Advertisement

ಟೊಮೆಟೋ ಬೆಲೆ ಕುಸಿತ: ಕಂಗಾಲಾದ ರೈತ

02:58 PM Mar 20, 2020 | Suhan S |

ಹಳೇಬೀಡು: ಹೋಬಳಿಯ ಸಿದ್ದಾಪುರ, ಕಟ್ಟೆ ಸೋಮನಹಳ್ಳಿ, ಮಲ್ಲಾಪುರ, ಹಗರೆ, ಬಸ್ತಿ ಹಳ್ಳಿ, ಚೀಲನಾಯ್ಕನಹಳ್ಳಿ, ಮಾಯ ಗೊಂಡನಹಳ್ಳಿ, ಹುಲಿಕೆರೆಯ ರೈತರು ತರಕಾರಿಯನ್ನೇ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಆದರೆ ಟೊಮೆಟೋ ಬೆಲೆ ತೀವ್ರವಾಗಿ ಕುಸಿದಿ ರುವುದರಿಂದ ಹಾಕಿದ ಬಂಡವಾಳವೂ ಸಿಗದೇ ರೈತರು ಕಂಗಾಲಾಗಿದ್ದಾರೆ.

Advertisement

ಒಂದು ಎಕರೆ ಟೊಮೆಟೋ ಬೆಳೆಗೆ 50 ಸಾವಿರ ಖರ್ಚು: ರೈತ ಒಂದು ಎಎಕರೆ ಪ್ರದೇಶ ದಲ್ಲಿ ಟೊಮೆಟೋ ಬೆಳೆ ಬೆಳೆಯಲು ಹನಿ ನೀರಾವರಿ ಸುಮಾರು 25 ಸಾವಿರ ರೂ. ಖರ್ಚಾಗುತ್ತದೆ. ಸಸಿಗಳು, ಔಷಧಿ ಬೇಸಾಯ,ಕಳೆ ಆಳು ಕಾಳು ಸೇರಿದಂತೆ 25 ಸಾವಿರ ರೂ. ಸೇರದಂತೆ ಒಟ್ಟಾರೆ ಕನಿಷ್ಠ 50 ಸಾವಿರ ರೂ. ಖರ್ಚು ಬರುತ್ತದೆ. ಇಷ್ಟೆಲ್ಲಾ ಖರ್ಚು ಮಾಡಿ ಟೊಮೆಟೋ ಬೆಳೆದ ಸೂಕ್ತ ಬೆಲೆ ಸಿಗದಿದ್ದಾಗ ತಲೆಯ ಮೇಲೆ ಕೈಹೊತ್ತು ಕೂರುವಂತಾಗುತ್ತದೆ.

ಕೋವಿಡ್ 19 ಎಫೆಕ್ಟ್ ನಿಂದ ಬೆಲೆ ಕುಸಿತ: ಬೇಸಿಗೆ ಸಂದರ್ಭದಲ್ಲಿ ಈ ಭಾಗದ ತರಕಾರಿ ಮಂಗಳೂರು, ಬೆಂಗಳೂರು, ಉಡುಪಿ, ಜಿಲ್ಲೆಗಳಲ್ಲದೇ ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಗೆ ಸರಬರಾಜಾಗುತ್ತಿತ್ತು. ಒಂದು  ಟೊಮೆಟೋಗೆ 250 ರಿಂದ 350ರೂ. ಸಿಗುತ್ತಿತ್ತು. ಕೋವಿಡ್ 19  ಭೀತಿಯಿಂದಾಗಿ ತರಕಾರಿ ಸರಬರಾಜು ಸ್ಥಗಿತಗೊಂಡಿದ್ದು, ಒಂದು ಬಾಕ್ಸ್‌ ಟೊಮೆಟೋ ಬೆಲೆ 100 ರಿಂದ 125 ರೂ.ಗೆ ಇಳಿದಿದ್ದು, ರೈತರು ಚಿಂತೆಗೀಡಾಗಿದ್ದಾರೆ.

ಚಿನ್ನದ ಒಡವೆಗಳನ್ನು ಅಡವಿಟ್ಟು ಸಾಲ ತಂದು ತರಕಾರಿ ಬೆಳೆದಿದ್ದೇವೆ. ಈ ಬಾರಿ ಟೊಮೆಟೋ ಬೆಲೆ ತೀವ್ರವಾಗಿ ಕುಸಿದಿರುವುದರಿಂದ ಹಾಕಿದ ಬಂಡ ವಾಳವೂ ಬರದೇ ತೀವ್ರ ನಷ್ಟ ಅನುಭವಿ ಸುವಂತಾಗಿದೆ. -ಚೇತನ್‌, ರೈತ ಹುಲಿಕೆರೆ

Advertisement

Udayavani is now on Telegram. Click here to join our channel and stay updated with the latest news.

Next