Advertisement

ಒಲಿಂಪಿಕ್ಸ್; ಸೆಮಿಫೈನಲ್ ಕಾದಾಟ-ಭಾರತದ ವನಿತೆಯರ ತಂಡಕ್ಕೆ ಸೋಲು, ಕಂಚಿನ ಪದಕಕ್ಕೆ ಸೆಣಸಾಟ

05:37 PM Aug 04, 2021 | Team Udayavani |

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಸೆಮಿ ಫೈನಲ್ ಪ್ರವೇಶಿಸಿ ಒಂದು ಹಂತದ ಇತಿಹಾಸ ನಿರ್ಮಿಸಿದ್ದ ಭಾರತದ ವನಿತೆಯರ ಹಾಕಿ ತಂಡ ಬುಧವಾರ (ಆಗಸ್ಟ್ 04) ಅರ್ಜೆಂಟೀನಾದ ವಿರುದ್ಧ 1-2 ಗೋಲುಗಳ ಅಂತರದಿಂದ ಪರಾಜಯಗೊಂಡಿದ್ದು, ಫೈನಲ್ ಪ್ರವೇಶಿಸುವ ಕನಸು ಭಗ್ನಗೊಂಡಂತಾಗಿದೆ.

Advertisement

ಇದನ್ನೂ ಓದಿ:ಹುಬ್ಬಳ್ಳಿ : ಕಾರಾಗೃಹದಿಂದ ಪರಾರಿಯಾಗಿದ್ದ ಕೊಲೆ ಆರೋಪಿ ಶವವಾಗಿ ಪತ್ತೆ

ಆದರೆ ಭಾರತದ ವನಿತೆಯರ ಹಾಕಿ ತಂಡ ಬ್ರಿಟನ್ ವಿರುದ್ಧ ಕಂಚಿನ ಪದಕಕ್ಕಾಗಿ ಸೆಣಸಲಿದೆ. ಸತತ ಮೂರು ಪಂದ್ಯಗಳಲ್ಲಿ ಸೋತ ನಿರ್ಗಮನದ ಹಂತದಲ್ಲಿದ್ದ ರಾಣಿ ರಾಮ್ ಪಾಲ್ ತಂಡ ಸೆಮಿಫೈನಲ್ ತಲುಪಿದ್ದೆ ಒಂದು ಪವಾಡ. ಇದರೊಂದಿಗೆ ಭಾರತದ ಹಾಕಿ ವನಿತೆಯರ ತಂಡ ಟೋಕಿಯೊದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಲಿದೆ ಎಂಬ ಭರವಸೆ ಮೂಡಿಸಿತ್ತು.

ಇಂದು ಮಧ್ಯಾಹ್ನ ಬಲಿಷ್ಠ ಅರ್ಜೆಂಟೀನಾ ವಿರುದ್ಧ ಭಾರತದ ವನಿತೆಯರ ಹಾಕಿ ತಂಡ ಸೆಮಿಫೈನಲ್ ನಲ್ಲಿ ಸಮರ್ಥವಾಗಿಯೇ ಎದುರಿಸಿತ್ತು. ಸೆಮಿಫೈನಲ್ ಪಂದ್ಯದ ಎರಡನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಗೋಲು ದಾಖಲಿಸಿದ್ದರು.

ಭಾರತದ ವನಿತೆಯರ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದು, ಅರ್ಜೆಂಟೀನಾ ತಂಡದ ನಾಯಕಿ ಮರಿಯಾ ಬ್ಯಾರಿಯೊನ್ಯುವೊ. ಪಂದ್ಯದ 18ನೇ ಹಾಗೂ 36ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಮರಿಯಾ ಅರ್ಜೆಂಟೀನಾ ಗೆಲುವಿನ ಸೂತ್ರಧಾರಿಯಾಗಿ ಹೊರಹೊಮ್ಮಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next