Advertisement
ಅತೀ ಹೆಚ್ಚು 31 ಕ್ರೀಡಾಪಟುಗಳನ್ನು ಒಲಿಂಪಿಕ್ಸ್‌ಗೆ ಕಳುಹಿಸುವ ಹರ್ಯಾಣ ಸರಕಾರ, ತನ್ನ ರಾಜ್ಯದ ಸ್ವರ್ಣ ವಿಜೇತರಿಗೆ 6 ಕೋಟಿ ರೂ.ಗಳ ದೊಡ್ಡ ಮೊತ್ತವನ್ನು ನೀಡಲು ನಿರ್ಧರಿಸಿರುವುದು ವಿಶೇಷ. ಕೇವಲ 3 ಕ್ರೀಡಾಪಟುಗಳನ್ನು ಹೊಂದಿರುವ ಪಶ್ಚಿಮ ಬಂಗಾಲ, ಸ್ವರ್ಣ ವಿಜೇತರಿಗೆ ನೀಡುವುದು ಕೇವಲ 25 ಲಕ್ಷ ರೂ. ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಬಂಗಾಲದ ಕ್ರೀಡಾ ಸಚಿವ ಎಂಬುದಿಲ್ಲಿ ಉಲ್ಲೇಖನೀಯ!
ಹರ್ಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್ ಮಾಜಿ ಒಲಿಂಪಿಯನ್ ಎಂಬುದನ್ನು ಮರೆಯುವಂತಿಲ್ಲ. ಇವರು ಚಿನ್ನ ಗೆದ್ದವರಿಗೆ 6 ಕೋಟಿ ರೂ., ಬೆಳ್ಳಿ ವಿಜೇತರಿಗೆ 4 ಕೋಟಿ ರೂ., ಕಂಚು ಪಡೆದವರಿಗೆ 2.5 ಕೋಟಿ ರೂ. ನೀಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ರಾಜ್ಯದ ಒಲಿಂಪಿಯನ್‌ಗಳಿಗೆ ಸಿದ್ಧತೆ ಹಾಗೂ ಖರ್ಚಿಗಾಗಿ ತಲಾ 5 ಲಕ್ಷ ರೂ. ನೀಡಿ ಪ್ರೋತ್ಸಾಹಿಸಿದೆ. ಉತ್ತರಪ್ರದೇಶ, ಒಡಿಶಾ ಮತ್ತು ಚಂಡೀಗಢದ ಚಿನ್ನ ವಿಜೇತರಿಗೂ 6 ಕೋಟಿ ರೂ. ಬಹುಮಾನ ಲಭಿಸಲಿದೆ. ಕರ್ನಾಟಕ, ಗುಜರಾತ್ ತಲಾ 5 ಕೋಟಿ ರೂ. ಘೋಷಿಸಿವೆ.