನ್‌ನಡಿ ಎಫ್ಐಆರ್‌ ದಾಖಲಿಸಲು ಅವಕಾಶವಿದೆ. ಕೋಟ್ಪಾ ತನಿಖಾ ದಳದಲ್ಲಿ ಪೊಲೀಸರು ಕೂಡ ಇರುತ್ತಾರೆ. ನಿಯಮ ಉಲ್ಲಂ ಸುವವರಿಗೆ ಮೊದಲು ಎಚ್ಚರಿಕೆ ನೀಡಿ ಅನಂತರ ದಂಡ ವಿಧಿಸಲಾಗುತ್ತದೆ. ಪದೇ ಪದೆ ಉಲ್ಲಂಘನೆಯಾದರೆ ಮಾತ್ರ ಎಫ್ಐಆರ್‌ ದಾಖಲಿಸಲಾಗುತ್ತಿದೆ. ಪರವಾನಿಗೆ ರದ್ದತಿಗೂ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಶಿಫಾರಸು ಮಾಡಲಾಗುತ್ತಿದೆ ಎನ್ನುತ್ತಾರೆ “ಕೋಟ್ಪಾ’ ಅಧಿಕಾರಿಗಳು.

ಹೊಸ ಕಾಯಿದೆ ಶೀಘ್ರ ಜಾರಿ?
ಅಬಕಾರಿ ಮಾದರಿಯಲ್ಲಿಯೇ ಸಿಗರೇಟ್‌ ಸೇರಿದಂತೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪರವಾನಿಗೆ ಕಡ್ಡಾಯಗೊಳಿಸುವ ನೂತನ ಕಾಯಿದೆ ಶೀಘ್ರ ಜಾರಿಗೊಳ್ಳುವ ನಿರೀಕ್ಷೆ ಇದೆ. ಈ ಬಗ್ಗೆ ಗಜೆಟ್‌ ನೋಟಿಫಿಕೇಶನ್‌ ಹೊರಡಿಸಲಾಗಿದ್ದು ಇನ್ನಷ್ಟೇ ಅನುಷ್ಠಾನಕ್ಕೆ ಬರಬೇಕಿದೆ.

ವ್ಯಸನ ಬಿಡಿಸುವ ಯತ್ನ
ತಂಬಾಕು ವ್ಯಸನದಿಂದ ಹೊರಬರಲು ಪ್ರಯತ್ನಿಸುತ್ತಿರುವವರಿಗೆ ದ.ಕ.ದ ವೆನ್ಲಾಕ್ ಆಸ್ಪತ್ರೆಯ ಕೊಠಡಿ ಸಂಖ್ಯೆ 46ರಲ್ಲಿ ಮತ್ತು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಕೊಠಡಿ ಸಂಖ್ಯೆ 34ರಲ್ಲಿ ತಂಬಾಕು ವ್ಯಸನಮುಕ್ತ ಕೇಂದ್ರಗಳಲ್ಲಿ ಆಪ್ತ ಸಮಾಲೋಚನೆ ಹಾಗೂ ಎನ್‌.ಆರ್‌.ಟಿ. ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಇದುವರೆಗೆ 152 ಮಂದಿ ಹಾಗೂ ಉಡುಪಿ ಜಿಲ್ಲೆಯಲ್ಲಿ 190 ಮಂದಿ ತಂಬಾಕು ವ್ಯಸನವನ್ನು ತ್ಯಜಿಸಿದ್ದಾರೆ. ಇದು ಮೂರು ತಿಂಗಳ ಚಿಕಿತ್ಸೆಯಾಗಿರುತ್ತದೆ. ಆಸಕ್ತರು ನೇರವಾಗಿ ಭೇಟಿ ನೀಡಬಹುದು. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರನ್ನು ಕೂಡ ಸಂಪರ್ಕಿಸಬಹುದಾಗಿದೆ.

Advertisement

ದಂಡ, ಜನಜಾಗೃತಿ, ಚಿಕಿತ್ಸೆ
ಜಿಲ್ಲಾಡಳಿತ, ಜಿ. ಪಂ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಹಯೋಗದಿಂದ ಕಾರ್ಯಾಚರಣೆಗಳನ್ನು ನಡೆಸಿ ದಂಡ ವಿಧಿಸಲಾಗುತ್ತಿದೆ. ಇದರ ಜತೆಗೆ ವ್ಯಾಪಕವಾಗಿ ಜನಜಾಗೃತಿ ಮೂಡಿಸಲಾಗುತ್ತಿದೆ. ತಂಬಾಕು ವ್ಯಸನ ಮುಕ್ತಗೊಳಿಸಲು ಉಚಿತವಾಗಿ ಚಿಕಿತ್ಸೆ ಕೂಡ ನೀಡಲಾಗುತ್ತಿದೆ.
– ಡಾ| ಜಗದೀಶ್‌, ಸರ್ವೇಕ್ಷಣಾಧಿಕಾರಿ, ದ.ಕ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next