Advertisement
ಟೊಮೆಟೋ ರಾಜಧಾನಿ ಎಂದೇ ಕರೆಯಲ್ಪಡುವ ಕೋಲಾರ ಜಿಲ್ಲೆಯಲ್ಲಿ ಇದೀಗ ಟೊಮೆಟೋ ಬೆಳದವರಿಗೆ ಭಾರಿ ಸುಗ್ಗಿ, ಏಕೆಂದರೆ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ಟೊಮೊಟೋ ಧಾರಣೆ 15 ಕೆ.ಜಿ ಬಾಕ್ಸ್‌ಗೆ 1100 ರೂ ದಾಟಿದ್ದು, ಈ ಕೆಂಪು ಸೇಬನ್ನು ಬೆಳೆದಿರುವ ರೈತರು ಸಂತಸದಲ್ಲಿ ತೇಲುತ್ತಿದ್ದಾರೆ.
Related Articles
Advertisement
ಕನ್ಯಾಕುಮಾರಿಯಿಂದ ಕಾಶ್ಮೀರದವರೆವಿಗೂ ದೇಶದ ಪ್ರಮುಖ ಮಾರುಕಟ್ಟೆಗಳಿಗೆ ಕೋಲಾರ ದಿಂದಲೇ ಟೊಮೆಟೋ ಸರಬರಾಜಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತದಲ್ಲಿಯೂ ರೈತರು ಹೆಚ್ಚಾಗಿ ಟೊಮೆಟೋ ಬೆಳೆಯುತ್ತಿದ್ದರೂ ನೆರೆ, ಅಕಾಲಿಕ ಮಳೆ ಇನ್ನಿತರ ಪ್ರಾಕೃತಿಕ ವಿಕೋಪ ಕಾರಣಗಳಿಂದಾಗಿ ಸಮಸ್ಯೆ ಉದ್ಭವಿಸಿದರೆ ಇಡೀ ದೇಶ ಮಾತ್ರವಲ್ಲ, ಪಕ್ಕದ ಬಾಂಗ್ಲಾ, ಪಾಕಿಸ್ತಾನ್ ಮತ್ತಿತರ ದೇಶಗಳು ಟೊಮೆಟೋಗಾಗಿ ಕೋಲಾರದತ್ತಲೇ ಮುಖ ಮಾಡುತ್ತದೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಉತ್ಪಾದನೆ ಯಾಗುವ ಟೊಮೇಟೋವನ್ನು ದೆಹಲಿ, ಮುಂಬೈ, ಚನ್ನೈ ಸೇರಿದಂತೆ ತಮಿಳುನಾಡಿನ ಪ್ರಮುಖ ಮಾರು ಕಟ್ಟೆಗಳು, ಹೈದರಾಬಾದ್‌ಸೇರಿದಂತೆ ಆಂಧ್ರಪ್ರದೇಶದ ಬಹುತೇಕ ನಗರ, ಪಟ್ಟಣಗಳಿಗೆ ಕೋಲಾರದಿಂದಲೇ ಟೊಮೆಟೋ ಸರಬರಾಜಾಗುತ್ತದೆ. ಕೆಲವು ವರ್ಷಗಳ ಹಿಂದೆ ಕೋಲಾರ ಮಾರುಕಟ್ಟೆಗೆ ಸುಮಾರು 60 ಲೋಡ್‌ಗಳಷ್ಟು ಟೊಮೆಟೋ ಸರಬರಾಜಾದರೆ ಈ ಪೈಕಿ 40 ರಿಂದ 45 ಲಾರಿ ಲೋಡುಗಳಷ್ಟು ಟೊಮೇಟೋ ತಮಿಳುನಾಡಿನ ಮಾರುಕಟ್ಟೆಗಳಿಗೆ ತೆರಳುತ್ತಿತ್ತು ಆದರೆ ಇದೀಗ ಬದಲಾಗಿದ್ದು, ಉತ್ತರ ಪ್ರದೇಶದ ಹಲವಾರು ರಾಜ್ಯಗಳಿಗೂ ಟೊಮೆಟೋ ಹೋಗುತ್ತಿದೆ.
ದುಬಾರಿ ಬೆಲೆಗೆ ಗ್ರಾಹಕ ಕಂಗಾಲು: ಕೋಲಾರದ ಮಾರುಕಟ್ಟೆಯಲ್ಲಿಯೇ ಪ್ರತಿ ಕೆಜಿ ಟೊಮೇಟೋ 60 ರಿಂ ದ 100 ರೂಪಾಯಿಗಳವರೆವಿಗೂ ಮಾರಾಟವಾ ಗುತ್ತಿದೆ. ಗ್ರಾಹಕರ ಕೈಗೆ ತಲುಪವ ವೇಳೆಗೆ 100 ರಿಂದ 120 ರೂಪಾಯಿ ದರದಲ್ಲಿ ಪ್ರತಿ ಕೆಜಿ ಮಾರಾಟವಾಗುತ್ತಿದೆ.
ಟೊಮೆಟೋ ಸೀಸನ್ ಫಸಲು: ಸಾಮಾನ್ಯವಾಗಿ ಮೇ, ಜೂನ್, ಜುಲೈ ಆಗಸ್ಟ್ ತಿಂಗಳನ್ನು ಟೊಮೇ ಟೋ ಸೀಸನ್ ಎಂದು ಕರೆಯುತ್ತಾರೆ. ಈ ತಿಂಗಳು ಗಳಲ್ಲಿ ಟೊಮೆಟೋ ಉತ್ಪಾದನೇ ವಿಪರೀತವಾಗುತ್ತದೆ. ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಟೊಮೇಟೋ ಬೆಳೆ ಫಸಲು ನೀಡುವ ಕಾಲ ಇದಾಗಿದೆ. ಹೇರಳವಾಗಿ ಟೊಮೆಟೋ ಬೆಳೆಯುವ ಕೋಲಾರದ ಮಾರುಕಟ್ಟೆಗಳಲ್ಲಿ ಟೊಮೆಟೋಗೆ ಹೆಚ್ಚು ಬೇಡಿಕೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಪ್ರತಿ ಕೆಜಿ ಟೊಮೆಟೋ ಒಂದೆರಡು ರೂಪಾಯಿಗೂ ಇಳಿಯುವ ಅಪಾಯವೂ ಇದೆ. ಟೊಮೆಟೋವನ್ನು ತೋಟದಿಂದ ಕಿತ್ತು ಮಾರುಕಟ್ಟೆಗೆ ಸಾಗಿಸುವ ವೆತ್ಛವೂ ರೈತರಿಗೆ ಸಿಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ರೈತರು ಟೊಮೆಟೋವನ್ನು ಹೊಲದಲ್ಲಿಯೇ ಕೀಳದೆ ಬಿಡುವುದು, ಕಿತ್ತ ಟೊಮೆಟೋಗಳನ್ನು ಪ್ರತಿಭಟನೆ ರೂಪದಲ್ಲಿ ರಸ್ತೆಗೆ ಸುರಿಯುವುದು ಸಾಮಾನ್ಯವಾಗಿದೆ.
ವಿಶ್ವ ಪ್ರಸಿದ್ಧಿ ಕೋಲಾರ ಟೊಮೆಟೋ ಮಾರುಕಟ್ಟೆ: ಏಷ್ಯಾದಲ್ಲಿಯೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಒಳಗಾಗಿರುವ ಕೋಲಾರದ ಎಪಿಎಂಸಿಯ ಆವಕವೇ ದೇಶದ ಟೊಮೇಟೋ ಧಾರಣೆಯನ್ನು ನಿಗದಿಪಡಿಸುತ್ತದೆ. ಟೊಮೆಟೋ ಉತ್ಪಾದನೆ ಕಡಿಮೆ ಎನ್ನುವ ಕಾಲದಲ್ಲಿಯೇ ಕೋಲಾರದ ಮಾರುಕಟ್ಟೆಗೆ ಪ್ರತಿನಿತ್ಯ 1000 ದಿಂದ 1200 ಟನ್ ಟೊಮೇಟೋ ಆವಕವಾಗುತ್ತಿರುವುದರಿಂದ ಕೋಲಾರ ಟೊಮೇಟೋ ಮಾರುಕಟ್ಟೆ ಇತರೇ ರಾಜ್ಯಗಳ ಗಮನ ಸೆಳೆಯುತ್ತಿದೆ.
40 ಲಾರಿ ಲೋಡ್ ಹೊರ ರಾಜ್ಯಗಳಿಗೆ ರವಾನೆ: ಶನಿವಾರ ಕೋಲಾರ ಮಾರುಕಟ್ಟೆ ಒಂದರಿಂದಲೇ 40 ಲಾರಿ ಲೋಡ್ ಟೊಮೇಟೋ ವಿವಿಧ ರಾಜ್ಯಗಳಿಗೆ ಸರಬರಾಜಾಗಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಿಂದ ಕರ್ನಾಟಕದ ವಿವಿಧ ಭಾಗಗಳಿಗೆ 2 ಲಾರಿ ಲೋಡ್ ಸರಬರಾಜಾದರೆ ತಮಿಳುನಾಡಿಗೆ 8 ಲೋಡ್, ಬಿಹಾರಕ್ಕೆ 1 ಲೋಡ್, ಮಹಾರಾಷ್ಟ್ರಕ್ಕೆ 2 ಲೋಡ್, ರಾಜಾಸ್ತಾನ್ ಗೆ 2 ಲೋಡ್, ಉತ್ತರ ಪ್ರದೇಶಕ್ಕೆ 4 ಲೋಡ್, ಗುಜರಾತ್‌ಗೆ 7 ಲೋಡ್, ಕೇರಳಕ್ಕೆ 2 ಲೋಡ್, ಒರಿಸ್ಸಾಗೆ 5 ಲೋಡ್, ಜಾರ್ಕಂಡ್‌ಗೆ ಒಂದು ಹಾಗೂ ಪಶ್ಚಿಮ ಬಂಗಾಳಕ್ಕೆ 3 ಲೋಡ್ ಟೊಮೊಟೋ ಸ ರಬರಾಜಾಗಿದೆ.
