Advertisement
ಯುರೋಪ್‌ನ ಬಹುತೇಕ ದೇಶಗಳಲ್ಲಿ ಕೊರೊನಾ ಸೋಂಕಿನಿಂದಾಗಿ ಎಲ್ಲ ಚಟುವಟಿ ಕೆಗಳು ಸ್ಥಗಿತಗೊಂಡಿವೆ. ಈ ಸೋಂಕು ಇನ್ನೂ ನಿಯಂತ್ರಣಕ್ಕೆ ಬಾರದ ಕಾರಣ ಟೋಕಿಯೊ ಒಲಿಂಪಿಕ್ಸ್ ಕೂಟವನ್ನು ಮುಂದೂಡುವ ಅಥವಾ ರದ್ದುಗೊಳಿಸುವ ಬಗ್ಗೆ ಯಾವುದೇ ನಿರ್ಧಾರವನ್ನು ಸಭೆ ತೆಗೆದುಕೊಂಡಿಲ್ಲ.
Related Articles
Advertisement
ಸಿದ್ಧತೆ ಮುಂದುವರಿಯಲಿದೆಕೊರೊನಾ ಭೀತಿಯಿದ್ದರೂ ಒಲಿಂಪಿಕ್ಸ್‌ನ ಕ್ರೀಡಾಜ್ಯೋತಿ ಬೆಳಗಿಸಲು ಬೇಕಾದ ಎಲ್ಲ ಸಿದ್ಧತೆಗಳು ಮುಂದುವರಿಯಲಿವೆ ಎಂದು ಜಪಾನ್‌ನ ಪ್ರಧಾನಮಂತ್ರಿ ಶಿಂಜೊ ಅಬೆ ಮತ್ತು ಐಒಸಿ ಮುಖ್ಯಸ್ಥ ಥಾಮಸ್ ಬಾಕ್ ಹೇಳಿದ್ದಾರೆ. ಆದರೆ ಜಪಾನ್‌ನಲ್ಲಿ ಸದ್ಯ ಕ್ರೀಡಾ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದೆ. ಪ್ರೀಮಿಯರ್ ಲೀಗ್‌ನಿಂದ ಹಿಡಿದು ಎನ್‌ಬಿಎ ಬಾಸ್ಕೆಟ್‌ಬಾಲ್ ಪಂದ್ಯಾಟವನ್ನು ರದ್ದು ಮಾಡಲಾಗಿದೆ. ಇದೇ ವೇಳೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಒಲಿಂಪಿಕ್ ಕೂಟವನ್ನು ತಡೆಹಿಡಿಯುವುದು ಸೂಕ್ತವೆಂಬ ಸಲಹೆ ನೀಡಿದ್ದಾರೆ. “ಕಠಿನ ನಿರ್ಧಾರ ಸದ್ಯಕ್ಕಿಲ್ಲ’
ಟೋಕಿಯೊ ಒಲಿಂಪಿಕ್ಸ್‌ಗೆ ಸಂಬಂಧಿಸಿ ಸದ್ಯ ಕಠಿನ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಹೇಳಿದೆ. ಗೇಮ್ಸ್ ಆರಂಭವಾಗಲು ಇನ್ನೂ ನಾಲ್ಕು ತಿಂಗಳು ಇದೆ. ಒಲಿಂಪಿಕ್ ಗೇಮ್ಸ್ ಸಂಘಟಿಸಲಸು ನಾವು ಪೂರ್ಣ ಬದ್ಧರಾ ಗಿದ್ದೇವೆ. ಈ ಹಂತದಲ್ಲಿ ಕಠಿನ ನಿರ್ಧಾರದ ಅಗತ್ಯವಿಲ್ಲ ಎಂದು ಐಒಸಿ ತಿಳಿಸಿದೆ.