Advertisement
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್ ಕುಮಾರ್ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಈ ಕಾಯಿಲೆಯು ಸಾಮಾನ್ಯವಾಗಿ ಚರ್ಮದ ತುರಿಕೆ, ಮೈಯಲ್ಲಿ ಕೆಂಪಾಗುವುದು, ತೀವ್ರಜ್ವರ, ಮೈ-ಕೈ ನೋವು, ಕೀಲು ನೋವು, ಆಯಾಸ ಮೊದಲಾದ ಲಕ್ಷಣಗಳಿರುತ್ತದೆ. ಜಿಲ್ಲೆಯ ಸರಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಆಸ್ಪತ್ರೆ, ವೆನಾÉಕ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಈ ರೀತಿಯ ಲಕ್ಷಣಗಳಿರುವ ಮಕ್ಕಳು ಚಿಕಿತ್ಸೆ ಪಡೆದಿದ್ದರೆ ವಿವರಗಳನ್ನು ಪ್ರತೀ ದಿನ ಅಪ್‌ಡೇಟ್ ಮಾಡುವಂತೆ ಸೂಚಿಸಲಾಗಿದೆ’ ಎಂದಿದ್ದಾರೆ.
Related Articles
ಟೊಮೇಟೊ ಜ್ವರ ಮಂಗಳೂರಿನಲ್ಲಿ ಈ ಹಿಂದೆ ಕಂಡುಬಂದಿತ್ತೇ? ಎಂಬ ಅನುಮಾನ ವ್ಯಕ್ತವಾಗಿದೆ. ಕುತ್ತಾರು ಮೂಲದ ಸುಧಾಕರ್ ಅವರ ಎರಡೂವರೆ ವರ್ಷದ ಮಗುವಿಗೆ ಮೂರು ವಾರದ ಹಿಂದೆ ಜ್ವರ ಸಹಿತ ಕಾಲಿನಡಿ, ಮೊಣಕಾಲು, ಮುಖ, ಕೈಯಲ್ಲಿ ಟೊಮೇಟೊ ಬಣ್ಣದ ಗುಳ್ಳೆಗಳು ಮೂಡಿದ್ದವು. ತತ್‌ಕ್ಷಣ ವೈದ್ಯರನ್ನು ಭೇಟಿಯಾಗಿದ್ದರು. ಸೂಕ್ತ ಚಿಕಿತ್ಸೆಯ ಬಳಿಕ ಗುಣಮುಖವಾಗಿದೆ ಎನ್ನುತ್ತಾರೆ ಅವರು. ವೈದ್ಯ ಡಾ| ರವಿಕಿರಣ್ ಪ್ರತಿಕ್ರಿಯಿಸಿ, ಈ ಗುಣಲಕ್ಷಣ ಹೊಂದಿದ ಜ್ವರ ಹೊಸತಲ್ಲ. “ಹ್ಯಾಂಡ್ ಫುಟ್ ಮೌತ್’ ಎಂದು ಇದಕ್ಕೆ ಕರೆಯುವುದುಂಟು. ಈ ಗುಣಲಕ್ಷಣ ಹೊಂದಿದ ರೋಗಿಗಳು ಈ ಹಿಂದೆಯೂ ಚಿಕಿತ್ಸೆ ಪಡೆದಿದ್ದರು’ ಎನ್ನುತ್ತಾರೆ.
Advertisement