ಸಾಕುಪ್ರಾಣಿ ಅಂದ್ರೆ ಎಲ್ಲರ ಕಣ್ಮುಂದೆ ಬರೋ ಮೊದಲ ಪ್ರಾಣಿ ನಾಯಿ. ನಾಯಿ ಅಂದ್ರೆ ಕೆಲವರಿಗೆ ಎಷ್ಟೊಂದು ಇಷ್ಟ ಅಂದ್ರೆ ಅದಕ್ಕೊಂದು ಚಂದದ ಹೆಸರನ್ನು ಇಟ್ಟು , ಅದನ್ನು ಮುದ್ದು ಮಾಡುತ್ತ, ಅದರ ಜೊತೆ ಆಟ ಆಡೋದಲ್ಲದೆ ಅದಕ್ಕೊಂದು ವ್ಯಕ್ತಿತ್ವ ಕೊಟ್ಟು ತಮ್ಮ ಮನೆಯ ಸದಸ್ಯ ಸ್ಥಾನ ಕೊಡ್ತಾರೆ. ನನಗೆ ಚಿಕ್ಕಂದಿನಿಂದ ನಾಯಿ ಅಂದ್ರೆ ಇಷ್ಟ ಇರ್ಲಿಲ್ಲ. ನಮ್ಮ ಮನೇಲಿ ನಾಯಿ ಇಲ್ಲದೇ ಇರೋಕೋ ಏನೋ ನನಗೆ ನಾಯಿ ಅಂದ್ರೆ ಅಷ್ಟಕ್ಕಷ್ಟೇ ಆಗಿತ್ತು.
ಒಂದು ದಿನ ನಾನು ನಮ್ಮ ಪಕ್ಕದ್ಮನೆಗೆ ಹೋಗಿದ್ದೆ. ದಿನಾ ನಾಯಿ ಕಟ್ಟಿ ಹಾಕ್ತಿದ್ದ ಅವ್ರು ಆವತ್ತು ಕಟ್ಟಿರ್ಲಿಲ್ಲ. ನಾನು ಅದನ್ನ ನೋಡೆª ಗೇಟ್ ತೆಗೆದು ಅವ್ರ ಮನೆಗೆ ಹೋದದ್ದೇ ತಡ, ಎಲ್ಲೋ ಇದ್ದ ಆ ನಾಯಿ ಓಡಿಬಂದು ಇನ್ನೇನು ನನಗೆ ಕಚ್ಚೇ ಬಿಡು¤ ಅನ್ನೋವಷ್ಟರಲ್ಲಿ ಅವ್ರ ಮನೆಯವರು ಬಂದು ಅದನ್ನ ಹಿಡಿದು ಕಟ್ಟಿ ಹಾಕಿದ್ರು. ಅಬ್ಟಾ ! ಕಚ್ಚಿದ್ರೆ ಹದಿನಾಲ್ಕು ಇಂಜೆಕ್ಷನ್. ಈವಾಗ ನೆನಪಿಸ್ಕೊಂಡ್ರೂ ಬೆಚ್ಚಿ ಬೀಳ್ತೀನಿ. ಆವತ್ತೇ ಕೊನೆ ಆ ನಾಯಿ ಇರೋ ತನಕ ಅವ್ರ ಮನೆ ಕಡೆ ತಲೆ ಹಾಕಿದ್ರೆ ಕೇಳಿ?
