Advertisement

Jr NTR: 2031ರವರೆಗೆ ಯಂಗ್‌ ಟೈಗರ್‌ ಫುಲ್‌ ಬ್ಯುಸಿ..2 ಹೊಸ ಸಿನಿಮಾಗಳಿಗೆ ಗ್ರೀನ್‌ ಸಿಗ್ನಲ್

06:28 PM Jul 31, 2024 | Team Udayavani |

ಹೈದರಾಬಾದ್:‌ ʼಆರ್‌ ಆರ್‌ ಆರ್‌ʼ (RRR) ಬಳಿಕ ಜೂ.ಎನ್‌ ಟಿಆರ್‌‌ (Jr NTR) ಅವರಿಗೆ ಬೇಡಿಕೆ ಹೆಚ್ಚಾಗಿದೆ. ಟಾಲಿವುಡ್‌ ಮಾತ್ರವಲ್ಲದೆ, ಬಾಲಿವುಡ್‌ನ ಬಿಗ್‌ ಬಜೆಟ್‌ ಸಿನಿಮಾದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.

Advertisement

ಜೂ.ಎನ್‌ಟಿಆರ್ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ʼದೇವರʼ (Devara: Part One) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವರ್ಷ ಈ ಸಿನಿಮಾ ರಿಲೀಸ್‌ ಆಗಲಿದೆ. ಇದರೊಂದಿಗೆ ಹೃತಿಕ್‌ ರೋಷನ್‌ ಅವರ ʼವಾರ್-2‌ʼ(War -2) ಸಿನಿಮಾದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.

ಈ ಎರಡು ಸಿನಿಮಾದ ಬಳಿಕ ಜೂ.ಎನ್ ಟಿಆರ್‌ ಪ್ರಶಾಂತ್‌ ನೀಲ್(‌Prashanth Neel) ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾಕ್ಕೆ ಸದ್ಯಕ್ಕೆ ʼಡ್ರ್ಯಾಗನ್‌ʼ ಎಂದು ಟೈಟಲ್‌ ಇಡಲಾಗಿದೆ.

ಇದೀಗ ಜೂ.ಎನ್‌ ಟಿಆರ್‌ ʼಹಾಯ್‌ ನನ್ನಾʼ ಖ್ಯಾತಿಯ ಶೌರ್ಯುವ್ (Shouryuv) ಅವರೊಂದಿಗೆ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

Advertisement

“ಶೌರ್ಯುವ್ ಅವರು ಹೇಳಿದ ಸಬ್ಜೆಕ್ಟ್‌ ಜೂ.ಎನ್‌ ಟಿಆರ್‌ ಅವರಿಗೆ ಇಷ್ಟವಾಗಿದೆ. ಅವರು ಚಿತ್ರದ ಸ್ಕ್ರೀನ್‌ ಪ್ಲೇ ಸ್ವಲ್ಪ ಸುಧಾರಣೆ ಆಗಬೇಕೆಂದು” ಹೇಳಿರುವುದಾಗಿ ವರದಿ ತಿಳಿಸಿದೆ.

“ಜೂ.ಎನ್‌ ಟಿಆರ್‌ ʼವಾರ್‌ -2ʼ, ʼದೇವರ-2ʼ ಹಾಗೂ ಡ್ರ್ಯಾಗನ್‌ ಶೂಟ್‌ ಮುಗಿಸಿದ ಬಳಿಕ, 2026ರ ಆರಂಭದಲ್ಲಿ ಶೌರ್ಯುವ್ ಅವರ ಸಿನಿಮಾಕ್ಕೆ ಕೈಹಾಕಲಿದ್ದಾರೆ. ಇದೊಂದು ಹೈ ಆಕ್ಟೇನ್‌ ಆ್ಯಕ್ಷನ್ ಸಿನಿಮಾವಾಗಲಿದೆ. ಎರಡು ಪಾರ್ಟ್‌ಗಳಲ್ಲಿ ತೆರೆಗೆ ತರುವ ಪ್ಲ್ಯಾನ್‌ ಇದೆ” ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.

“ಸಿನಿಮಾದ ಮೊದಲ ಭಾಗ 2028 ರಲ್ಲಿ ಹಾಗೂ ಸೀಕ್ವೆಲ್‌ 2031ರಲ್ಲಿ ಬರುವ ಸಾಧ್ಯತೆಯಿದೆ” ಎಂದು ವರದಿ ತಿಳಿಸಿದೆ.

ಇದು ಮಾತ್ರವಲ್ಲದೆ ಯಂಗ್‌ ಟೈಗರ್‌ ತಮಿಳು, ತೆಲುಗು, ಕನ್ನಡ ಅಥವಾ ಹಿಂದಿ ಭಾಷೆಯ ಕೆಲ ಸ್ಕ್ರಿಪ್ಟ್‌ ಗಳನ್ನು ಓದುತ್ತಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next