Advertisement
ಇದು ಬೊಮ್ಮಾಯಿ ಅವರ ಮೊದಲ ಬಜೆಟ್ ಆಗಿದ್ದು, ಗಾತ್ರ 2.50 ಲಕ್ಷ ಕೋಟಿ ರೂ. ದಾಟಲಿದೆ. ಕೆಲವು ಜನಪ್ರಿಯ ಘೋಷಣೆಗಳನ್ನು ನಿರೀಕ್ಷಿಸಲಾಗಿದೆ. ಆದಷ್ಟೂ ತೆರಿಗೆ ಹೊರೆರಹಿತ ಬಜೆಟ್ ಮಂಡನೆಗಾಗಿ ಮುಖ್ಯಮಂತ್ರಿ ಕಸರತ್ತು ನಿರತರಾಗಿದ್ದು, ಅದಕ್ಕೆ ಬೇಕಾಗುವಂಥ ಸಂಪನ್ಮೂಲ ಕ್ರೋಡೀಕರಣಕ್ಕೆ ಶ್ರಮಿಸುತ್ತಿದ್ದಾರೆ.
ಕೈಗಾರಿಕೆ, ಪ್ರವಾಸೋದ್ಯಮ ವಲಯದ ಬೇಡಿಕೆಗಳೂ ಹೆಚ್ಚಾಗಿವೆ. ಶಿಕ್ಷಣ, ಆರೋಗ್ಯ, ಆಹಾರ ಮತ್ತು ನಾಗರಿಕ ಪೂರೈಕೆ, ಇಂಧನ, ಕೃಷಿ, ತೋಟಗಾರಿಕೆ, ಕಂದಾಯ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್, ಸಮಾಜ ಕಲ್ಯಾಣ ಇಲಾಖೆಗಳಿಂದ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಡಲಾಗಿದೆ. ಹಿಂದಿನ ಎರಡು ವರ್ಷಗಳ ಬಜೆಟ್ ಮೊತ್ತದಲ್ಲಿ ಹೆಚ್ಚಿನ ಪಾಲನ್ನು ಕೊರೊನಾ ಹಿನ್ನೆಲೆಯಲ್ಲಿ ಮೂಲ ಸೌಕರ್ಯಕ್ಕೆ ಬಳಸ ಲಾಗಿದ್ದು, ಈ ಬಾರಿ ವಿವಿಧ ಇಲಾಖೆಗಳ ಬೇಡಿಕೆ ಈಡೇರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಚುನಾವಣೆ ವರ್ಷ ಆದ ಕಾರಣ ಆಡಳಿತಾರೂಢ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ದೊಡ್ಡ ಮೊತ್ತದ ಅನುದಾನಕ್ಕಾಗಿ ಬೇಡಿಕೆ ಇಟ್ಟಿದ್ದು, ಇದೆಲ್ಲವನ್ನೂ ಸರಿದೂಗಿಸಲು ಮುಖ್ಯಮಂತ್ರಿ ಬೊಮ್ಮಾಯಿ ಶ್ರಮಿಸುತ್ತಿದ್ದಾರೆ.
Related Articles
ಪ್ರಸ್ತುತ ರಾಜ್ಯದ ಸಾಲ ಮಾರ್ಚ್ ಅಂತ್ಯಕ್ಕೆ 4,57,899 ಕೋಟಿ ರೂ. ಇದ್ದು, 2022-23ನೇ ಸಾಲಿನಲ್ಲಿ 5 ಲಕ್ಷ ಕೋಟಿ ರೂ. ದಾಟಲಿದೆ. 2018-19ರಲ್ಲಿ 2,92,220 ಕೋ. ರೂ. ಇದ್ದ ಸಾಲ 2021-22ನೇ ಸಾಲಿನಲ್ಲಿ 4,57,899 ಕೋಟಿ ರೂ.ಗೇರಿದೆ. 2021-22ನೇ ಸಾಲಿನಲ್ಲಿ 71,332 ಕೋಟಿ ರೂ. ಸಾಲ ಪಡೆಯಲಾಗಿದೆ.
Advertisement
ಸಂಭಾವ್ಯ ಘೋಷಣೆಗಳು01ಬಿಪಿಎಲ್ ಕಾರ್ಡ್‌ದಾರರಿಗೆ ಒಂದು ಕೆಜಿ ಹೆಚ್ಚುವರಿ ಅಕ್ಕಿ
02″ಮರಳಿ ತಾಯ್ನಾಡಿಗೆ’ ಯೋಜನೆ ಅನುಷ್ಠಾನ
03ಮುಂಬಯಿ – ಬೆಂಗ ಳೂರು- ಚೆನ್ನೈ ಕೈಗಾರಿಕಾ ಕಾರಿಡಾರ್‌ಗಳಲ್ಲಿ ಕೈಗಾರಿಕಾ ಟೌನ್‌ಶಿಪ್