ಒಂದ್ಸಲ ಬೇಸಿಗೆ ರಜೆಗೆ ಬೆಂಗಳೂರಲ್ಲಿದ್ದ ಚಿಕ್ಕಪ್ಪ-ಚಿಕ್ಕಮ್ಮನ ಮನೆಗೆ ಹೋಗಿದ್ದೆ. ಅವ್ರ ಮನೆ ತಲುಪೋ ತನಕ ಮೊದಲ ಸಲ ಬೆಂಗ್ಳೂರ್ ನೋಡ್ತಿರೋ ಖುಷೀಲಿ ತೇಲಾಡ್ತಿದ್ದೆ. ಮಹಡಿ ಮೇಲಿದ್ದ ಚಿಕ್ಕಪ್ಪನ ರೂಮ್ ನೋಡಿ ಮೆಟ್ಟಿಲು ಹತ್ತೋಕೆ ಹೋದೋಳು ಮೆಟ್ಟಿಲ ಹತ್ರ ಮಲಗಿದ್ದ ನನಗಿಂತಲೂ ಎತ್ತರ ಇದ್ದ ನನ್ನ ನೋಡಿ ಬೊಗಳ್ಳೋಕೆ ಶುರು ಮಾಡಿದ ನಾಯಿನಾ ನೋಡಿ ಬೆಚ್ಚಿ ಹೋದಷ್ಟೇ ವೇಗದಲ್ಲಿ ಹಿಂದಕ್ಕೆ ಬಂದೋಳು ವಾಪಾಸ್ ಊರಿಗೆ ಹೋಗೋಣ ಅಂತ ಅಳ್ಳೋಕೆ ಶುರು ಮಾಡಿದ್ದೆ. ಆ ಮನೆಯವರು ಬಂದು ನಾಯಿನಾ ಒಳಗೆ ಕರೆದೊRಂಡು ಹೋದ್ಮೇಲೆ ಮಹಡಿ ಮೇಲೆ ಹೋದೋಳು ಕೆಳಗೆ ಬಂದಿದ್ದು ವಾಪಾಸ್ ಊರಿಗೆ ಹೋಗ್ಬೇಕಾದ್ರೇನೆ!
ಈ ಎಲ್ಲಾ ಘಟನೆಗಳು ಆದ್ಮೇಲಂತು ನಾನು ನಾಯಿನ ಹೇಟ್ ಮಾಡೋಕೆ ಶುರು ಮಾಡಿºಟ್ಟಿದ್ದೆ. ನನ್ನ ಫ್ರೆಂಡ್ ಒಮ್ಮೆ ಅವರ ಮನೆ ನಾಯಿ ಸತ್ತೋದಾಗ ಅತ್ತಿದ್ದನ್ನು ನೋಡಿ ನಕ್ಕಿದ್ದೆ. ಹೀಗಿರ್ಬೇಕಾದ್ರೆ ನನ್ನ ತಮ್ಮ, “”ಎಲ್ಲರ ಮನೇಲೂ ನಾಯಿ ಇದೆ. ನಾವು ನಾಯಿನಾ ಸಾಕೋಣ” ಅಂದಾಗ ನಾನು ಅದನ್ನ ಆಕ್ಷೇಪಿಸಿದ್ದೆ. ಆದ್ರೆ ಅವ್ರು ಅಮ್ಮನನ್ನು ಒಪ್ಪಿಸಿ ಒಂದು ಪುಟಾಣಿ ನಾಯಿ ಮರೀನಾ ತಂದೇಬಿಟ್ಟ.
ನನ್ನ ತಮ್ಮ ನಾಯಿ ಮರೀನಾ ತಂದ ಮೊದಲ ಎರಡೂರು ದಿನ ಅದನ್ನ ಕಟ್ಟಿಹಾಕಿ ಅದು ಕೂಗಾಡೋದನ್ನ ನಿಲ್ಲಿಸಿದ ಮೇಲೆ ಬಿಟ್ಟಿದ್ದ. ಅದು ನಾನು ಮನೆ ಒಳಗಿನಿಂದ ಹೊರಗೆ ಬಂದ್ರೆ ಸಾಕು ನನ್ನ ಕಾಲಿನತ್ರ ಓಡಿ ಬರಿ¤ತ್ತು. ನಾನು ಅದು ಕಚ್ಚೋಕೆ ಬರಿ¤ದೆ ಅಂತ ಮನೆ ಒಳಗೆ ಓಡ್ತಿದ್ದೆ. ಅಮ್ಮ ಮತ್ತು ತಮ್ಮ “”ಅದು ಏನೂ ಮಾಡಲ್ಲ” ಅಂತ ಹೇಳ್ತಿದ್ರು. ನಾನು ಅದರ ಹತ್ರ ಹೋಗ್ತಿರ್ಲಿಲ್ಲ. ಕೊನೆಗೆ ಒಂದಿನ ಧೈರ್ಯ ಮಾಡಿ ನಾಯಿಮರಿ ನನ್ನ ಹತ್ರ ಓಡಿ ಬಂದಾಗ ಕದಲದೇ ಅಲ್ಲೇ ನಿಂತೆ. ಅಕಸ್ಮಾತ್ ಅದೇನಾದ್ರೂ ಕಚ್ಚಿದ್ರೆ ಆ ನೆಪ ಇಟ್ಕೊಂಡು ಅದನ್ನ ಮನೆಯಿಂದ ಹೊರ ಹಾಕೋ ಪ್ಲಾನ್ ನನ್ನದಾಗಿತ್ತು. ಆದ್ರೆ ನಾಯಿಮರಿ ನನ್ನ ಕಾಲನ್ನ ಕಚ್ಚಿಲ್ಲ. ಬದಲಿಗೆ ನನ್ನ ಕಾಲನ್ನ ನೆಕ್ಲಿಕ್ಕೆ ಶುರು ಮಾಡು¤. ಆಗ ನನಗೆ ಅದ್ರ ಮೇಲಿದ್ದ ಭಯ ಕಮ್ಮಿ ಆಯ್ತು. ನಾನು ಶಾಲೆಗೆ ಹೊರಟ್ರೆ ಸಾಕು ರಸ್ತೆವರೆಗೂ ನನ್ನ ಹಿಂದೇನೇ ಬರಿ¤ತ್ತು. ನಾನು ಶಾಲೆಯಿಂದ ಬರೋ ಟೈಮ್‌ಗೆ ಸರಿಯಾಗಿ ರಸ್ತೆ ಹತ್ರ ಬಂದು ಕಾಯ್ತಿತ್ತು.
ದಿನ ಕಳೆದಂತೆ ನನಗೆ ಅದ್ರ ಮೇಲಿದ್ದ ಭಯ ಕಮ್ಮಿ ಆಗಿತ್ತು. ನಾನು ಅದನ್ನ ಮುದ್ದಿಸೋಕೆ, ಅದರ ಜೊತೆ ಆಟ ಆಡೋಕೆ ಶುರುಮಾಡಿದ್ದೆ. ನಾಯಿ ಮರೀನಾ ಮನೆಗೆ ತಂದು ಮೂರು ತಿಂಗಳಾಗೋವಷ್ಟರಲ್ಲಿ ಅದು ನನ್ನ ಮತ್ತು ನನ್ನ ಮನೆಯವರೆಲ್ಲರ ಪ್ರೀತಿಯ ಟಾಮಿ ಆಗಿತ್ತು.
ಹೀಗಿರ್ಬೇಕಾದ್ರೆ ಒಂದಿನ ಟಾಮಿ ಊಟ ಮಾಡೋದನ್ನ ನಿಲ್ಲಿಸಿ ಬಿಡು¤. ಏನೇ ಕೊಟ್ರೂ ಅದನ್ನ ತಿನ್ನುತ್ತಿರ್ಲಿಲ್ಲ. ತನ್ನ ಜಾಗದಲ್ಲಿ ಹೋಗಿ ಸುಮ್ಮನೆ ಮಲಗ್ತಿತ್ತು. ಟಾಮಿಗೆ ಏನಾಯ್ತು ಅಂತ ನಮಗೆ ಗೊತ್ತಾಗ್ಲಿಲ್ಲ. ಅಮ್ಮ “ಬೆಳಿಗ್ಗೆ ಸರಿಹೋಗುತ್ತೆ ಬಿಡಿ’ ಅಂತಂದ್ರು. ಬೆಳಿಗ್ಗೆ ಎದ್ದ ತಕ್ಷಣಾನೇ ನಾನು, ನನ್ನ ತಮ್ಮ ಟಾಮಿ ಹತ್ರ ಹೋದ್ವಿ. ಆದ್ರೆ ಅದು ನಮ್ಮನ್ನು ಬಿಟ್ಟು ದೂರ ಹೋಗಿತ್ತು. ನನಗೆ ಗೊತ್ತಿಲ್ಲದೇನೆ ನನ್ನ ಕಣ್ಣಲ್ಲಿ ನೀರು ಬರಿ¤ತ್ತು.
ಸುಶ್ಮಿತಾ ನೇರಳಕಟ್ಟೆ
ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