Advertisement

Delhiಯಲ್ಲಿ ಕೇಂದ್ರದಿಂದ ಟೊಮೆಟೋ ಮಾರಾಟ: ಕೆ.ಜಿ.ಗೆ 60 ರೂ. ನಿಗದಿ

12:23 AM Jul 30, 2024 | Team Udayavani |

ಹೊಸದಿಲ್ಲಿ: ಮುಂದಿನ 7-10 ದಿನಗಳಲ್ಲಿ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಟೊಮೆಟೋ ದರ ಇಳಿಕೆಯಾಗಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಸರಕಾರದ ವತಿ ಯಿಂದ ಪ್ರತಿ ಕೆಜಿ ಟೊಮೆಟೋಗೆ 60 ರೂ.ನಂತೆ ಮಾರಾಟ ಮಾಡುವ ಸೌಲಭ್ಯ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

Advertisement

ಇತ್ತೀಚಿನ ದಿನ ಗಳಲ್ಲಿ ದೆಹಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತಿ ಕೇಜಿ ಟೊಮೆಟೋಗೆ 70 ರೂ.ಗಳಿಂದ 100 ರೂ. ವರೆಗೆ ಏರಿಕೆಯಾಗಿತ್ತು. ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟ ನಿಯಮಿತ (ಎನ್‌ಸಿಸಿಎಫ್)ದ ವತಿಯಿಂದ ಟೊಮೆಟೋ ಮಾರಾಟ ನಡೆಸಲು ವ್ಯವಸ್ಥೆ ಮಾಡಲಾ ಗಿದೆ. ಬೆಲೆ ಏರಿಕೆಯನ್ನು ನಿಯಂತ್ರಿ ಸಲು ಕೇಂದ್ರವು ಬೆಲೆ ಸ್ಥಿರೀಕರಣ ನಿಧಿಯನ್ನು (ಪಿಎಸ್‌ಎಫ್)ಸ್ಥಾಪಿಸಿದೆ ಎಂದು ಜೋಷಿ ತಿಳಿಸಿದರು.

ಟೊಮೇಟೊಗಳನ್ನು ರೈತರಿಂದ ನೇರವಾಗಿ ಅಥವಾ ಹೋಲ್‌ ಸೇಲ್‌ ಮಂಡಿಗಳಲ್ಲಿ ಕೊಳ್ಳಲಾಗುವುದು ಇದರಿಂದ ಮಧ್ಯವರ್ತಿಯ ವೆಚ್ಚ ಕಡಿಮೆಯಾಗುವುದರಿಂದ, ಇದರ ನೇರ ಲಾಭವನ್ನು ಬಳಸಿ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಟೊಮೇಟೊ ಪೂರೈಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next