ಮಾರುಕಟ್ಟೆಯಲ್ಲಿ ಟೊಮೆಟೋ ಧಾರಣೆ ಪ್ರತಿಬಾಕ್ಸ್‌ಗೆ 1 ಸಾವಿರ ಮುಟ್ಟಿದ್ದು, ರೈತರಿಗೆ ಹೆಚ್ಚು ಲಾಭ ತಂದಿದೆ, ಕೋಲಾರದಿಂದ ಪ್ರತಿನಿತ್ಯ ದೇಶದ ವಿವಿಧ ರಾಜ್ಯಗಳಿಗೆ ಟಮೋಟೋ ಸರಬರಾಜಾಗುತ್ತಿದ್ದು, ಬಕ್ರೀದ್ ಹಿನ್ನಲೆ ಹೆಚ್ಚು ಟಮೊಟೋ ಆವಕ ಹೊ ರಾಜ್ಯಗಳಿಗೆ ಹೋಗುತ್ತಿರುವುದು ಈ ಧಾರಣೆ ಏರಿಕೆಗೆಕಾರಣವಾಗಿದೆ. -ವಿಜಯಲಕ್ಷ್ಮೀ, ಕಾರ್ಯದರ್ಶಿ ಹಾಗೂ ಮುನಿರಾಜು ಸಹಾಯಕ ಕಾರ್ಯದರ್ಶಿ, ಕೋಲಾರ ಎಪಿಎಂಸಿ
ಎಪಿಎಂಸಿ ಮಾರುಕಟ್ಟೆಗೆ ಇಂದು 93 ಬಾಕ್ಸ್ ಟೊಮೆಟೋ ತಂದಿದ್ದೆ, 15 ಕೆಜಿ ಬಾಕ್ಸ್ 1 ಸಾವಿರಕ್ಕೆ ಮಾರಾಟವಾಗಿದೆ, ನಾಳೆಯೂ 200 ಬಾಕ್ಸ್ ಟೊಮೆಟೋ ತರಲು ತೋಟದಲ್ಲಿ ಸಿದ್ದತೆ ಮಾಡಿದ್ದೇವೆ. ಈ ವರ್ಷ ದಲ್ಲೇ ಇಷ್ಟೊಂದು ಉತ್ತಮ ಬೆಲೆ ಸಿಕ್ಕಿರುವುದು ಇದೇ ಮೊದಲಾಗಿದ್ದು, ಸಂತಸ ತಂದಿದೆ. – ಎ.ಮಹೇಂದ್ರ ಟೊಮೆಟೋ ಬೆಳೆಗಾರ, ಅರಾಭಿಕೊತ್ತನೂರು
ಬಕ್ರೀದ್ ಹಿನ್ನಲೆ ಬಾಂಗ್ಲಾ ಗಡಿ ಬಂದ್ ಆಗುವ ಹಿನ್ನಲೆ, ಇಡೀ ದೇಶದ ವಿವಿಧ ರಾಜ್ಯಗಳಲ್ಲಿ ಬಕ್ರೀದ್ ಆಚರಣೆ ಹಿನ್ನಲೆ, ಟೊಮೊ ಟೋಗೆ ಉತ್ತಮ ಬೆಲೆ ಬಂದಿದೆ, ಈ ವರ್ಷದಲ್ಲೇ ಅತ್ಯಂತ ಉತ್ತಮ ಬೆಲೆಗೆ ಮಾರಾಟವಾಗಿದ್ದು, ಗುಜರಾತ್‌ಗೆ 7 ಲೋಡ್, ತಮಿಳುನಾಡಿಗೆ 8 ಲೋಡ್ ಟೊಮೆಟೋ ಹೋಗಿದೆ. – ಚಲಪತಿ, ಸಗಟು ವರ್ತಕರು ಆರ್‌ವಿಎಂ ಮಂಡಿ
– ಕೆ.ಎಸ್.ಗಣೇಶ್