Advertisement

ನಾಳೆ ಮೌಕ್ತಿಕಾಂಬದೇವಿ ಅದ್ದೂರಿ ಕರಗ ಮಹೋತ್ಸವ

12:12 PM May 17, 2019 | pallavi |

ದೇವನಹಳ್ಳಿ: ನಗರದ ಇತಿಹಾಸ ಪ್ರಸಿದ್ಧ ಮೌಕ್ತಿಕಾಂಬ ಕರಗ ಮಹೋತ್ಸವ ಮೇ 18ರಂದು ರಾತ್ರಿ ಒಂದು ಗಂಟೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ತಾಲೂಕು ತಿಗಳರ ಸಂಘದ ಅಧ್ಯಕ್ಷ ವಿ.ಗೋಪಾಲಕೃಷ್ಣ ತಿಳಿಸಿದರು.

Advertisement

ನಗರದ ಮರಳುಬಾಗಿಲಿನಲ್ಲಿರು ಮೌಕ್ತಿಕಾಂಬ ದೇಗುಲದ ಆವರಣದಲ್ಲಿ ನಡೆದ ಕರಗ ಮಹೋತ್ಸವ ಸಂಬಂಧಿಸಿದಂತೆ ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.

ಬೆಂಗಳೂರಿನಲ್ಲಿ ಪ್ರಾರಂಭವಾದ ಕರಗೋತ್ಸವ ದೇವನಹಳ್ಳಿಯಲ್ಲೂ ಪ್ರತಿ ವರ್ಷ ನಡೆದುಕೊಂಡು ಬಂದಿದೆ. 1836ರಲ್ಲಿ ಬ್ರಿಟಿಷರು ಕರಗವನ್ನು ಪ್ರಾರಂಭಿಸಿದರು. ಅಲ್ಲಿಂದ ಕರಗ ಮಾಡಲು ಅನುಮತಿ ನೀಡುತ್ತಿದ್ದರು. ತದನಂತರ 1947ರಿಂದ ನಿರಂತರವಾಗಿ ಕರಗ ಮಹೋತ್ಸವವನ್ನು ನಡೆಸಿ ಕೊಂಡು ಬರುತ್ತಿದ್ದೇವೆ. ರಾಮಯ್ಯ 20 ವರ್ಷಗಳ ಕಾಲ, ಲಕ್ಷ್ಮಣ 12ವರ್ಷ, ವೆಂಕಟಸ್ವಾಮಪ್ಪ 3 ವರ್ಷ, ಗಣಾಚಾರಿ ಗೋಪಾಲಪ್ಪ 3 ವರ್ಷ, ಕೃಷ್ಣಪ್ಪ 15ವರ್ಷ, ಭೀಮಣ್ಣ 8 ವರ್ಷ, ಚಿನ್ನಣ್ಣ 25 ವರ್ಷ, ರವಿಕುಮಾರ್‌ ಕಳೆದ 8ವರ್ಷಗಳಿಂದ ಕರಗವನ್ನು ಹೊರುತ್ತಿದ್ದಾರೆ ಎಂದು ಹೇಳಿದರು.

ಇತಿಹಾಸ ಪ್ರಸಿದ್ಧ ಕರಗ: ಬೆಂಗಳೂರು ಬಿಟ್ಟರೆ ದೇವನಹಳ್ಳಿ ಕರಗ ಇತಿಹಾಸ ಪ್ರಸಿದ್ಧಿಯಾಗಿದೆ. ತಾಲೂಕಿನ ಬೈಚಾಪುರ, ರಾಯಸಂದ್ರ, ಚಿಕ್ಕ ಹೊಸಹಳ್ಳಿ, ದೊಡ್ಡಹೊಸಹಳ್ಳಿ, ಕಾಡೇರಪ್ಪನಹಳ್ಳಿ, ನಲ್ಲೂರು, ಬಿದಲಪುರ, ಮಲ್ಲೇನಹಳ್ಳಿ, ಲಾಲ ಗೊಂಡನಹಳ್ಳಿ, ಚಿಕ್ಕಸಣ್ಣೆ, ದೊಡ್ಡಸಣ್ಣೆ, ದೇವನಹಳ್ಳಿ ನಗರದ 23ವಾರ್ಡುಗಳಲ್ಲಿರುವ ತಿಗಳ ಸಮುದಾ ಯದ ಮುಖಂಡರು, ಕುಲಸ್ಥರು ಭಾಗವಹಿ ಸಲಿದ್ದಾರೆ. ಕರಗದ ಪೂಜಾರಿ ರವಿಕುಮಾರ್‌ ಕರಗವನ್ನು ಹೊರಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮಗಳು: ದೇಗುಲ ಸಮಿತಿ ಅಧ್ಯಕ್ಷ ಎಸ್‌.ಆರ್‌.ವಿಜಯ್‌ಕುಮಾರ್‌ ಮಾತನಾಡಿ, ಮೇ 16 ರಂದು ಬೆಳಗಿನ ಜಾವ 4 ಗಂಟೆಗೆ ಹಸಿಕರಗ ನಡೆಯಲಿದೆ. ಮೇ 17ರಂದು ರಾತ್ರಿ 8ಗಂಟೆಗೆ ದೀಪದ ಆರತಿ, ಅಗ್ನಿಕುಂಡ ನಡೆಯಲಿದೆ. ಮೇ 18ರಂದು ಕರಗ (ಶಕೊöೕತ್ಸವ) ರಾತ್ರಿ 1ಗಂಟೆಗೆ ದೇವಸ್ಥಾನದಿಂದ ಕರಗ ಹೊರಟು, ನಗರದ ರಾಜ ಬೀದಿಗಳಲ್ಲಿ ಕರಗ ಸಂಚರಿಸಲಿದೆ. ಮೇ 19ರಂದು ಸಂಜೆ 4 ಗಂಟೆಗೆ ವಸಂತೋತ್ಸವ ಅದೇ ದಿನ ರಾತ್ರಿ 8ಗಂಟೆಗೆ ಧ್ವಜಾವರೋಹಣ, ಮೇ 20ರಂದು ರಾತ್ರಿ 8 ಗಂಟೆಗೆ ಪಣಸ್ತರ ಪೂಜೆ ಮತ್ತು ಮಹಾ ಮಂಗಳಾರತಿ ನಡೆಯಲಿದೆ ಎಂದರು.

