Advertisement

ಟೋಗೋ: ಐವರು ಭಾರತೀಯರ ಬಿಡುಗಡೆ; ಸುಷ್ಮಾ ಖುಷ್‌

12:32 PM Feb 02, 2017 | Team Udayavani |

ಹೊಸದಿಲ್ಲಿ : ಸದಾ ಮಾನವೀಯ ಕಾಳಜಿ ತೋರುವುದಕ್ಕೆ ಹೆಸರುವಾಸಿಯಾಗಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು ಪಶ್ಚಿಮ ಆಫ್ರಿಕದ ಟೋಗೊದಲ್ಲಿನ ಜೈಲಿನಲ್ಲಿ ಬಂಧಿಗಳಾಗಿದ್ದ ಐವರು ಭಾರತೀಯರನ್ನು ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಸಫ‌ಲರಾಗಿದ್ದಾರೆ. 

Advertisement

ಈ ನಿಟ್ಟಿನಲ್ಲಿ  ಸಕಾಲದಲ್ಲಿ ಪರಿಣಾಮಕಾರಿಯಾಗಿ ಶ್ರಮಿಸಿರುವ ಭಾರತೀಯ ದೂತಾವಾಸದ ಅಧಿಕಾರಿಗಳನ್ನು ಸುಶ್ಮಾ ಸ್ವರಾಜ್‌ ಪ್ರಶಂಸಿಸಿದ್ದಾರೆ. 

2013ರಲ್ಲಿ ವ್ಯಾಪಾರಿ ನೌಕೆಯಲ್ಲಿ ಉದ್ಯೋಗಿಗಳಾಗಿದ್ದ ಐವರು ಭಾರತೀಯರನ್ನು ಟೋಗೋದ ಕರಾವಳಿ ಭಾಗದಲ್ಲಿ ಕಡಲ್ಗಳ್ಳತನದ ದಾಳಿಯಲ್ಲಿ ಶಾಮೀಲಾಗಿದ್ದರೆಂಬ ಆರೋಪದ ಮೇಲೆ ಬಂಧಿಸಲಾಗಿತ್ತು. ಆ ಸಂದರ್ಭದಲ್ಲಿ ಅವರು ಮುಂಬಯಿಯಿಂದ ದಕ್ಷಿಣ ಆಫ್ರಿಕಕ್ಕೆ ತೆರಳುವ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next