Advertisement

ಸಾರ್ವಜನಿಕ ಸೇವೆಗೆ ಲಭ್ಯವಾಗದ  ಶೌಚಾಲಯ

06:05 AM Sep 28, 2018 | Team Udayavani |

ಕೋಟ: ಸಾಲಿಗ್ರಾಮ ಮುಖ್ಯ ಪೇಟೆಯ ಬಸ್ಸುನಿಲ್ದಾಣದ ಬಳಿ ಎಸ್‌.ಎಫ್‌.ಸಿ.ಹಾಗೂ 14ನೇ ಹಣಕಾಸು ನಿಧಿಯಿಂದ  20ಲಕ್ಷ ವೆಚ್ಚದಲ್ಲಿ ವ್ಯವಸ್ಥಿತವಾಗಿ ನಿರ್ಮಾಣಗೊಂಡ  ಸಾರ್ವಜನಿಕ ಶೌಚಾಲಯ ಕಾಮಗಾರಿ ಮುಗಿದು ಐದು ತಿಂಗಳಾದರು ಸಾರ್ವಜನಿಕ ಸೇವೆಗೆ ಲಭ್ಯವಾಗಿಲ್ಲ. ಈ ಕುರಿತು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಪ.ಪಂ. ಆಗಿ ಹಲವು ವರ್ಷ ಕಳೆದರು ಸಾಲಿಗ್ರಾಮದ ಮುಖ್ಯ ಪೇಟೆಯಲ್ಲಿ ಇದುವರೆಗೆ ಸಾರ್ವಜನಿಕ ಶೌಚಾಲಯ ಇಲ್ಲದಿರುವುದು ಆಡಳಿತ ವ್ಯವಸ್ಥೆಗೆ ಕಪ್ಪು ಚುಕ್ಕೆಯಂತಿತ್ತು ಹಾಗೂ ಅಕ್ಕ-ಪಕ್ಕದ ಮನೆಗಳನ್ನು ಆಶ್ರಯಿಸಬೇಕಾಗಿತ್ತು. ಇದೀಗ ವ್ಯವಸ್ಥಿತ ಶೌಚಾಲಯ ನಿರ್ಮಾಣವಾದ್ದರಿಂದ ಈ ಸಮಸ್ಯೆ ದೂರಾಗುವ ಭರವಸೆ ಮೂಡಿತ್ತು.

ಆದಷ್ಟುಶೀಘ್ರ ಇದನ್ನು ಉದ್ಘಾಟನೆಗೊಳಿಸಿ ನಗರದ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಗಮನಹರಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

ಅಕ್ಟೋಬರ್‌ ಮೊದಲ ವಾರದಲ್ಲಿ ಸಾರ್ವಜನಿಕ ಸೇವೆಗೆ 
ಚುನಾವಣೆ ಕಾರಣದಿಂದ ಶೌಚಾಲಯ ಉದ್ಘಾಟನೆ  ತಡವಾಯಿತು. ಇದೀಗ ಖಾಸಗಿ ಕಂಪನಿಯೊಂದಕ್ಕೆ  ನಿರ್ವಹಣೆಯ ಜವಬ್ದಾರಿ ನೀಡಲಾಗಿದೆ. ಒಂದೆರಡು ದಿನದಲ್ಲಿ ಒಡಂಬದಿಕೆ ಮುಕ್ತಾಯಗೊಳ್ಳಲಿದ್ದು, ಅಕ್ಟೋಬರ್‌ ಮೊದಲ ವಾರದಿಂದ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ.
– ಶ್ರೀಪಾದ್‌ ಪುರೋಹಿತ್‌, 
ಮುಖ್ಯಾಧಿಕಾರಿಗಳು , ಸಾಲಿಗ್ರಾಮ ಪ.ಪಂ

Advertisement

Udayavani is now on Telegram. Click here to join our channel and stay updated with the latest news.

Next