Advertisement

ನಟಿ ಅನುಷ್ಕಾ ಶೆಟ್ಟಿ ಸಹೋದರನಿಗೆ ಮುತ್ತಪ್ಪ ರೈ ಆಪ್ತನಿಂದ ಕೊಲೆ ಬೆದರಿಕೆ

11:56 PM Jun 12, 2022 | Team Udayavani |

ಬೆಂಗಳೂರು: ನಟಿ ಅನುಷ್ಕಾ ಶೆಟ್ಟಿ ಸಹೋದರ ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಗುಣರಂಜನ್‌ ಶೆಟ್ಟಿ ಹತ್ಯೆಗೆ ಮಾಜಿ ಭೂಗತ ಪಾತಕಿ, ದಿ| ಮುತ್ತಪ್ಪ ರೈ ಆಪ್ತ ಸಹಾಯಕ ಮನ್ವಿತ್‌ ರೈ ಸಂಚು ರೂಪಿಸಿದ್ದಾರೆ ಎನ್ನುವ ವದಂತಿ ಹಬ್ಬಿದೆ.

Advertisement

ಈ ಮಧ್ಯೆ ಅದಕ್ಕೆ ಪೂರಕವಾಗಿ ಗುಣರಂಜನ್‌ ಶೆಟ್ಟಿ ಪತ್ರಿಕಾ ಪ್ರಕಟನೆ ನೀಡಿದ್ದು, ಹತ್ಯೆಗೆ ಸಂಚು ರೂಪಿಸಿರುವ ವಿಷಯ ಸತ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೂಂದೆಡೆ ಹತ್ಯೆ ಸಂಚಿಗೂ ತನಗೂ ಯಾವುದೇ ಸಂಬಂಧವಿಲ್ಲ. ನಾನು ವ್ಯವಹಾರ ಸಂಬಂಧ ವಿದೇಶದಲ್ಲಿದ್ದೇನೆ. ಪೊಲೀಸರು ತನಿಖೆ ನಡೆಸಲಿ ಎಂದು ಮನ್ವಿತ್‌ ರೈ ಹೇಳಿದ್ದಾರೆ.

ಗುಣರಂಜನ್‌ ಶೆಟ್ಟಿಗೆ ಜೀವ ಬೆದರಿಕೆ ಇದೆ. ರಕ್ಷಣೆ ನೀಡುವಂತೆ ಜಯಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ರವಿವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಮಾಡಿದ್ದಾರೆ.

ಒಂದು ಕಾಲದಲ್ಲಿ ಮುತ್ತಪ್ಪ ರೈ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಗುಣರಂಜನ್‌ ಶೆಟ್ಟಿ ಮತ್ತು ಮನ್ವಿತ್‌ ರೈ ಅವರು ಮುತ್ತಪ್ಪ ರೈ ಮೃತಪಟ್ಟ ಬಳಿಕ ವಿರಸವಾಗಿ ದೂರವಾಗಿದ್ದರು. ಬಳಿಕ ಗುಣರಂಜನ್‌ ಶೆಟ್ಟಿ ಪ್ರತ್ಯೇಕವಾಗಿ ಜಯಕರ್ನಾಟಕ ಜನಪರ ವೇದಿಕೆ ಎನ್ನುವ ಸಂಘಟನೆ ಸ್ಥಾಪಿಸಿದ್ದರು.

ಜತೆಗೆ ಮಂಗಳೂರು ಮತ್ತು ಬೆಂಗಳೂರಿನಲ್ಲಿ ವ್ಯವಹಾರ ಮಾಡಿಕೊಂಡಿದ್ದು, ಮಾಧ್ಯಮ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು. ಹೀಗಾಗಿ ಶೆಟ್ಟಿ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಹೇಳಲಾಗಿದೆ.

Advertisement

ಬಂಟ್ವಾಳದಲ್ಲಿ ಮುತ್ತಪ್ಪ ರೈ ಆಪ್ತರ ವಿಚಾರಣೆ
ಪ್ರಕರಣದ ಬೆನ್ನಲ್ಲೇ ಮುತ್ತಪ್ಪ ರೈ ಆಪ್ತರಾದ ಬಂಟ್ವಾಳದ ಒಬ್ಬರನ್ನು ಮಂಗಳೂರು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಮನ್ವಿತ್‌ ರೈ ಮತ್ತು ಆ ವ್ಯಕ್ತಿ ಆಪ್ತರಾಗಿದ್ದರಿಂದ ಹೆಚ್ಚಿನ ಮಾಹಿತಿ ಸಿಗುವ ನಿರೀಕ್ಷೆ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಹತ್ಯೆ ಸಂಚಿಗೂ ತನಗೂ ಸಂಬಂಧವಿಲ್ಲ
ಹತ್ಯೆ ಸಂಚಿನ ಕುರಿತು ಸ್ಪಷ್ಟನೆ ನೀಡಿರುವ ಮನ್ವಿತ್‌ ರೈ, “ಕೆಲಸ ನಿಮಿತ್ತ ವಿದೇಶದಲ್ಲಿದ್ದೇನೆ. ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ನನ್ನ ಹೆಸರು ಕೇಳಿ ಬಂದಿದೆ. ಆದರೆ, ಯಾವ ಕಾರಣಕ್ಕೆ ಬಂದಿದೆ ಎನ್ನುವುದು ಗೊತ್ತಾಗಿಲ್ಲ. ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ಈ ಬಗ್ಗೆ ಯಾರು ಕೂಡ ಪೊಲೀಸರಿಗೂ ದೂರು ನೀಡಿಲ್ಲ. ನನ್ನ ವಿರುದ್ಧ ಯಾವುದೇ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿಲ್ಲ. ಆದರೂ ಯಾವ ಕಾರಣಕ್ಕೆ ನನ್ನ ಹೆಸರು ಯಾಕೆ ತಳುಕು ಹಾಕುತ್ತಿದ್ದಾರೆ’ ಎನ್ನುವುದು ಗೊತ್ತಾಗಿಲ್ಲ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next