Advertisement

ಇಂದಿನಿಂದ ದಶಪಥಕ್ಕೆ ಟೋಲ್‌ ಸಂಗ್ರಹ

11:45 PM Feb 26, 2023 | Team Udayavani |

ಮೈಸೂರು: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಟೋಲ್‌ ಸಂಗ್ರಹ ಸೋಮವಾರದಿಂದ ಆರಂಭವಾಗಲಿದೆ.

Advertisement

ಬೆಂಗಳೂರು- ನಿಡಘಟ್ಟ ನಡುವಿನ ಶೇಷಗಿರಿಹಳ್ಳಿಯ ಟೋಲ್‌ ಕಾರ್ಯಾಚರಣೆ ಆರಂಭಿಸಲಾಗಿದೆ. ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ. ರಸ್ತೆಗೆ ಶುಲ್ಕ ಸಂಗ್ರಹಿಸಲಾಗುತ್ತಿದೆ.

ಲಘು ವಾಹನಗಳ ಏಕಮುಖ ಸಂಚಾರಕ್ಕೆ 135 ರೂ. ಹಾಗೂ ಅದೇ ದಿನ ಮರು ಸಂಚಾರಕ್ಕೆ 205 ರೂ., ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್‌ಗಳ ಏಕಮುಖ ಸಂಚಾರಕ್ಕೆ 220 ರೂ. ಹಾಗೂ ಅದೇ ದಿನ ಮರು ಸಂಚಾರಕ್ಕೆ 320 ರೂ., ವಾಣಿಜ್ಯ ವಾಹನಗಳ (ಮೂರು ಆಕ್ಸೆಲ್‌) ಏಕಮುಖ ಸಂಚಾರಕ್ಕೆ 500 ರೂ. ನಿಗದಿ ಮಾಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next