Advertisement

Hajj: ಮೆಕ್ಕಾದಲ್ಲಿ ಬಿಸಿಲ ತಾಪ: ಭಾರತದ 98ಯಾತ್ರಿಕರು ಸೇರಿ ಮೃತರ ಸಂಖ್ಯೆ 1,301ಕ್ಕೆ ಏರಿಕೆ

09:55 AM Jun 24, 2024 | Team Udayavani |

ಮೆಕ್ಕಾ: ಸೌದಿ ಅರೇಬಿಯಾದಲ್ಲಿ ಹಜ್ ಯಾತ್ರಿಕರ ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಬಿಸಿಲಿನ ಬೇಗೆಯಿಂದ ಈ ವರ್ಷ 1,301 ಹಜ್ ಯಾತ್ರಿಕರು ಮೃತಪಟ್ಟಿರುವುದಾಗಿ ವರದಿಯಾಗಿದೆ.

Advertisement

ಭಾನುವಾರ, ಸೌದಿ ಆರೋಗ್ಯ ಸಚಿವ ಫಹದ್ ಬಿನ್ ಅಬ್ದುರ್ರಹ್ಮಾನ್ ಅಲ್-ಜಲಾಜೆಲ್ ಅವರು ನೀಡಿರುವ ಮಾಹಿತಿ ಪ್ರಕಾರ ಮೃತಪಟ್ಟ 1,301ರಲ್ಲಿ 83% ಯಾತ್ರಿಕರು ಅನಧಿಕೃತವಾಗಿ ಬಂದವರು ಅಂದರೆ ನೋಂದಣಿ ಮಾಡಿಕೊಳ್ಳದೆ ಬಂದವರಾಗಿದ್ದು ಇಲ್ಲಿ ಅವರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದೆ ಮೃತಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

ಘಟನೆ ಕುರಿತು ಹೇಳಿಕೆ ನೀಡಿರುವ ಸಚಿವರು, 95 ಯಾತ್ರಿಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರಲ್ಲಿ ಕೆಲವರನ್ನು ರಾಜಧಾನಿ ರಿಯಾದ್‌ನಲ್ಲಿ ಚಿಕಿತ್ಸೆಗಾಗಿ ವಿಮಾನದಲ್ಲಿ ಕಳುಹಿಸಲಾಗಿದೆ ಎಂದು ಹೇಳಿದರು. ಸೌದಿಯಲ್ಲಿ ಹಜ್ ಯಾತ್ರಿಕರು ಮೃತಪಟ್ಟರೆ ಅಂತವರನ್ನು ಗುರುತಿಸುವುದು ಅತ್ಯಂತ ಕಷ್ಟಕರವಾದ ಕೆಲಸವಾಗಿದೆ ಏಕೆಂದರೆ ಮೃತ ವ್ಯಕ್ತಿಗಳು ನೋಂದಣಿ ಮಾಡದೇ ಬಂದಿರುವುದರಿಂದ ಅವರ ಬಳಿ ಯಾವುದೇ ಅಧಿಕೃತ ದಾಖಲೆಗಳು ಇರುವುದಿಲ್ಲ ಹಾಗಾಗಿ ಗುರುತು ಪತ್ತೆಹಚ್ಚುವ ಕೆಲಸ ಕಷ್ಟ ಎಂದು ಹೇಳಿದ್ದಾರೆ. ಗುರುತು ಪತ್ತೆ ಹಚ್ಚಲಾಗದ ಯಾತ್ರಾರ್ಥಿಗಳನ್ನು ಮೆಕ್ಕಾದಲ್ಲಿ ಸಮಾಧಿ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಮೃತರಲ್ಲಿ ಈಜಿಪ್ಟ್ ನಾಗರಿಕರೇ ಹೆಚ್ಚು:
ಬಿಸಿಲಿನ ತಾಪಕ್ಕೆ ಮೆಕ್ಕಾದಲ್ಲಿ ಮೃತಪಟ್ಟವರಲ್ಲಿ 660ಕ್ಕೂ ಹೆಚ್ಚು ಈಜಿಪ್ಟ್ ನಾಗರಿಕರು ಸೇರಿದ್ದಾರೆ ಎಂದು ಕೈರೋದಲ್ಲಿ ಸೌದಿ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ 31 ಮಂದಿಯನ್ನು ಹೊರತುಪಡಿಸಿ ಎಲ್ಲರೂ ಅನಧಿಕೃತ ಯಾತ್ರಿಗಳು. ಸೌದಿ ಅರೇಬಿಯಾದಲ್ಲಿ ಹಲವಾರು ಅನಧಿಕೃತ ಹಜ್ ಯಾತ್ರಾರ್ಥಿಗಳು ಸಾವನ್ನಪ್ಪಿದ ನಂತರ, ಅನಧಿಕೃತ ಯಾತ್ರಿಕರಿಗೆ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ಸಹಾಯ ಮಾಡುತ್ತಿದ್ದ 16 ಟ್ರಾವೆಲ್ ಏಜೆನ್ಸಿಗಳ ಪರವಾನಗಿಯನ್ನು ಈಜಿಪ್ಟ್ ರದ್ದುಗೊಳಿಸಿದೆ. ಅಡಿಕ್ರಿಗಳ ಮಾಹಿತಿ ಪ್ರಕಾರ ಮೆಕ್ಕಾದ ಅಲ್-ಮುಯಿಸ್ಸಾಮ್ ಪ್ರದೇಶದಲ್ಲಿ ಇರುವ ತುರ್ತು ಸಂಕೀರ್ಣದಲ್ಲಿ ಹೆಚ್ಚಿನ ಸಾವು ಸಂಭವಿಸಿವೆ ಎಂದು ಹೇಳಿದ್ದಾರೆ.