Advertisement

ಮೌಕ್ತಿಕಾಂಬ ಅಮ್ಮನವರ ಕರಗದ ಪ್ರಯುಕ್ತ ದೇವನಹಳ್ಳಿ ನಗರದಲ್ಲಿ ಗ್ರಾಮದೇವತೆಗಳ ಪಲ್ಲಕಿ ಉತ್ಸವಗಳು, ಮೌಕ್ತಿಕಾಂಬ ದೇವಿಗೆ ವಿಶೇಷ ಹೂವಿನ ಪಲ್ಲಕಿ ಉತ್ಸವ ನಡೆಯಲಿದೆ. ದೇವಾಲ ಯಕ್ಕೆ ವಿದ್ಯುತ್‌ ದೀಪಾಲಂಕಾರ, ಮೇ 18ರಂದು ಸಂಜೆ 6.30ಕ್ಕೆ ದೇವಸ್ಥಾನ ಆವರಣದಲ್ಲಿ ಪದ್ಮಶ್ರೀ ಘಂಟಸಾಲಗಾನ ಕಲಾವೃಂದ, ವಿಜಯ ಪುರ ಜ್ಯೂನಿಯರ್‌ ಘಂಟಸಾಲ ಲಕ್ಷ್ಮೀಪತಿ ಅವರಿಂದ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಕ್ತಾದಿ ಗಳಿಗೆ ಅನ್ನಸಂತರ್ಪಣೆ ಮತ್ತು ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ. ನೂರಾರು ವೀರಗಾರರು ಭಾಗವಹಿಸಲಿದ್ದಾರೆ. ಎಲ್ಲಾ ಜನಾಂಗದವರು ಒಟ್ಟು ಗೂಡಿ ಹಬ್ಬದ ವಾತಾವರಣದಲ್ಲಿ ಕರಗ ಮಹೋ ತ್ಸವ ನಡೆಸಲಿದ್ದಾರೆ. ಯಾವುದೇ ಪಕ್ಷಪಾತವಿಲ್ಲದೆ ಪಕ್ಷಾತೀತವಾಗಿ ನಡೆಸಿಕೊಂಡು ಬಂದಿದ್ದೇವೆ ಎಂದರು.

ಮೌಕ್ತಿಕಾಂಬ ದೇಗುಲ ಸಮಿತಿ ಉಪಾಧ್ಯಕ್ಷ ಜಿ. ರಾಮಚಂದ್ರಪ್ಪ, ಕಾರ್ಯದರ್ಶಿ ಎಂ.ಜಿ.ಕೃಷ್ಣಪ್ಪ, ಖಜಾಂಚಿ ಗೋಪಾಲಪ್ಪ, ಕರಗದ ಪೂಜಾರಿ ರವಿಕುಮಾರ್‌, ಸಮಿತಿ ಸದಸ್ಯರಾದ ಗೋಪಾಲಪ್ಪ, ಕಾಂತರಾಜ್‌, ಶ್ರೀನಿವಾಸ್‌, ಮಂಜುನಾಥ್‌, ರಾಮಕೃಷ್ಣಪ್ಪ, ಉಮೇಶ್‌, ಮುನಿರಾಜು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next