Advertisement

ನಾಳೆ ಎನ್‌ಡಿಎ 4ನೇ ವರ್ಷಾಚರಣೆ

06:00 AM May 25, 2018 | |

ಹೊಸದಿಲ್ಲಿ: ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದು ಶನಿವಾರ 4 ವರ್ಷ ಪೂರೈಸಲಿದ್ದು, ಬಿಜೆಪಿ ಸಂಭ್ರಮಾಚರಣೆ ಹಮ್ಮಿಕೊಂಡಿದೆ. ಈ ವೇಳೆ ನಾಲ್ಕು ವರ್ಷಗಳಲ್ಲಿ ಸರಕಾರದ ಸಾಧನೆ‌ಗಳನ್ನು ಜನರಿಗೆ ತಲುಪಿಸಲು ನಿರ್ಧರಿಸಲಾಗಿದೆ. ಅಲ್ಲದೆ ಮುಂಬರುವ ಲೋಕಸಭೆ ಚುನಾವಣೆ ಪ್ರಚಾರದ ಥೀಮ್‌ ಕೂಡ ಅನಾವರಣಗೊಳ್ಳಲಿದೆ. ವರ್ಷಾಚರಣೆ ಸಂಭ್ರಮಕ್ಕೆ ಸಾಫ್ ನಿಯತ್‌ ಸಹಿ ವಿಕಾಸ್‌ (ಪರಿಶುದ್ಧ ಧ್ಯೇಯ, ಸರಿಯಾದ ಅಭಿವೃದ್ಧಿ) ಎಂಬ ಟ್ಯಾಗ್‌ಲೈನ್‌ ಬಳಸಲು ನಿರ್ಧರಿಸಲಾಗಿದೆ. ಸರಕಾರ ಈ ನಾಲ್ಕು ವರ್ಷಗಳಲ್ಲಿ ಮಾಡಿದ ಸಾಧನೆಗಳ ವಿವರಗಳನ್ನು ಈ ವೇಳೆ ಜನರಿಗೆ ತಲುಪಿಸಲಾಗುತ್ತದೆ. ನಾವು ಸರಿದಾರಿಯಲ್ಲಿ ಸಾಗುತ್ತಿದ್ದೇವೆ ಎಂಬುದನ್ನು ಜನರಿಗೆ ಮನದಟ್ಟು ಮಾಡುವುದು ಈ ಪ್ರಚಾರದ ಮುಖ್ಯ ಉದ್ದೇಶ.

Advertisement

ಪ್ರಮುಖ ಸಚಿವಾಲಯದಲ್ಲಿನ ಸಾಧನೆಗಳ ಬಗ್ಗೆ ಸಚಿವರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅಲ್ಲದೆ ಇದನ್ನು ಸಾಮಾಜಿಕ ಮಾಧ್ಯಮಗಳಲ್ಲೂ  ಪ್ರಸಾರ ಮಾಡಲಾಗು ತ್ತದೆ. ಒಂದು ಲಕ್ಷಕ್ಕೂ ಹೆಚ್ಚು ಪ್ರತಿಭಾನ್ವಿತರು ದೇಶದ ದಲಿತರನ್ನು ಭೇಟಿ ಮಾಡಲಿದ್ದಾರೆ. ಇದಲ್ಲದೆ ಇತರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಪ್ರಧಾನಿ ಮೋದಿ ಒಡಿಶಾದಲ್ಲಿ ಇರಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next