ಈ ವರ್ಷ ಈಜಿಪ್ಟ್ ಮೆಕ್ಕಾಕ್ಕೆ 50 ಸಾವಿರಕ್ಕೂ ಹೆಚ್ಚು ಅಧಿಕೃತ ಯಾತ್ರಿಕರನ್ನು ಕಳುಹಿಸಿದೆ.

Advertisement

ಮೃತರಲ್ಲಿ ಹೆಚ್ಚುನವರು ಕಾಲ್ನಡಿಗೆ ಮಾಡಿದವರು:
ಸೌದಿ ಅಧಿಕಾರಿಗಳು ನೋಂದಣಿ ಮಾಡದೇ ಬರುತ್ತಿರುವ ಯಾತ್ರಿಕರ ಮೇಲೆ ಕಠಿಣ ಕ್ರಮ ಕೈಗೊಂಡಿದ್ದರೂ ಇದರ ಹೊರತಾಗಿಯೂ, ಹೆಚ್ಚಿನ ಸಂಖ್ಯೆಯ ಈಜಿಪ್ಟ್ ಯಾತ್ರಿಕರು ಮೆಕ್ಕಾ ಮತ್ತು ಅದರ ಸುತ್ತಮುತ್ತಲಿನ ಪವಿತ್ರ ಸ್ಥಳಗಳನ್ನು ತಲುಪುವಲ್ಲಿ ಯಶಸ್ವಿಯಾದರು. ಈ ಯಾತ್ರಾರ್ಥಿಗಳಲ್ಲಿ ಹೆಚ್ಚಿನವರು ಕಾಲ್ನಡಿಗೆಯಲ್ಲಿ ಮೆಕ್ಕಾವನ್ನು ತಲುಪಿದರು, ಇದರಿಂದಾಗಿ ಅವರು ಬಿಸಿಲಿನ ಶಾಖದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಮೃತರು ಯಾವ ದೇಶಕ್ಕೆ ಸೇರಿದವರು:
ಮಾಧ್ಯಮ ವರದಿಯ ಪ್ರಕಾರ ಮೃತರಲ್ಲಿ ಈಜಿಪ್ಟ್ ನ 660, ಇಂಡೋನೇಷ್ಯಾದ 165, ಭಾರತದ 98 ಯಾತ್ರಿಕರು ಮತ್ತು ಜೋರ್ಡಾನ್, ಟ್ಯುನಿಷಿಯಾ, ಮೊರಾಕೊ, ಅಲ್ಜೀರಿಯಾ ಮತ್ತು ಮಲೇಷ್ಯಾದ ಡಜನ್ಗಟ್ಟಲೆ ಯಾತ್ರಿಕರು ಸೇರಿದ್ದಾರೆ.

ಇದನ್ನೂ ಓದಿ: Russia: ಡಾಗೆಸ್ತಾನ್‌ನಲ್ಲಿ ಭಯೋತ್ಪಾದಕರ ದಾಳಿ, ಪಾದ್ರಿ, ಪೊಲೀಸರು ಸೇರಿ 15 ಮಂದಿ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next